ಸಿಗುತ್ತಿಲ್ಲ ಮೀನು, ಬೆಲೆ ಗಗನಕ್ಕೆ, ಮಾರುಕಟ್ಟೆಯಲ್ಲಿ ಮೀನು ಸಿಗದೇ ಮತ್ಸ್ಯ ಪ್ರಿಯರಿಗೆ ನಿರಾಸೆ.!
700- 800 ರೂಪಾಯಿ ಬೆಲೆಬಾಳುವ ಅಂಜಲ್ ಮೀನುಗಳು ನವರಾತ್ರಿ ಸಮಯದಲ್ಲಿ ಕೇವಲ ಇನ್ನೂರು ರೂಪಾಯಿಗೆ ಮಾರಾಟವಾಗುತ್ತವೆ. ಇನ್ನೂ ನೂರು ರೂಪಾಯಿಗೆ 4 ಅಥವಾ 5 ಸಿಗುತ್ತಿದ್ದ ಬಂಗುಡೆ ಮೀನುಗಳು ನವರಾತ್ರಿ ದಿನಗಳಲ್ಲಿ 15 ರಷ್ಟು ಸಿಗುತ್ತಿದ್ದವು.
ಉಡುಪಿ (ಅ. 24): 700- 800 ರೂಪಾಯಿ ಬೆಲೆಬಾಳುವ ಅಂಜಲ್ ಮೀನುಗಳು (Fish) ನವರಾತ್ರಿ ಸಮಯದಲ್ಲಿ ಕೇವಲ ಇನ್ನೂರು ರೂಪಾಯಿಗೆ ಮಾರಾಟವಾಗುತ್ತವೆ. ಇನ್ನೂ ನೂರು ರೂಪಾಯಿಗೆ 4 ಅಥವಾ 5 ಸಿಗುತ್ತಿದ್ದ ಬಂಗುಡೆ ಮೀನುಗಳು ನವರಾತ್ರಿ ದಿನಗಳಲ್ಲಿ 15 ರಷ್ಟು ಸಿಗುತ್ತಿದ್ದವು. ಕಾರಣ ಏನಪ್ಪಾ ಅಂದ್ರೆ ನವರಾತ್ರಿಯಲ್ಲಿ 90% ಹಿಂದುಗಳು ಮಾಂಸಾಹಾರವನ್ನು ತ್ಯಜಿಸಿ ಸಾತ್ವಿಕ ಆಹಾರ ಸ್ವೀಕರಿಸಿ ವೃತ ಆಚರಿಸುತ್ತಾರೆ.
ತೋಟ, ಗದ್ದೆಗಳಿಗೆ ಕಾಡುಪ್ರಾಣಿಗಳ ಉಪಟಳಕ್ಕೆ ಉಡುಪಿ ಮೇಷ್ಟ್ರ ಬೊಂಬಾಟ್ ಐಡಿಯಾ..!
ಈ ವೇಳೆ ಕೋಳಿ ಮತ್ತು ಮೀನು ವ್ಯಾಪಾರ ಸಂಪೂರ್ಣವಾಗಿ ನೆಲಕಚ್ಚಿ ಹೋಗುತ್ತವೆ. ನವರಾತ್ರಿ (navaratri) ಸಂದರ್ಭದಲ್ಲಿ ಆದ ಅಷ್ಟು ನಷ್ಟವನ್ನು ಮೀನುಗಾರರು ಸರಿದೂಗಿಸಿ ಕೊಳ್ಳುವುದು ನವರಾತ್ರಿ ಮುಗಿದ ಬಳಿಕ. ನವರಾತ್ರಿಯ ನಂತರ ಜನರು ಮುಗಿಬಿದ್ದು ಮೀನು ಖರೀದಿಗೆ ಬರುತ್ತಾರೆ. ಈ ವೇಳೆ ಮೀನಿನ ಬೆಲೆ ಗಗನಕ್ಕೇರುತ್ತದೆ. ಈ ಬಾರಿ ನವರಾತ್ರಿಯ ನಂತರ ಮೀನಿನ ಬೆಲೆ ಏನೋ ಗಗನಕ್ಕೇರಿದೆ. ಆದರೆ ಮೀನುಗಾರರಿಗೆ ಮಾತ್ರ ಮೀನುಗಾರಿಕೆ ನಡೆಸಲು ಪ್ರಕೃತಿ ಅಸಹಕಾರ ತೋರುತ್ತಿದೆ. ವಾಯುಭಾರ ಕುಸಿತದಿಂದ ಸರಿಯಾದ ಮೀನುಗಾರಿಕೆ ನಡೆದಿದೆ ಮೀನಿನ ಲಭ್ಯತೆ ಕಡಿಮೆಯಾಗಿದೆ.