Asianet Suvarna News Asianet Suvarna News

ಕೋಳಿ ಕಳ್ಳರಿದ್ದಾರೆ ಎಚ್ಚರಿಕೆ, ಇವರು ಕೋಳಿ ಕದಿಯೋ ಸ್ಟೈಲೇ ಬೇರೆ..!

ಇಲ್ಲೊಂದು ಖತರ್ನಾಕ್ ಕಳ್ಳರ ಗ್ಯಾಂಗ್ ಕೋಳಿಯನ್ನು ಕ್ಷಣ ಮಾತ್ರದಲ್ಲಿ ಕದಿಯುತ್ತಾರೆ. ಇವರು ಕದಿಯುವ ಸ್ಟೈಲ್ ಇದೀಗ ವೈರಲ್ ಆಗುತ್ತಿದೆ. 

ಉಡುಪಿ (ಜ. 25): ವೃದ್ಧ ಜೋಡಿ ಮನೆಗೆ ಬಂದು, ಮನೆಯಲ್ಲಿ ಯಾರು ಇಲ್ಲ ಅನ್ನೋದನ್ನು ಖಾತ್ರಿ ಪಡಿಸಿಕೊಂಡ ಮೇಲೆ ಮನೆಯಂಗಳದಲ್ಲಿ ಹಾಯಾಗಿ ಕುಳಿತುಕೊಳ್ತಾರೆ. ಮೊದಲು ಕೋಳಿಗಳಿಗೆ ಕಾಳು ಹಾಕುತ್ತಾರೆ. ಒಮ್ಮೆ ಈ ಕೋಳಿಗಳು ಇವರಿಗೆ ಹೊಂದಿಕೊಂಡರೆ ಮುಗೀತು. ಕೆಲವೇ ಕ್ಷಣದಲ್ಲಿ ಕಾಳು ಹಾಕಿದ ಕೈಯಿಂದಲೇ ಕೋಳಿಯ ಕತ್ತು ಹಿಸುಕುತ್ತಾರೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ಕತ್ತು ಹಿಸುಕಿದ ಕೋಳಿಯನ್ನು ಜೋಳಿಗೆಯಲ್ಲಿ ತುಂಬಿಸಿಕೊಳ್ಳುತ್ತಾರೆ. ಈ ಕೋಳಿ ಕದಿಯುವ ಖತರ್ನಾಕ್ ಸ್ಟೈಲ್ ಸದ್ಯ ವೈರಲ್ ಆಗುತ್ತಿದೆ!! 

ಉಡುಪಿ ಜಿಲ್ಲೆಯ ಕಾಪು ಸಮೀಪದ ಸಾಂತೂರ್ ಗ್ರಾಮದ ಮುದರಂಗಡಿ ಯಲ್ಲಿ ಕೋಳಿ ಕಳ್ಳತನ ನಡೆದಿದೆ. ಬೇಬಿ ಪೂಜಾರ್ತಿ ಎಂಬವರ ಮನೆಯಲ್ಲಿ ಈ  ಚಾಲಕಿ ಕೃತ್ಯವನ್ನು ಮನೆಯ ಮಹಿಳೆಯೊಬ್ಬರು ಮೊಬೈಲ್ನಲ್ಲಿ ದಾಖಲಿಸಿಕೊಂಡಿದ್ದಾರೆ.