Karwar: ಇ-ತ್ಯಾಜ್ಯ ನಿರ್ವಹಣೆಗೆ ಹೊಸ ಹೆಜ್ಜೆ: ಇತರ ನಗರಗಳಿಗೆ ಮಾದರಿಯಾದ ಕಾರವಾರ ನಗರಸಭೆ!

ತ್ಯಾಜ್ಯ ವಿಲೇವಾರಿ, ಡಂಪಿಂಗ್ ಯಾರ್ಡ್ ವಿಂಗಡನೆ, ಪುನರ್‌ ಬಳಕೆ ಸೇರಿದಂತೆ ಸ್ವಚ್ಛತೆಗಾಗಿ ಸರಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತದೆ. ಆದರೂ, ರಾಜ್ಯದ‌ ಹಲವು ಜಿಲ್ಲೆ ಹಾಗೂ ನಗರಗಳಿಗೆ ವಿವಿಧ ಬಗೆಯ ತ್ಯಾಜ್ಯ ವಿಲೇವಾರಿಯೇ ಇಂದಿಗೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

karwar municipality make e waste management system gvd

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಮೇ.01): ತ್ಯಾಜ್ಯ ವಿಲೇವಾರಿ, ಡಂಪಿಂಗ್ ಯಾರ್ಡ್ ವಿಂಗಡನೆ, ಪುನರ್‌ ಬಳಕೆ ಸೇರಿದಂತೆ ಸ್ವಚ್ಛತೆಗಾಗಿ ಸರಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತದೆ. ಆದರೂ, ರಾಜ್ಯದ‌ ಹಲವು ಜಿಲ್ಲೆ ಹಾಗೂ ನಗರಗಳಿಗೆ ವಿವಿಧ ಬಗೆಯ ತ್ಯಾಜ್ಯ ವಿಲೇವಾರಿಯೇ ಇಂದಿಗೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಲೆಕ್ಟ್ರಾನಿಕ್ ವೇಸ್ಟ್ (E-Waste) ಸಂಗ್ರಹಣೆ ಮಾಡಲು ನೂತನ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಇತರ ನಗರಗಳಿಗೆ ಕಾರವಾರ (Karwar) ಮಾದರಿಯಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ... 

ರಾಜ್ಯದ ಪ್ರತೀ ನಗರಗಳು ಸ್ವಚ್ಛ ಹಾಗೂ ಸುಂದರವಾಗಿ ಕಾಣಬೇಕೆಂಬ ದೃಷ್ಠಿಯಿಂದ ಸರಕಾರ ತ್ಯಾಜ್ಯ ನಿರ್ವಹಣೆಗಾಗಿ ಕೋಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡುತ್ತಿದೆ. ಜತೆಗೆ ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಕೂಡಾ ಜಾರಿಗೊಳಿಸಿದೆ. ಆದರೂ, ಜನರಲ್ಲಿ ಸ್ವಚ್ಛತೆ ಕಾಪಾಡುವ ವಿಚಾರದಲ್ಲಿ ಸಾಕಷ್ಟು‌ ನಿರ್ಲಕ್ಷ್ಯ ಕಾಣುತ್ತಿದ್ದು, ಜನರು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುವ ಬುದ್ಧಿ ಮಾತ್ರ ಬಿಟ್ಟಿಲ್ಲ. ಆದರೆ, ಇವುಗಳ ಮಧ್ಯೆ ವಿಶೇಷವಾಗಿ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರಸಭೆ ಮಾತ್ರ ಪ್ರತೀ ಮನೆ ಮನೆಗಳಿಗೆ ತೆರಳಿ ಹಸಿ ಕಸ, ಒಣ ಕಸ, ಆಸ್ಪತ್ರೆಗಳ ವೈದ್ಯಕೀಯ ತ್ಯಾಜ್ಯ  ಸೇರಿದಂತೆ 5 ಬಗೆಯ ತ್ಯಾಜ್ಯ ಸಂಗ್ರಹಣೆಯೊಂದಿಗೆ ಇದೀಗ 6 ಬಗೆಯ ತ್ಯಾಜ್ಯವಾದ ಇಲೆಕ್ಟ್ರಾನಿಕ್ ವೇಸ್ಟ್‌ಗಳನ್ನು ಸಂಗ್ರಹಿಸುವ ಕಾರ್ಯ ಕೂಡಾ ನಡೆಸುತ್ತಿದೆ. 

Uttara Kannada: ಕಾರವಾರದಲ್ಲಿ ಗಮನ ಸೆಳೆದ ಮೀನು ಹಿಡಿಯುವ ಸ್ಪರ್ಧೆ

ಈ ಕಾರಣದಿಂದ ಸದ್ಯಕ್ಕೆ ಕಾರವಾರದ ನಗರಸಭೆಯ ಹೊರಭಾಗ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಹೊರಭಾಗ ಎರಡು ಬೃಹತ್ ತ್ಯಾಜ್ಯ ಸಂಗ್ತಹಣಾ ಬಾಕ್ಸ್‌ಗಳನ್ನು ಇರಿಸಲಾಗಿದ್ದು, ಇದಕ್ಕೆ ಇ- ವೇಸ್ಟ್ ಹಾಕಲು ಸೂಚನೆ ಕೂಡಾ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಈಗಾಗಲೇ ಕಾರವಾರ ನಗರಸಭೆ ಒಂದು ಟ್ರಕ್‌ನಲ್ಲಿ ತುಂಬುವಷ್ಟು ಇ- ವೇಸ್ಟ್‌ಗಳನ್ನು ಸಂಗ್ರಹಿಸಿದ್ದು, ಇವುಗಳನ್ನು ಗೋವಾದಿಂದ ಬಂದಂತಹ ಇ-ವೇಸ್ಟ್ ಸಂಗ್ರಹಕಾರರು ಖರೀದಿಸಿ ತೆರಳಿದ್ದಾರೆ. ಇನ್ನು ಜನರು ನೀಡುವ ಇನ್ನಷ್ಟು ಇ- ವೇಸ್ಟ್‌ಗಳನ್ನು ಸಂಗ್ರಹಿಸಿ ಅವುಗಳನ್ನು ಮಂಗಳೂರು, ಹುಬ್ಬಳ್ಳಿ ಅಥವಾ ಗೋವಾದ ಪ್ರೋಸೆಸಿಂಗ್ ಯೂನಿಟ್‌ಗೆ ಕಳುಹಿಸುವ ವ್ಯವಸ್ಥೆ ಮಾಡೋ ಮೂಲಕ ಇಂತಹ ತ್ಯಾಜ್ಯಗಳ ಮರು ಸಂಸ್ಕರಣೆಗೆ ಆದ್ಯತೆ ನೀಡಲಾಗುತ್ತಿದೆ. 

ಅಂದಹಾಗೆ, ಸಾಮಾನ್ಯವಾಗಿ ಹೆಚ್ಚಿನ ಇಲೆಕ್ಟ್ರಾನಿಕ್ ವೇಸ್ಟ್‌ಗಳಲ್ಲಿ ಪಾದರಸ, ಕ್ಯಾಡ್ಮಿಯಂ ಮುಂತಾದ ಭಯಾನಕ ರಾಸಾಯನಿಕ ವಸ್ತುಗಳಿವೆ. ಕ್ಯಾಡ್ಮಿಯಂ ಅಂಶ ಕ್ಯಾನ್ಸರ್‌ಗೆ ಕಾರಣವಾದರೆ,  ಪಾದರಸ ಸಾವಿರ ವರ್ಷವಾದ್ರೂ ಕರಗಿ ಹೋಗುವ ಗುಣ ಹೊಂದಿಲ್ಲ. ಒಂದು ವೇಳೆ ಇದು ನೀರಿನಲ್ಲಿ ಸೇರಿದ್ರೆ ಪುರುಷ ಹಾಗೂ ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ. ಅಲ್ಲದೇ, ಪರಿಸರಕ್ಕೂ ಇಂತಹ ವಸ್ತುಗಳು ಬಹಳಷ್ಟು ಅಪಾಯಕಾರಿ. ಈ ಕಾರಣದಿಂದ ಮೊಬೈಲ್ ರಿಪೇರಿ ಅಂಗಡಿಗಳು, ಬ್ಯಾಟರಿ ಅಂಗಡಿಗಳು, ಗ್ಯಾರೇಜ್‌ಗಳು, ಟಿವಿ ಅಂಗಡಿಗಳು ಹಾಗೂ ಜನಸಾಮಾನ್ಯರು ಹಾಳಾದ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಪರಿಸರ ಹಾಗೂ ಜೀವ ಸಂಕುಲಕ್ಕೆ ಅಪಾಯ ತಂದೊಡ್ಡುವುದನ್ನು ತಪ್ಪಿಸಲು ಕಾರವಾರ ನಗರಸಭೆ ಕೈಗೊಂಡ ಈ ನಿರ್ಧಾರದಿಂದ ಜನರು ಬಹಳಷ್ಟು ಖುಷಿಯಾಗಿದ್ದಾರೆ. ಅಲ್ಲದೇ, ಅಧಿಕಾರಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. 

ಕಾರವಾರದಲ್ಲಿ ಮಕ್ಕಳ ಸಂತೆ, ವಿವಿಧ ಖಾದ್ಯಗಳಿಗೆ ಮುಗಿಬಿದ್ದ ಜನತೆ

ಒಟ್ಟಿನಲ್ಲಿ ಮೆಡಿಕಲ್ ವೇಸ್ಟ್, ಕೆಮಿಕಲ್ ವೇಸ್ಟ್‌ನಷ್ಟೇ ಅಪಾಯಕಾರಿಯಾಗಿರುವ ಇ-ವೇಸ್ಟ್‌ ಅನ್ನು ವಿಶೇಷ ರೂಪದಲ್ಲಿ ಸಂಗ್ರಹಣೆ ಮಾಡೋ ಮೂಲಕ ಪರಿಸರದ ಸ್ವಚ್ಛತೆ ಹಾಗೂ ರಕ್ಷಣೆಗೆ ಕಾರವಾರ ನಗರಸಭೆ ಮುಂದಾಗಿರುವುದು ಶ್ಲಾಘನೀಯ. ಇದರಿಂದಾಗಿ ಕಾರವಾರ ನಗರಸಭೆ ರಾಜ್ಯದ ಇತರ ನಗರಗಳಿಗೆ ಮಾದರಿ ಎಂದರೆ ತಪ್ಪಾಗಲಾರದು. 

Latest Videos
Follow Us:
Download App:
  • android
  • ios