Asianet Suvarna News Asianet Suvarna News

ಕೇಳೋರಿಲ್ಲ 'ಪೋಷಕತ್ವ' ಯೋಜನೆ: ಉಡುಪಿಯಲ್ಲಿ 4 ವರ್ಷಗಳಲ್ಲಿ ಝೀರೋ ದತ್ತು ಪ್ರಕ್ರಿಯೆ!

- ಅನಾಥ ಮಕ್ಕಳ ಪಾಲನೆಗೆ ಸಹಕಾರಿ ಯೋಜನೆಗಿಲ್ಲ ಸ್ಪಂದನೆ

- ಪೋಷಕತ್ವ ಯೋಜನೆಗೆ ನೊಂದಾಯಿಸಿಕೊಳ್ಳಲು ಜನ ನಿರಾಸಕ್ತಿ

- ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ ಝೀರೋ ದತ್ತು ಪ್ರಕ್ರಿಯೆ ದಾಖಲು!
 

ಉಡುಪಿ (ಸೆ. 10): ಹೆತ್ತವರ ಬಿಗಿದಪ್ಪುಗೆಯಲ್ಲಿ ಬೆಳೆಯಬೇಕಿದ್ದ ಲಕ್ಷಾಂತರ ಮಕ್ಕಳು ಅನಾಥರಾಗಿದ್ದಾರೆ. ಇಂತಹ ಮಕ್ಕಳಿಗೆ ಅನಾಥ ಪ್ರಜ್ಞೆ ಇನ್ನಾದರೂ ದೂರವಾಗಬೇಕು, ಸರಿಯಾದ ಪೋಷಣೆ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ  ' ಪೋಷಕತ್ವ ' ಯೋಜನೆಯೊಂದನ್ನ ತಂದಿದೆ.

ರೇಷನ್ ಕಾರ್ಡ್ ತವರಲ್ಲಿ, ಕೆಲಸ ಉಡುಪಿಯಲ್ಲಿ: 'ಥಂಬ್' ಕೊಡಲಾಗದೇ ಕಾರ್ಮಿಕರ ಗೋಳು!

 

ಒಂದು ವರ್ಷದ ಅವಧಿಗೆ ಅರ್ಹ ಪೋಷಕರಿಗೆ ದತ್ತು ನೀಡಬೇಕು. ಒಂದು ವರ್ಷದಲ್ಲಿ ಆ ಮಗುವಿಗೆ ಸರಿಯಾದ ಲಾಲನೆ ಪಾಲನೆ‌ ಶಿಕ್ಷಣ ಹೀಗೆ ಮಗುವಿಗೆ ಅಗತ್ಯವಾಗಿರುವ ಪ್ರೀತಿ ಆರೈಕೆ ಸಿಕ್ಕರೆ ಮತ್ತೆ ಮತ್ತೊಂದು ವರ್ಷ ಅವಧಿ ವಿಸ್ತರಿಸುವ ಯೋಜನೆ ಜಾರಿ ತಂದಿದೆ. ಆದ್ರೆ ಈ‌ ಯೋಜನೆಗೆ ಸರಿಯಾದ ಸ್ಪಂದನೆ ಉಡುಪಿ‌ ಜಿಲ್ಲೆಯಲ್ಲಿ ಇನ್ನೂ ಸಿಕ್ಕಿಲ್ಲ. ಇದಕ್ಕೆ ಬಲವಾದ ಕಾರಣವೂ ಇದೆ. ಏನದು.? ಇಲ್ಲಿದೆ ನೋಡಿ..!