Asianet Suvarna News Asianet Suvarna News

ಮುಂದಿನ ಚುನಾವಣೆಯಲ್ಲಿ ಬಿಸಿ ಮುಟ್ಟಿಸ್ತೀವಿ, ಬಿಜೆಪಿಗೆ ಮೀನುಗಾರರ ವಾರ್ನಿಂಗ್

- ಮೀನುಗಾರರಿಗೆ ತಲುಪದ ಲಾಕ್‌ಡೌನ್ ಪ್ಯಾಕೇಜ್

- ತೌಕ್ಟೆ ಚಂಡಮಾರುತದಿಂದ ಮೀನುಗಾರರ ಬದುಕು ಅತಂತ್ರ

- ಮುಂದಿನ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ 

ಉತ್ತರ ಕನ್ನಡ (ಮೇ. 28): ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯದಾದ್ಯಂತ ಲಾಕ್‌ಡೌನ್ ಘೋಷಿಸಿದೆ. ಈ ಸಲುವಾಗಿ ವಿವಿಧ ಕ್ಷೇತ್ರಗಳ ಕಾರ್ಮಿಕರಿಗೆ ಸಹಾಯಧನದ ಪ್ಯಾಕೇಜ್ ಕೂಡಾ ನೀಡಿದೆ. ಆದರೆ ಈ ಪ್ಯಾಕೇಜ್ ಎಲ್ಲಾ ವರ್ಗದವರಿಗೂ ಸಿಕ್ಕಿಲ್ಲ ಎಂಬ ಅಪಸ್ವರ ಕೇಳಿ ಬಂದಿದೆ.  ತೌಕ್ಟೆ ಚಂಡಮಾರುತದ ಏಟಿನಿಂದ ಸೋತಿರುವ ಕರಾವಳಿಯ ಮೀನುಗಾರರನ್ನು ಸರಕಾರ ನಿರ್ಲಕ್ಷಿಸಿದೆ. ಇದರಿಂದ ರೊಚ್ಚಿಗೆದ್ದಿರುವ ಮೀನುಗಾರರು ಬಿಜೆಪಿ ಮುಖಂಡರನ್ನು ಮುಂದಿನ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.‌

'ನಮಗೂ ಪ್ಯಾಕೇಜ್ ಕೊಡಿ' ಸಿಎಂಗೆ ಪತ್ರಿಕಾ ವಿತರಕರ ಮನವಿ

Video Top Stories