ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸಿಲುಕಿದ್ದ ಬೈಕ್ ಸವಾರನ ರಕ್ಷಣೆ

ಕಲ್ಭುರ್ಗಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪ್ರವಾಹದಲ್ಲಿ ಬೈಕ್ ಸವಾರನೊಬ್ಬ ಸಿಲುಕಿಕೊಂಡಿದ್ದು ಆತನನ್ನು ರಕ್ಷಣೆ ಮಾಡಲಾಗಿದೆ. ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಬೈಕ್ ಓಡಿಸುವ ಸಾಹಸ ಮಾಡಿದ್ದಾರೆ ಬೈಕ್ ಸವಾರ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 13): ಕಲ್ಭುರ್ಗಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪ್ರವಾಹದಲ್ಲಿ ಬೈಕ್ ಸವಾರನೊಬ್ಬ ಸಿಲುಕಿಕೊಂಡಿದ್ದು ಆತನನ್ನು ರಕ್ಷಣೆ ಮಾಡಲಾಗಿದೆ. ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಬೈಕ್ ಓಡಿಸುವ ಸಾಹಸ ಮಾಡಿದ್ದಾರೆ ಬೈಕ್ ಸವಾರ. ಆತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಬಹಿರ್ದೆಸೆಗೆ ಹೋಗಿದ್ದ ಯುವಕ 3 ದಿನಗಳ ಹಿಂದೆ ನಾಪತ್ತೆ; ಮುಂದುವರೆದ ಶೋಧ ಕಾರ್ಯ

ಬೈಕ್ ಮಾತ್ರವಲ್ಲ, ಬಸ್ಸನ್ನು ಕೂಡಾ ಚಾಲನೆ ಮಾಡಲಾಗಿದೆ. ಆರಂಭದಲ್ಲಿ ನೀರು ಹೆಚ್ಚು ಕಾಣಿಸುವುದಿಲ್ಲ. ಆರಾಮಾಗಿ ಹೋಗಬಹುದು ಎನಿಸುತ್ತದೆ. ಆದರೆ ಮುಂದೆ ಮುಂದೆ ಹೋಗುತ್ತಿದ್ದಂತೆ ನೀರಿನ ಸೆಳೆವು ಹೆಚ್ಚಾಗುತ್ತದೆ. ಆಗ ಬೈಕ್ ಸಮೇತ ಕೊಚ್ಚಿಕೊಂಡು ಹೋಗುತ್ತದೆ. ಪ್ರಾಣಾಪಾಯವನ್ನು ನಾವೇ ಮೈಮೇಲೆ ಎಳೆದುಕೊಂಡಂತಾಗುತ್ತದೆ. 

Related Video