ಅರಣ್ಯ ಇಲಾಖೆಯಿಂದಲೇ ಕಾಡು ನಾಶ! ತಡೆಯೋರು ಯಾರು ಇಲ್ವೆ?

ಅರಣ್ಯ ಇಲಾಖೆಯಿಂದಲೇ ಕಾಡು ನಾಶ/ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ  ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅರಣ್ಯ ನಾಶ/ ಜೆಸಿಬಿ ಬಳಸಿ ಅರಣ್ಯ ನಾಶ ಮಾಡುತ್ತಿರುವ ಇಲಾಖೆ

First Published Jan 24, 2021, 7:41 PM IST | Last Updated Jan 24, 2021, 7:43 PM IST

ದಾಂಡೇಲಿ( ಜ. 24)  ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ  ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಕೊರ್ ಪ್ರದೇಶದೊಳಗೆ ಅರಣ್ಯ ಇಲಾಖೆಯೇ ಹಲವು ಮರಗಳನ್ನು ಉರುಳಿಸಿ ಸಫಾರಿಗಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. 

ಆನೆಗೆ ಬೆಂಕಿ ಇಟ್ಟ ಕಿರಾತಕರು... ಕಣ್ಣೀರಿಟ್ಟ ಸಿಬ್ಬಂದಿ

ಕಾಡಿನೊಳಗೆ ಜೆಸಿಬಿ ಬಳಸಿ ರಸ್ತೆ ಮಾಡಲಾಗುತ್ತಿದ್ದು, ಈಗಾಗಲೇ ಹಲವು ಮರಗಳು ಧರಾಶಾಹಿಯಾಗಿವೆ. ಕಾಡು ಭಾಗಗಳಲ್ಲಿ ನೆಲೆಸಿರುವ ಜನರು ಮನೆ ರಿಪೇರಿ ಮಾಡಲು, ರಸ್ತೆ ನಿರ್ಮಿಸಿಕೊಳ್ಳಲು, ಕುಡಿಯುವ ನೀರಿನ ಪೈಪ್ ಹಾಕಿಕೊಳ್ಳಲು ಅಡ್ಡಗಾಲಿಡುವ ಅರಣ್ಯ ಇಲಾಖೆ, ತಮ್ಮ‌ ಇಲಾಖೆಗೆ ಆರ್ಥಿಕ ಲಾಭಕ್ಕಾಗಿ   ಸಫಾರಿಯ ಉದ್ದೇಶದಿಂದ ಮರಗಳನ್ನು ಕಡಿದು ಕಾಡಿನ‌ ಮಧ್ಯೆ ರಸ್ತೆ ಮಾಡಿಕೊಳ್ಳುತ್ತಿದೆ. ಅಧಿಕಾರಿಗಳು ತಪ್ಪು ಮಾಡಿದಾಗ ಅವರನ್ನು ಕೇಳುವವರು ಯಾರೂ ಇಲ್ಲವೇ? ಜನರಿಗೊಂದು ನ್ಯಾಯ, ಅಧಿಕಾರಿಗಳಿಗೊಂದು ನ್ಯಾಯವೇ?ಎಂದು ಆಕ್ರೋಶ ವ್ಯಕ್ತಪಡಿಸಿರುವ  ಸ್ಥಳೀಯರು ಹಾಗೂ ಕಾಳಿ ಬ್ರಿಗೇಡ್ ಸಂಘಟನೆ, ಸಫಾರಿಗಾಗಿ ಕಾಡು ನಾಶ ಮಾಡುವುದನ್ನು ನಿಲ್ಲಿಸದಿದ್ದಲ್ಲಿ  ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.