ಚೇತರಿಸುತ್ತಿರುವ ಪ್ರವಾಸೋದ್ಯಮ, ಪ್ರವಾಸಿಗರನ್ನು ಸ್ವಾಗತಿಸುತ್ತಿರುವ ರೆಸಾರ್ಟ್, ಹೋಂ ಸ್ಟೇ ಮಾಲೀಕರು

ಕೊರೊನಾ ಮಹಾಮಾರಿ ಕಾಟ ಕಳೆದ ಮೂರು ವರ್ಷಗಳಿಂದ ಪದೇ ಪದೇ ವಕ್ಕರಿಸಿದ್ರಿಂದ ಪ್ರವಾಸೋದ್ಯಮಕ್ಕೆ ಭಾರೀ ಏಟು ಬಿದ್ದಿತ್ತು. ಹೋಂ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಮಾಲಕರು ಕೂಡಾ ಭಾರೀ ನಷ್ಟದಲ್ಲಿ ದಿನದೂಡುತ್ತಿದ್ದರು. ಆದರೆ, ಇದೀಗ ಕೊಂಚ ಕೊಂಚವೇ ಪ್ರವಾಸೋದ್ಯಮ ಗರಿಗೆದರಲು ಆರಂಭಿಸಿದೆ. 

First Published Feb 10, 2022, 2:24 PM IST | Last Updated Feb 10, 2022, 5:33 PM IST

ಕೊರೊನಾ ಮಹಾಮಾರಿ ಕಾಟ ಕಳೆದ ಮೂರು ವರ್ಷಗಳಿಂದ ಪದೇ ಪದೇ ವಕ್ಕರಿಸಿದ್ರಿಂದ ಪ್ರವಾಸೋದ್ಯಮಕ್ಕೆ ಭಾರೀ ಏಟು ಬಿದ್ದಿತ್ತು. ಹೋಂ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಮಾಲಕರು ಕೂಡಾ ಭಾರೀ ನಷ್ಟದಲ್ಲಿ ದಿನದೂಡುತ್ತಿದ್ದರು. ಆದರೆ, ಇದೀಗ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಲಾರಂಭಿಸಿದ್ದು, ಕೊಂಚ ಕೊಂಚವೇ ಪ್ರವಾಸೋದ್ಯಮ ಗರಿಗೆದರಲು ಆರಂಭಿಸಿದೆ. ಈ ಕಾರಣದಿಂದ ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲಕರು ಇನ್ನಷ್ಟು ಪ್ರವಾಸಿಗರನ್ನು ಸ್ವಾಗತಿಸಲಾರಂಭಿಸಿದ್ದಾರೆ. 

Karwar: ಘನ ತ್ಯಾಜ್ಯ ವಿಲೇವಾರಿ ಘಟಕದಿಂದ ಪ್ರಕೃತಿ-ಪಕ್ಷಿ ಸಂಕುಲಕ್ಕೆ ಕಂಟಕ

ಕೊರೊನಾ ಮಹಾಮಾರಿ ಪ್ರತಿಯೊಂದು ಕ್ಷೇತ್ರಕ್ಕೂ ಭಾರೀ ಏಟು ನೀಡಿದ್ದು, ಕಳೆದ 3 ವರ್ಷಗಳಿಂದ ಹೋಂ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಮಾಲಕರು ಭಾರೀ ನಷ್ಟ ಎದುರಿಸಿದ್ದರು. ತಮ್ಮ ಕಾರ್ಮಿಕರಿಗೂ ವೇತನ ನೀಡದಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಜನವರಿ ತಿಂಗಳಲ್ಲಿ ಮತ್ತೆ ವಕ್ಕರಿಸಿದ್ದ ಕೊರೊನಾ ಪೂರ್ಣ ಲಾಕ್‌ಡೌನ್‌ಗೆ ಕಾರಣವಾಗುತ್ತದೆ ಎಂದು ಭೀತಿ ಸೃಷ್ಠಿಸಿದ್ದರಿಂದ ಮತ್ತೆ ಪ್ರವಾಸಿಗರ ಎಂಟ್ರಿ ಕಡಿಮೆಯಾಗಿತ್ತು. ಆದರೆ, ಇದೀಗ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗವಾದ ಗೋಕರ್ಣ, ಮುರುಡೇಶ್ವರ, ಕುಮಟಾ, ಕಾರವಾರ ಹಾಗೂ ಮಲೆನಾಡು ಭಾಗವಾದ ಜೊಯಿಡಾ ಮತ್ತು ದಾಂಡೇಲಿಗೆ ಕೊಂಚ ಕೊಂಚವೇ ಪ್ರವಾಸಿಗರು ಭೇಟಿ ನೀಡಲು ಪ್ರಾರಂಭಿಸಿದ್ದಾರೆ.

ರಾಜ್ಯ ಹಾಗೂ ಹೊರ ರಾಜ್ಯದಿಂದ ಆಗಮಿಸಿದ ಪ್ರವಾಸಿಗರು ಬೋಟಿಂಗ್, ರಿವರ್ ರ್ಯಾಫ್ಟಿಂಗ್, ಟ್ರಕ್ಕಿಂಗ್ ಹಾಗೂ ಜಂಗಲ್ ವಾಕ್ ನಡೆಸುತ್ತಾ ಗೆಳೆಯರು ಹಾಗೂ ಕುಟುಂಬದ ಜತೆ ಉತ್ತಮ ಸಮಯ ಕಳೆಯುತ್ತಿದ್ದಾರೆ. ಇದರಿಂದಾಗಿ ನಷ್ಟದಲ್ಲಿದ್ದ ಪ್ರವಾಸೋದ್ಯಮ ಕ್ಷೇತ್ರ ಮತ್ತೆ ರಿಕವರಿಯಾಗುತ್ತಿದ್ದು, ಹೋಂ ಸ್ಟೇ, ರೆಸಾರ್ಟ್ ಮಾಲಕರು ಪ್ರವಾಸಿರನ್ನು ಸ್ವಾಗತಿಸಲಾರಂಭಿಸಿದ್ದಾರೆ. 

ಈ ಹಿಂದೆ ಕೊರೊನಾ ಕಾಟ ಜೋರಿದ್ದರಿಂದ ಉತ್ತರಕನ್ನಡ ಜಿಲ್ಲಾಡಳಿತ ಜಿಲ್ಲೆಗೆ ಆಗಮಿಸುವ ಪ್ರತಿಯೋರ್ವ ಪ್ರವಾಸಿಗರಿಗೂ ಹಾಗೂ ರೆಸಾರ್ಟ್, ಹೋಂ ಸ್ಟೇ ಮಾಲಕರಿಗೂ ಪ್ರತೀ 10ದಿನಕ್ಕೊಮ್ಮೆ ಟೆಸ್ಟಿಂಗ್ ನಡೆಸುವುದಾಗಿ ಸೂಚಿಸಿತ್ತು. ಆದ್ರೆ, ಸರಕಾರ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ತೆರವುಗೊಳಿಸಿದ ಬಳಿಕ ಟೆಸ್ಟಿಂಗ್ ವಿಚಾರವನ್ನೂ ಕೈಬಿಟ್ಟಿತ್ತು. ಸದ್ಯಕ್ಕೆ ಬಾರ್ಡರ್‌ಗಳಲ್ಲಿ ಕೇರಳ, ಮಹಾರಾಷ್ಟ್ರ ಹಾಗೂ ಗೋವಾದಿಂದ ಬರುವಂತಹ ಪ್ರವಾಸಿಗರಿಗೆ ಮಾತ್ರ ಆರ್‌ಟಿಪಿಸಿಆರ್ ರಿಪೋರ್ಟ್ ಕಡ್ಡಾಯ ಅನ್ನೋದು ಮುಂದುವರಿಸಲಾಗಿದೆ. ಈ ಕಾರಣದಿಂದ ವಿವಿಧೆಡೆಯಿಂದ ಪ್ರವಾಸಿಗರು ಇದೀಗ ಜಿಲ್ಲೆಗೆ ಬರಲಾರಂಭಿಸಿದ್ದು, ಇಷ್ಟು ದಿನಗಳ ಪ್ರವಾಸಿಗರಿಲ್ಲದೇ ನಷ್ಟದಿಂದಲೇ ಸಾಗುತ್ತಿದ್ದ ರೆಸಾರ್ಟ್, ಹೋಂ ಸ್ಟೇ ಹಾಗೂ ಹೋಟೆಲ್‌ಗಳು ಇದೀಗ ಮತ್ತೆ ತುಂಬಲಾರಂಭಿಸಿದ್ದು, ಇವುಗಳನ್ನು ನಂಬಿಕೊಂಡಿದ್ದ ಕೆಲವು ಸಣ್ಣ ಸಣ್ಣ ಅಂಗಡಿಗಳು ಕೂಡಾ ಮತ್ತೆ ನಡೆಯಲಾರಂಭಿಸಿವೆ. 

Video Top Stories