ಆನೆಕಾಲು ರೋಗದಿಂದ ಉತ್ತರ ಕನ್ನಡ ಮುಕ್ತ, 2017 ರ ನಂತರ ನೂತನ ಪ್ರಕರಣಗಳಿಲ್ಲ..!

ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಜನರನ್ನು ಕಾಡುತ್ತಿದ್ದ ಆನೆಕಾಲು ರೋಗ ಇದೀಗ ಕೊಂಚ ಕೊಂಚವೇ ನಿರ್ಮೂಲನೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಬಳಿಕ ಇದೀಗ ಉತ್ತರಕ‌ನ್ನಡ ಜಿಲ್ಲೆಯೂ ಆನೆ ಕಾಲು ರೋಗದಿಂದ ಮುಕ್ತವಾಗಿದೆ. 
 

First Published May 4, 2022, 10:57 AM IST | Last Updated May 4, 2022, 10:57 AM IST

ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಜನರನ್ನು ಕಾಡುತ್ತಿದ್ದ ಆನೆಕಾಲು ರೋಗ ಇದೀಗ ಕೊಂಚ ಕೊಂಚವೇ ನಿರ್ಮೂಲನೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಬಳಿಕ ಇದೀಗ ಉತ್ತರಕ‌ನ್ನಡ ಜಿಲ್ಲೆಯೂ ಆನೆ ಕಾಲು ರೋಗದಿಂದ ಮುಕ್ತವಾಗಿದೆ. 

ಇ-ತ್ಯಾಜ್ಯ ನಿರ್ವಹಣೆಗೆ ಹೊಸ ಹೆಜ್ಜೆ: ಇತರ ನಗರಗಳಿಗೆ ಮಾದರಿಯಾದ ಕಾರವಾರ ನಗರಸಭೆ!

ಜಿಲ್ಲೆಯ 11 ತಾಲೂಕುಗಳ ಪೈಕಿ ಕರಾವಳಿ ಭಾಗದಲ್ಲಿರುವ 5 ತಾಲೂಕುಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ರೋಗ ಇತ್ತೀಚಿನ ವರ್ಷಗಳಲ್ಲಿ ಯಾವುದೇ ನೂತನ ಪ್ರಕರಣದ ರೂಪದಲ್ಲಿ ಕಾಣದ್ದರಿಂದ ಆರೋಗ್ಯ ಇಲಾಖೆ ಉತ್ತರಕನ್ನಡ ಜಿಲ್ಲೆಯನ್ನು ಆನೆ ಕಾಲು ರೋಗ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಿದೆ.  ಜಿಲ್ಲೆಯ 11 ತಾಲೂಕುಗಳ ಪೈಕಿ ಕರಾವಳಿ ಭಾಗದಲ್ಲಿರುವ 5 ತಾಲೂಕುಗಳಲ್ಲಿ ಅದರಲ್ಲೂ ಗೋಕರ್ಣ ಹಾಗೂ ಭಟ್ಕಳ ಭಾಗದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಪ್ರಕರಣ ಇತ್ತೀಚಿನ ವರ್ಷಗಳಲ್ಲಿ ಯಾವುದೇ ನೂತನ ಪ್ರಕರಣದ ರೂಪದಲ್ಲಿ ಕಾಣಿಸಿಲ್ಲ. 2021ರಲ್ಲಿ ನಡೆಸಲಾದ ಸರ್ವೆಯ ಪ್ರಕಾರ ಉತ್ತರಕನ್ನಡ ಜಿಲ್ಲೆಯಲ್ಲಿ 2017ರಲ್ಲಿ ಕಾಣಿಸಿದ್ದ 173 ಪ್ರಕರಣಗಳು ಮಾತ್ರ ದಾಖಲಾಗಿವೆ ಹೊರತು ಯಾವುದೇ ನೂತನ ಪ್ರಕರಣಗಳು ಆ ಬಳಿಕ ವರದಿಯಾಗಿಲ್ಲ. ಇನ್ನು ಜಿಲ್ಲೆಯ ಕಾರವಾರಲ್ಲಿ 4, ಅಂಕೋಲಾದಲ್ಲಿ 6, ಕುಮಟಾದಲ್ಲಿ 54, ಹೊನ್ನಾವರದಲ್ಲಿ 20, ಭಟ್ಕಳದಲ್ಲಿ 89 ಹಳೇಯ ಪ್ರಕರಣಗಳು ಮಾತ್ರ ಇವೆ ಹೊರತು ಯಾವುದೇ ನೂತನ ಪ್ರಕರಣಗಳು ವರದಿಯಾಗಿಲ್ಲ ಅಂತಾರೆ ಅಧಿಕಾರಿಗಳು. 

ಸಾರ್ವಜನಿಕ ಕುಂದುಕೊರತೆ ಪರಿಹರಿಸಲು ಉತ್ತರ ಕನ್ನಡ ಡಿಸಿಯಿಂದ ಹೊಸ ಜನಪರ ಕಾರ್ಯಕ್ರಮ

ಇನ್ನು ಸೊಳ್ಳೆಯಿಂದ ಹರಡುವ ಆನೆಕಾಲು ರೋಗದಲ್ಲಿ ಗಂಭೀರ ರೂಪವಾದ ಹೈಡ್ರೋಸೀಲ್ ಪ್ರಕರಣಗಳೂ ಕಾಣುತ್ತಿದ್ದು, 2004ರಿಂದ ಇಂತಹ 428 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ. ಪ್ರತೀ ವರ್ಷ ಆನೆಕಾಲು ರೋಗ ಅಥವಾ ಫೈಲೇರಿಯಾ ಕಾಣಿಸುತ್ತಿದ್ದ ಪ್ರದೇಶ ಹಾಗೂ ಕುಟುಂಬಗಳ ರಕ್ತದ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಈ ವರ್ಷ 60,000 ಜನರ‌ನ್ನು ಪರೀಕ್ಷಿಸಿ ಅವರ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡೋ ಗುರಿಯನ್ನು‌ ಜಿಲ್ಲಾ ಆರೋಗ್ಯ ಇಲಾಖೆ ಹೊಂದಿದೆ. 

ಈ ಹಿನ್ನೆಲೆ ಪ್ರತೀ ತಿಂಗಳು 6,000 ರಕ್ತದ ಮಾದರಿಗಳನ್ನು ಪರೀಕ್ಷಿಸಿ ಹೊಸ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಕರಾವಳಿ ತೀರ ಪ್ರದೇಶಗಳಲ್ಲಿ ಎಲ್ಲೆಲ್ಲಿ ಈ ಸೋಂಕು ಹಬ್ಬುತ್ತದೆ ಎಂದು ಗುರುತು ಮಾಡಲಾಗಿದ್ದು, ಆ ಪ್ರದೇಶದಲ್ಲಿ ರಾತ್ರಿ ವೇಳೆ ರಕ್ತ ನಡೆಸಿದ ರಕ್ತ ಪರೀಕ್ಷೆಯಲ್ಲಿ ಮಾತ್ರ ಕ್ರಿಮಿ ಕಾಣೋದ್ರಿಂದ ತಪಾಸಣೆಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.