Asianet Suvarna News Asianet Suvarna News

ಕೃಷಿಯಿಂದ ವರ್ಷಕ್ಕೆ ಕೋಟಿ ಆದಾಯಗಳಿಸುತ್ತಿರುವ ಉದ್ಯಮಿ: ಕುಂದಾಪುರದ ಹೈಟೆಕ್ ರೈತನಿಗೆ ಒಲಿದು ಬಂತು ಬಿಲಿಯನೇರ್ ಪ್ರಶಸ್ತಿ

ಅತೀ ಕಡಿಮೆ ನೀರಿದ್ದರೂ ಅಂಜದೆ ವಿವಿಧ ರೀತಿಯ ಹಣ್ಣುಗಳನ್ನು ಬೆಳೆದು ಈ ಉದ್ಯಮಿ ಸೈ ಎನಿಸಿ ಕೊಂಡಿದ್ದಾನೆ. ಕೃಷಿಯ ಮೂಲಕ ವಾರ್ಷಿಕವಾಗಿ ಸುಮಾರು 1 ಕೋಟಿ ವಹಿವಾಟು ಮಾಡುತ್ತಿರುವ ಕುಂದಾಪುರದ ಈ ಹೈಟೆಕ್ ರೈತ. 

ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ರಮೇಶ್ ನಾಯಕ್ ಎನ್ನುವ ರೈಸ್ ಮಿಲ್ ಉದ್ಯಮಿಯು ಬಿಲಿಯನೇರ್ ರೈತ ಪ್ರಶಸ್ತಿಗೆ(Billionaire Farmer Award) ಭಾಜನರಾಗುತ್ತಿರಾಗಿದ್ದಾರೆ. ತೆಕ್ಕಟ್ಟೆ ಸಮೀಪದ ಕೆದೂರು ಎನ್ನುವ ಊರಾಚೆಯ ಹಾಳು ಬಿದ್ದ ಜಾಗದಲ್ಲಿ ವಿವಿಧ ತಳಿಯ ಹಣ್ಣುಗಳನ್ನು   ಉಷ್ಣವಲಯದಲ್ಲಿ ಬೆಳೆಯುವ ಮೂಲಕ  ಕೃಷಿ ಆರಂಭಿಸಿದ ಇವರು ಸದ್ಯ ವಾರ್ಷಿಕವಾಗಿ ಒಂದು ಕೋಟಿ ವಹಿವಾಟು ನಡೆಸುತ್ತಿದ್ದಾರೆ. 2019ರಲ್ಲಿ ಕೆದೂರು ಗ್ರಾಮದ ಸುಮಾರು 13 ಎಕರೆ ಜಾಗದಲ್ಲಿ ಕಾಮಾಕ್ಷಿ ಫಾರ್ಮ್ ಎನ್ನುವ ತೋಟವನ್ನು ಪ್ರಾರಂಭಿಸಿದ ಇವರು ರಂಬುಟಾನ್, 5 ಬಗೆಯ ವಿವಿಧ ತಳಿಯ ಹಲಸು, ಮಾವಿನ ಹಣ್ಣು, ಡುರಿಯನ್, ಡ್ರಾಗನ್ ಫ್ರೂಟ್ ಮತ್ತು ಫ್ಯಾಷನ್ ಫ್ರೂಟ್ ಬೆಳೆ ತೆಗೆಯತ್ತಿದ್ದಾರೆ. ಸದ್ಯ ಇವರ ಸಾಧನೆಯನ್ನು ಗುರುತಿಸಿ, ಕೃಷಿ ಮೌಲ್ಯವರ್ಧನೆ ಹಾಗೂ ಗ್ರಾಮೀಣ ರೈತರಿಗೆ(Farmer) ಬೆನ್ನೆಲುಬಾಗಿ ನಿಂತಿರುವ ಕೃಷಿಕರಿಗೆ ಕೇಂದ್ರ ಸರಕಾರ(Central government) ಕೊಡುವ ಬಿಲಿಯನೇರ್ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಕಾರ್ಯಕ್ರಮದಲ್ಲಿ ಆಯೋಜನೆಯಾಗಿದೆ. ಪ್ರಧಾನಿ ನರೇಂದ್ರ(Narendra Modi) ಮೋದಿಯವರು ಪ್ರಶಸ್ತಿ ನೀಡಲಿದ್ದಾರೆ. ರಮೇಶ್ ನಾಯಕ್‌ಗೆ ಹಣ್ಣುಗಳ ಮೇಲೆ ವಿಶೇಷ ಪ್ರೀತಿಯಿದ್ದು, ಯಾವುದೇ ರಾಸಾಯನಿಕ ಕೆಮಿಕಲ್  ಬಳಸದೆ ಹಣ್ಣುಗಳನ್ನು ಬೆಳೆಯುತ್ತಾರೆ. ಅದರ   ಜತೆಗೆ ತಾವೇ  ಹಣ್ಣುಗಳನ್ನು ಸ್ವಚ್ಛಗೊಳಿಸಿ ಕತ್ತರಿಸಿ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಕರಾವಳಿ ಕರ್ನಾಟಕದಲ್ಲಿ ಹಣ್ಣುಗಳ ವ್ಯಾಪಾರ ಮಾಡಿ ಸೈ ಎನಸಿ ಕೊಂಡಿದ್ದಾರೆ. ಒಂದೇ ರೀತಿಯ ಹಣ್ಣುಗಳನ್ನು ಬೆಳೆಯದೆ ವಿವಿಧ  ತಳಿಯ ಹಲಸಿನ ಹಣ್ಣನ್ನುಗಳನ್ನು ಸಹ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ತಳಿಗಳ ಬಗ್ಗೆ ಗ್ರಾಹಕರಿಗೆ ತಿಳಿಸಿ ಉತ್ತಮ ರುಚಿಯ ಶುಚಿಯಾದ ಹಲಸಿನ  ಬಾಕ್ಸ್ ಅನ್ನು ಹೋಂ ಮಾಡುತ್ತಾರೆ.  ಪ್ರಾರಂಭದಲ್ಲಿ ಚಿಕ್ಕದಾಗಿ ಶುರು ಮಾಡಿದ  ಹಣ್ಣುಗಳ ಬಾಕ್ಸ್ ಮಾರಾಟ ನಂತರದ ದಿನಗಳಲ್ಲಿ ಅನಾನಸ್, ಪಪ್ಪಾಯ, ಡ್ರಾಗನ್ ಹೀಗೆ ತೋಟದಲ್ಲಿ ಬೆಳೆಯುವ ಎಲ್ಲ ಹಣ್ಣುಗಳನ್ನು ಬೆಳೆದು ಯಶಸ್ಸು ಕಂಡುಕೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಯಶ್ 'ಟಾಕ್ಸಿಕ್'ಗೆ ಶುರುವಾಯ್ತು ಬೇಡಿಕೆ! ಚಿತ್ರರಂಗದ ಮಂದಿ ಕಣ್ಣು ಕೆಂಪಗಾಯ್ತು..!

Video Top Stories