Udupi: ಸೇಂಟ್ ಮೆರೀಸ್ ದೀಪದಲ್ಲಿ ವಾಚ್ ಟವರ್, ಸೆಲ್ಫಿ ಪಾಯಿಂಟ್ ನಿರ್ಮಿಸಲು ತೀರ್ಮಾನ
ಮಲ್ಪೆ ಸೈಂಟ್ ಮೇರಿಸ್ ದ್ವೀಪ (St. Mary's Island) ವನ್ನು ಭೂಲೋಕದ ಸ್ವರ್ಗ ಅಂತಾನೆ ಕರೀತಾರೆ. ಶಿಲ್ಪಿಯ ಅಪೂರ್ವ ಕೆತ್ತನೆಯಂತೆ ಕಾಣುವ ಇಲ್ಲಿನ ಕಲ್ಲು ಗೋಪುರಗಳು, ತೀರದ ಉದ್ದಕ್ಕೂ ಹರಡಿರುವ ಚಿಪ್ಪು ರಾಶಿ, ಮಂದವಾದ ಅಲೆಗಳ ಭೂಸ್ಪರ್ಶ, ಇವೆಲ್ಲವನ್ನೂ ಕಾಣುವುದು ಒಂದು ಅಪೂರ್ವ ಅನುಭವ. ಒಮ್ಮೆ ದ್ವೀಪದೊಳಗೆ ಕಾಲಿಟ್ಟರೆ ಸಾಕು ಪ್ರವಾಸಿಗರು ರೋಮಾಂಚನಗೊಳ್ಳುತ್ತಾರೆ.
ಉಡುಪಿ (ಏ.30): ಮಲ್ಪೆ ಸೈಂಟ್ ಮೇರಿಸ್ ದ್ವೀಪ (St. Mary's Island) ವನ್ನು ಭೂಲೋಕದ ಸ್ವರ್ಗ ಅಂತಾನೆ ಕರೀತಾರೆ. ಶಿಲ್ಪಿಯ ಅಪೂರ್ವ ಕೆತ್ತನೆಯಂತೆ ಕಾಣುವ ಇಲ್ಲಿನ ಕಲ್ಲು ಗೋಪುರಗಳು, ತೀರದ ಉದ್ದಕ್ಕೂ ಹರಡಿರುವ ಚಿಪ್ಪು ರಾಶಿ, ಮಂದವಾದ ಅಲೆಗಳ ಭೂಸ್ಪರ್ಶ, ಇವೆಲ್ಲವನ್ನೂ ಕಾಣುವುದು ಒಂದು ಅಪೂರ್ವ ಅನುಭವ. ಒಮ್ಮೆ ದ್ವೀಪದೊಳಗೆ ಕಾಲಿಟ್ಟರೆ ಸಾಕು ಪ್ರವಾಸಿಗರು ರೋಮಾಂಚನಗೊಳ್ಳುತ್ತಾರೆ. ಅದರಲ್ಲೂ ಸಮುದ್ರವನ್ನು ಮೊದಲಬಾರಿ ಕಾಣುವ ಜನರಂತೂ ಅಪಾಯದ ಅರಿವಿಲ್ಲದೆ ನೀರಿಗೆ ಇಳಿದು ಬಿಡುತ್ತಾರೆ.
ದ್ವೀಪದಲ್ಲಿ ಒಂದು ಸೆಲ್ಫಿ (Selfie) ತೆಗೆದುಕೊಳ್ಳಬೇಕು ಅನ್ನೋದು ಬಹುತೇಕರ ಆಸೆಯಾಗಿರುತ್ತದೆ. ಸೆಲ್ಫಿ ಹುಚ್ಚಿಗೆ ನೀರಿಗಿಳಿದ ಪ್ರವಾಸಿಗರು ಜೀವ ಕಳೆದುಕೊಳ್ಳುತ್ತಿರುವ ಘಟನೆ ಆತಂಕಕಾರಿಯಾಗಿದೆ. ಕೇವಲ ಹತ್ತು ದಿನಗಳ ಅಂತರದಲ್ಲಿ ಸೈಂಟ್ ಮೇರಿಸ್ ದ್ವೀಪ ಮತ್ತು ಮಲ್ಪೆ ಪರಿಸರದಲ್ಲಿ ಆರು ಮಂದಿ ಅಸುನೀಗಿದ್ದಾರೆ. ಸೆಲ್ಫಿ ತೆಗೆಯಲು ಹೋಗಿಯೇ ಇವರೆಲ್ಲ ಪ್ರಾಣ ಕಳೆದುಕೊಂಡಿದ್ದಾರೆ ಅನ್ನೋದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
Chikkamagaluru: ಭೂ ಒತ್ತುವರಿದಾರರಿಗೆ ರಿಲೀಫ್? ಗುತ್ತಿಗೆ ಆಧಾರ ಭೂಮಿ ನೀಡಲು ಮುಂದಾದ ಸರ್ಕಾರ
ಪ್ರವಾಸದ ನೆನಪನ್ನು ಶಾಶ್ವತಗೊಳಿಸಲು ಹೊರಟವರು, ನೆನಪಿನ ಪುಟ ಸೇರಿ ಬಿಟ್ಟಿದ್ದಾರೆ. ಇನ್ನೂ ಹದಿಹರೆಯದ ಯುವಕ-ಯುವತಿಯರು ಕಾಲೇಜು ಪ್ರವಾಸಕ್ಕೆಂದು ಈ ದ್ವೀಪಕ್ಕೆ ಬಂದಿದ್ದರು. ಈ ರೀತಿ ಬಂದವರಲ್ಲಿ ಕೇರಳದ ಮೂವರು ವಿದ್ಯಾರ್ಥಿಗಳು, ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು, ಹಾಗೂ ಮತ್ತೋರ್ವ ಪ್ರವಾಸಿಗ ಪ್ರತ್ಯೇಕ ಘಟನೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸುವುದೇ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
ಇದೀಗ ಸೈಂಟ್ ಮೇರಿಸ್ ದ್ವೀಪದ ಅಪಾಯವನ್ನು ಕಡಿಮೆಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಬಹುತೇಕ ಜನರು ಸೆಲ್ಫಿ ಕ್ರೇಜಿಗೆ ಬಲಿಯಾಗುತ್ತಿರುವುದು ಮನಗಂಡ ಜಿಲ್ಲಾಡಳಿತ, ಸುರಕ್ಷಿತ ಸ್ಥಳದಲ್ಲಿ ಸೆಲ್ಫಿ ಪಾಯಿಂಟ್ (Selfie Point) ನಿರ್ಮಾಣ ಮಾಡಲು ಮುಂದಾಗಿದೆ. ತಂಡವಾಗಿ ಪ್ರವಾಸಕ್ಕೆ ಬರುವ ಕಾಲೇಜಿನ ಸಿಬ್ಬಂದಿಗಳನ್ನು, ಮೊದಲೇ ಗುರುತಿಸಿ ಅವರಿಗೆ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸಲು ಮಾರ್ಗದರ್ಶನ ನೀಡಲು ತೀರ್ಮಾನಿಸಲಾಗಿದೆ.
Acid Attack:ತೀವ್ರ ಆರ್ಥಿಕ ಸಂಕಷ್ಟದಲ್ಲಿ ಆಸಿಡ್ ಸಂತ್ರಸ್ತೆ ಕುಟುಂಬ
ಬಹಳ ಮುಖ್ಯವಾಗಿ ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿ ಬೋರ್ಡ್ ಹಾಕಲು ತೀರ್ಮಾನಿಸಲಾಗಿದೆ. ದ್ವೀಪದಲ್ಲಿ ವಾಚ್ ಟವರ್ ನಿರ್ಮಾಣ ಮಾಡಿ ಪ್ರವಾಸಿಗರ ಚಲನವಲನದ ಮೇಲೆ ಗಮನವಿಡಲು ನಿರ್ಧರಿಸಿದೆ. ಎಲ್ಲಕ್ಕೂ ಮುಖ್ಯವಾಗಿ, ಮೋಜು ಮಸ್ತಿಯ ಪ್ರವಾಸವನ್ನು ಕಡಿಮೆಗೊಳಿಸಿ, ಅಧ್ಯಯನ ಪ್ರವಾಸಕ್ಕೆ ಹೆಚ್ಚು ಒತ್ತು ನೀಡಲು ತೀರ್ಮಾನಿಸಲಾಗಿದೆ. ಇಲ್ಲಿದೆ ಅಪರೂಪದ ಭೂರಚನೆ ಅಧ್ಯಯನ ಯೋಗ್ಯವಾಗಿದ್ದು ಈ ದೃಷ್ಟಿಯಿಂದಲೇ ಬರುವ ಪ್ರವಾಸಿಗರಿಗೆ ಒತ್ತು ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.