ವೀರಶೈವ ಮಹಾಸಭಾ ರಾಜಕೀಯ ಪುಡಾರಿಗಳ ಸಂಘಟನೆ: ಎಸ್.ಎಂ ಜಾಮದಾರ್ ಕಿಡಿ
ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಎಂದು ಹೇಳುತ್ತಾರೆ, ಅವರು ಹೇಳಿದ ತಕ್ಷಣ ಎರಡು ಒಂದಾಗುತ್ತಾ ಎಂದು ಎಸ್ ಎಂ ಜಾಮದಾರ್ ಕಿಡಿ ಕಾರಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿ ವೀರಶೈವ ಮತ್ತು ಲಿಂಗಾಯತ ಫೈಟ್ ಶುರುವಾಗಿದ್ದು, ವೀರಶೈವ ಮಹಾಸಭಾ ರಾಜಕೀಯ ಪುಡಾರಿಗಳ ಸಂಘಟನೆ ಎಂದು ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಜಾಮದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀರಶೈವದಲ್ಲಿ ಇರುವವರು ಬೇರೆ ಬೇರೆ ಪಕ್ಷದ ಪುಡಾರಿಗಳು. ವೀರಶೈವ ಮತಗಳು ಬೇಕು, ಲಿಂಗಾಯತ ಮತಗಳು ಬೇಕು. ಆ ಎರಡೂ ವೋಟ್‌ಗಳು ಬಂದ್ರೆ ಮಾತ್ರ ಆರಿಸಿ ಬರುತ್ತೇವೆ. ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಅಧಿವೇಶನ ನಡೀತಿದೆ. ವೀರಶೈವ ಲಿಂಗಾಯತ ಮಹಾಸಭಾದವರು ಎರಡು ಒಂದೇ ಎಂದು ಹೇಳ್ತಾರೆ, ಆದ್ರೆ ನಿಮ್ಮ ಗುರುಗಳು ಏನು ಹೇಳುತ್ತಿದ್ದಾರೆ ಎಂದು ಎಸ್.ಎಂ ಜಾಮದಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನಲ್ಲಿ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.