ರೇಷನ್ ಕಾರ್ಡ್ ತವರಲ್ಲಿ, ಕೆಲಸ ಉಡುಪಿಯಲ್ಲಿ: 'ಥಂಬ್' ಕೊಡಲಾಗದೇ ಕಾರ್ಮಿಕರ ಗೋಳು!
- ಉಡುಪಿ ಜಿಲ್ಲೆಯಲ್ಲಿ ಉತ್ತರ ಕರ್ನಾಟಕ ಮೂಲದ ಸುಮಾರು 30 ಸಾವಿರ ಕಾರ್ಮಿಕರು
- ಸಾವಿರಾರು ಮಂದಿಯ ರೇಷನ್ ಕಾರ್ಡ್ ಇಂದಿಗೂ ತವರು ಜಿಲ್ಲೆಗಳಲ್ಲೇ ಇದೆ
- ಊರಿಗೆ ಹೋಗಿ ಥಂಬ್ ಕೊಡಬೇಕಾದರೆ ಸಾವಿರಾರು ರೂ. ಖರ್ಚು ಮಾಡೋ ಅನಿವಾರ್ಯತೆ
ಉಡುಪಿ (ಸೆ.10): ಜಿಲ್ಲೆಯಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ, ಹೊರಜಿಲ್ಲೆಗಳಿಂದ ಬಂದು ನೆಲೆಸಿರುವ ಅಸಂಘಟಿತ ಕಾರ್ಮಿಕರು ಇದ್ದಾರೆ. ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ವಿಜಯಪುರ, ಯಾದಗಿರಿ, ಕೊಪ್ಪಳ, ಬಳ್ಳಾರಿ, ಹುಬ್ಬಳ್ಳಿ, ಗದಗ, ಹಾವೇರಿ, ದಾವಣಗೆರೆ ಮುಂತಾದ ಜಿಲ್ಲೆಗಳ ಕಾರ್ಮಿಕರೇ ಹೆಚ್ಚಾಗಿ ಕೂಲಿ ಕೆಲಸದ ಸಲುವಾಗಿ ಇಲ್ಲಿ ನೆಲೆಸಿದ್ದಾರೆ. ಆದರೆ ಸಾವಿರಾರು ಮಂದಿಯ ರೇಷನ್ ಕಾರ್ಡ್ ಇವತ್ತಿಗೂ ತವರು ಜಿಲ್ಲೆಗಳಲ್ಲೇ ಇದೆ.
ಕೇಳೋರಿಲ್ಲ 'ಪೋಷಕತ್ವ' ಯೋಜನೆ: ಉಡುಪಿಯಲ್ಲಿ 4 ವರ್ಷಗಳಲ್ಲಿ ಝೀರೋ ದತ್ತು ಪ್ರಕ್ರಿಯೆ!
ಕೊರೋನಾ ಕಾಲದಲ್ಲಿ ದುಡಿಮೆಯೂ ಸಿಗದೆ, ಹಣವೂ ಇಲ್ಲದೆ, ಸಿಕ್ಕ ಕೆಲಸ ಕಳೆದುಕೊಳ್ಳಲು ಬಯಸದ ನೂರಾರು ಮಂದಿ ಇವತ್ತಿಗೂ ತಂಬ್ ನೀಡಲು ತವರಿಗೆ ಹೋಗಿಲ್ಲ. ಒಮ್ಮೆ ಊರಿಗೆ ಹೋದರೆ ನಾಲ್ಕೈದು ಸಾವಿರ ರುಪಾಯಿ ಖರ್ಚಾಗುತ್ತೆ,ಅನ್ನೋದು ವಲಸೆ ಕಾರ್ಮಿಕದ ಸಂಕಟ. ಸ್ಥಳೀಯವಾಗಿಯೇ ತಂಬ್ ತೆಗೆದುಕೊಳ್ಳಬೇಕೆಂದು ನ್ಯಾಯಬೆಲೆ ಅಂಗಡಿ ಸುತ್ತಿ, ಈ ವಲಸೆ ಕಾರ್ಮಿಕರು ಸುಸ್ತಾಗಿದ್ದಾರೆ. ನಮ್ಮ ಸಮಸ್ಯೆಗೆ ಪರಿಹಾರ ಕೊಡಿ ಸ್ವಾಮಿ ಎನ್ನುತ್ತಿದ್ದಾರೆ ಕಾರ್ಮಿಕರು.