Asianet Suvarna News Asianet Suvarna News

ಬಹಿರ್ದೆಸೆಗೆ ಹೋಗಿದ್ದ ಯುವಕ 3 ದಿನಗಳ ಹಿಂದೆ ನಾಪತ್ತೆ; ಮುಂದುವರೆದ ಶೋಧ ಕಾರ್ಯ

Oct 13, 2020, 11:13 AM IST

ರಾಯಚೂರು (ಅ. 13): 3 ದಿನಗಳ ಹಿಂದೆ ಮಸ್ಕಿ ಹಳ್ಳದಲ್ಲಿ ಬಹಿರ್ದೆಸೆಗೆ ಹೋಗಿದ್ದ ಚನ್ನಬಸಪ್ಪ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಮೂರು ತೆಪ್ಪಗಳಲ್ಲಿ ಈಜು ತಜ್ಞರು ಹುಡುಕಾಟ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕೂಡಾ ಕಾರ್ಯಾಚರಣೆ ನಡೆಸುತ್ತಿದ್ದು, ಕಾರ್ಯಾಚರಣೆ ವೇಳೆ ಹಗ್ಗ ತುಂಡಾಗಿ ಸಿಬ್ಬಂದಿ ನೀರು ಪಾಲಾಗಿದ್ದರು. ಲೈಫ್ ಜಾಕೆಟ್ ಇದ್ದಿದ್ದರಿಂದ  ಈಜಿ ದಡ ಸೇರಿದ್ದಾರೆ. 

ಬೆಳಗಾವಿಯಲ್ಲಿ ಭಾರೀ ಮಳೆ; ಸವದತ್ತಿ ಕೋಟೆಯ ಒಂದು ಭಾಗ ಕುಸಿತ

ಚನ್ನಬಸಪ್ಪ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಗನನ್ನು ಹುಡುಕಿಕೊಡಿ ಎಂದು ತಾಯಿ ಕಣ್ಣೀರಿಡುತ್ತಿದ್ದಾರೆ.