ತೋಟ, ಗದ್ದೆಗಳಿಗೆ ಕಾಡುಪ್ರಾಣಿಗಳ ಉಪಟಳಕ್ಕೆ ಉಡುಪಿ ಮೇಷ್ಟ್ರ ಬೊಂಬಾಟ್ ಐಡಿಯಾ..!
- ವೃತ್ತಿಯಲ್ಲಿ ಪ್ರೌಢ ಶಾಲೆ ಶಿಕ್ಷಕ, ಪ್ರವೃತ್ತಿಯಾಗಿ ಕೃಷಿ ಕೆಲ್ಸ ಮಾಡುವ ಗೋವಿಂದ ರಾವ್
- ವಿಜ್ಞಾನ ಶಿಕ್ಷಕರಾಗಿರುವ ಗೋವಿಂದ ರಾವ್‌ಗೆ ಭತ್ತದ ಕೃಷಿ ಅಂದ್ರೆ ಖುಷಿ
- ಬೆಳೆದ ಬೆಳೆ ಕಾಡು ಪ್ರಾಣಿಗಳ ಉಪಟಳದಿಂದ ಹಾಳಗುವುದನ್ನು ತಪ್ಪಿಸಲು ಐಡಿಯಾ
ಉಡುಪಿ (ಅ. 22): ತೋಟ, ಗದ್ದೆಗಳಿಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಬೆಳೆದ ಬೆಳೆಗಳೆಲ್ಲಾ ಕಾಡು ಪ್ರಾಣಿಗಳು ಹಾಳು ಮಾಡುತ್ತಿವೆ ಎಂಬುದು ಕೃಷಿಕರ ಸಾಮಾನ್ಯ ಸಮಸ್ಯೆ. ಇದಕ್ಕಾಗಿ ಉಡುಪಿಯ ಶಿಕ್ಷಕ ಗೋವಿಂದ ರಾವ್, ಹೊಸ ಉಪಾಯ ಕಂಡುಕೊಂಡಿದ್ದಾರೆ.
ಉಡುಪಿಯಲ್ಲಿ ಸೇನೆಗೆ ಸೇರಲು ಯುವಕರಿಗೆ ಉಚಿತ ತರಬೇತಿ..!
ತೆಂಗಿನ ಮರದ ನಡುವೆ ದಾರ ಕಟ್ಟಿ ಅದರಕ್ಕೆ ಪ್ಲಾಸ್ಟಿಕ್ ಡಬ್ಬ ನೇತಾಡಿ, ರಾತ್ರಿ ವೇಳೆ ಎರಡು ಲೈಟ್‌ನ್ನು ಆನ್ ಮಾಡಿ ಅದ್ರ ಒಳಗೆ ಇಡ್ತಾರೆ. ಅದು ಸುತ್ತ ತಿರುಗುತ್ತಾ ಇರತ್ತೆ ಇದರಿಂದ ಪ್ರಾಣಿಗಳು ಲೈಟ್ ಕಂಡು, ಯಾರೋ ಬಂದ್ರಪ್ಪ ಅಂತ ಗದ್ದೆಗೆ ಇಳಿಯುವ ಸಾಹಸ ಮಾಡೋದಿಲ್ಲ, ಇಷ್ಟೇ ಅಲ್ಲ ಇದ್ರ ಜೊತೆ ಎರಡು ಸ್ಪೀಕರ್‌ನಲ್ಲಿ ಹುಲಿ, ಆನೆ ಚಿರತೆ ನಾಯಿ ಹೀಗೆ ವಿವಿಧ ಪ್ರಾಣಿಗಳ ಕೂಗುದನ್ನು ಶಬ್ದವನ್ನು ಜೋರಾಗಿ ಇಡುತ್ತಾರೆ ಇದ್ರ ಸೌಂಡ್ ಗೆ ಕಾಡು ಪ್ರಾಣಿಗಳ ಇವ್ರ ಗದ್ದೆ ಈಗ ಇಳಿಯೋದೆ ಇಲ್ವಂತೆ..! ನೀವೂ ನಿಮ್ಮ ತೋಟಕ್ಕೆ ಈ ಪ್ರಯೋಗ ಮಾಡಿ ನೋಡಿ.