Asianet Suvarna News Asianet Suvarna News

ಉಡುಪಿಯಲ್ಲಿ ಸೇನೆಗೆ ಸೇರಲು ಯುವಕರಿಗೆ ಉಚಿತ ತರಬೇತಿ..!

ಕರಾವಳಿ ಭಾಗದ ಯುವಕರಿಗೆ ತಮ್ಮ ಕನಸು ನನಸಾಗಿಸಿಕೊಳ್ಳುವ ಅವಕಾಶ ಕೂಡಿ ಬಂದಿದ್ದು, ಖ್ಯಾತ ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಅವರ ಸಹಕಾರದಲ್ಲಿ ಉಡುಪಿಯ ಬೈದೂರಿನಲ್ಲಿ ನೇಷನ್ ಲವರ್ ಎನ್ನುವ ಹೆಸರಿನ ತಂಡವೊಂದು ಯುವಕರಿಗೆ ಉಚಿತವಾಗಿ ತರಬೇತಿ ನೀಡುತ್ತಿದೆ. ಸೈನಿಕರಾಗಲು ಮಾತ್ರವಲ್ಲದೇ ಅಥ್ಲೀಟ್ಸ್‌ಗಳಾಗಲು ಸಹಾ ಇಲ್ಲಿ ತರಬೇತಿ ನೀಡಲಾಗುತ್ತಿದೆ. 

First Published Oct 20, 2021, 1:45 PM IST | Last Updated Oct 20, 2021, 1:45 PM IST

ಬೆಂಗಳೂರು(ಅ.20): ಸಾಕಷ್ಟು ಯುವ ಪ್ರತಿಭೆಗಳಿಗೆ ಭಾರತೀಯ ಸೇನೆಗೆ (Indian Army) ಸೇರಿ ದೇಶ ಸೇವೆ ಮಾಡಬೇಕು ಎನ್ನುವ ಕನಸಿರುತ್ತದೆ. ಆದರೆ ಮಾಹಿತಿಯ ಕೊರತೆ ಹಾಗೂ ತರಬೇತಿಯ ಕೊರತೆಯಿಂದಾಗಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಇದೀಗ ಕರಾವಳಿ ಭಾಗದ ಯುವಕರಿಗೆ ತಮ್ಮ ಕನಸು ನನಸಾಗಿಸಿಕೊಳ್ಳುವ ಅವಕಾಶ ಕೂಡಿ ಬಂದಿದ್ದು, ಖ್ಯಾತ ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಅವರ ಸಹಕಾರದಲ್ಲಿ ಉಡುಪಿಯ (Udupi) ಬೈದೂರಿನಲ್ಲಿ ನೇಷನ್ ಲವರ್ ಎನ್ನುವ ಹೆಸರಿನ ತಂಡವೊಂದು ಯುವಕರಿಗೆ ಉಚಿತವಾಗಿ ತರಬೇತಿ ನೀಡುತ್ತಿದೆ. ಸೈನಿಕರಾಗಲು ಮಾತ್ರವಲ್ಲದೇ ಅಥ್ಲೀಟ್ಸ್‌ಗಳಾಗಲು ಸಹಾ ಇಲ್ಲಿ ತರಬೇತಿ ನೀಡಲಾಗುತ್ತಿದೆ. 

T20 World Cup: ಸ್ಕಾಟ್ಲೆಂಡ್‌ ವಿಶ್ವಕಪ್‌ ಜೆರ್ಸಿ ವಿನ್ಯಾಸ ಮಾಡಿದ್ದು 12ರ ಬಾಲೆ!

ಈ ಮೂಲಕ ಗ್ರಾಮೀಣ ಯುವಕರು ಸೈನ್ಯಕ್ಕೆ ಸೇರುವ ಕನಸಿಗೆ ರೆಕ್ಕೆ ಬಂದಂತೆ ಆಗಿದೆ. ಯುವ ಸೈನಿಕ ಪ್ರಶಾಂತ್ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ನೂರಾರು ಯುವಕರಿಗೆ ಸೈನ್ಯಕ್ಕೆ ಸೇರುವ ಕುರಿತಂತೆ ತರಬೇತಿ ನೀಡಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ

Video Top Stories