Asianet Suvarna News Asianet Suvarna News

AI ಕ್ಯಾಮೆರಾ ಮೊರೆ ಹೋದ ಸಾರಿಗೆ ಇಲಾಖೆ: ಸವಾರರ ಪಿನ್ ಟು ಪಿನ್ ಮಾಹಿತಿ ಸೆರೆ ಹಿಡಿಯುವ ಕ್ಯಾಮೆರಾ

ಉದ್ಯಾನನಗರಿಯಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮನಸೋ ಇಚ್ಛೆ ವಾಹನ ಚಲಾಯಿಸುವುದರಿಂದ ಅಪಘಾತ ಪ್ರಮಾಣ, ಸಂಚಾರ ದಟ್ಟಣೆ ಕೂಡ ಹೆಚ್ಚಾಗ್ತಿದೆ. ಇದನ್ನು ಮಟ್ಟಹಾಕಲು ಸಾರಿಗೆ ಇಲಾಖೆ ಹೊಸ ಅಸ್ತ್ರದ ಮೊರೆ ಹೊಗಲಿದೆಯಂತೆ. ಅದೇ ಎಐ ಅಸ್ತ್ರ.
 

ಬೆಂಗಳೂರು ಬೆಳೆಯುತ್ತಿದ್ದಂತೆ ವಾಹನ ದಟ್ಟನೆ ಕೂಡ ಹೆಚ್ಚಾಗ್ತಿದೆ. ಒಂದೂವರೆ ಕೋಟಿ ಜನ ಇರೋ ರಾಜಧಾನಿಯಲ್ಲಿ ಒಂದು ಕೋಟಿಗಿಂತ ಅಧಿಕ ವಾಹನಗಳಿವೆ. ವಾಹನಗಳು ಹೆಚ್ಚಾದಂತೆ ನಿಯಮ ಉಲ್ಲಂಘನೆ ಕೂಡ ಮಿತಿ ಮೀರಿದೆ. ಇದ್ರಿಂದ ಅಪಘಾತ ಸಂಖ್ಯೆಯೂ ಏರತೊಡಗಿದೆ. ಈ ಸಮಸ್ಯೆ ಬಗೆಹರಿಸೋದು ಹೇಗಪ್ಪಾ ಅಂತಾ ತಲೆ ಮೇಲೆ ಕೈಹೊತ್ತು ಕುಳಿತಿದ್ದ ಸಾರಿಗೆ ಇಲಾಖೆ ಹೊಸ ಐಡಿಯಾ ಮಾಡಿದೆ. ಮುಖ್ಯರಸ್ತೆಯಲ್ಲೇನೊ  ಪೊಲೀಸರು(Police) ಇರ್ತಿದ್ರು, ರೂಲ್ಸ್ ಬ್ರೇಕ್ ಮಾಡಿದವರನ್ನ ಸೆರೆ ಹಿಡಿತಿದ್ರು. ಆದ್ರೆ ಏರಿಯಾ ಒಳಗಿನ ರಸ್ತೆಗಳಲ್ಲಿ ಕೆಲವು ಪುಂಡರನ್ನ ಹೇಳೋರು ಕೇಳೋರೆ ಇರಲಿಲ್ಲ. ಇಂಥವೆಕ್ಕೆಲ್ಲ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ ಮತ್ತು ಟ್ರಾಫಿಕ್ ಪೊಲೀಸರು(Traffic Police), ಜಂಟಿಯಾಗಿ ಕಾರ್ಯಾಚರಣೆಗಿಳಿದಿದ್ದಾರೆ. ನಗರದ ಹಲವೆಡೆ AI  ಕ್ಯಾಮೆರಾ(AI Camera) ಅಳವಡಿಸುವ ಮೂಲಕ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣಿಡೋಕೆ ಪ್ಲಾನ್ ಮಾಡಿದೆ. ಸಾಮಾನ್ಯ ಕ್ಯಾಮೆರಾಗಳು ಸವಾರರ ಚಲನವಲನ ಮಾತ್ರ ಸೆರೆ ಹಿಡಿಯುತ್ತವೆ. ಆದರೆ ಎಐ ಕ್ಯಾಮೆರಾ ವಾಹನದ ವೇಗ, ಪಥ, ಶಿಸ್ತು ಉಲ್ಲಂಘನೆ, ಚಾಲಕರ ಸೀಟ್ ಬೆಲ್ಟ್ ಸೇರಿದಂತೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಾಹನದ ನಂಬರ್ ಪ್ಲೇಟ್ ಸಮೇತ ಕ್ಯಾಪ್ಚರ್ ಮಾಡಲಿದೆ. ಎಐ ಸರಿಸುಮಾರು 200-250 ಮೀಟರ್ ದೂರದವರೆಗೂ ದೃಶ್ಯಾವಳಿಯನ್ನ ಸೆರೆಹಿಡಿಯಬಲ್ಲದು. ಎಐ ಕ್ಯಾಮೆರಾಗಳನ್ನು ಸಾರಿಗೆ ಇಲಾಖೆಯ ವೆಬ್‌ ಆಧಾರಿತ ಸಾರಥಿ-4 ಮತ್ತು ವಾಹನ್‌-4 ತಂತ್ರಾಂಶದ ಜೊತೆ ಕನೆಕ್ಟ್ ಮಾಡಲಾಗುತ್ತೆ. ಎಐ ಕ್ಯಾಮೆರಾಗಳಲ್ಲಿ ವಾಹನದ ನೋಂದಣಿ ಸಂಖ್ಯೆ ಸೆರೆಯಾದ ತಕ್ಷಣ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವ್ಯಕ್ತಿಯ ಸಂಪೂರ್ಣ ವಿವರ ಇಲಾಖೆ ಸಿಬ್ಬಂದಿಗೆ ಬೆರಳ ತುದಿಯಲ್ಲೇ ಸಿಗಲಿದೆ. ಎಐ ಕ್ಯಾಮೆರಾದಿಂದ ವಾಹನದ ಪರವಾನಗಿ, ಕಾರ್ಯಕ್ಷಮತೆ ಪ್ರಮಾಣಪತ್ರ, ವಿಮೆ ಸೇರಿದಂತೆ ಇತರೆ ದಾಖಲೆಗಳು ಚಾಲ್ತಿಯಲ್ಲಿವೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ. ಹಿಂದಿನ ನಿಯಮ ಉಲ್ಲಂಘನೆ ಪ್ರಕರಣಗಳ ಮಾಹಿತಿಯೂ ಕ್ಷಣ ಮಾತ್ರದಲ್ಲಿ ಸಿಗಲಿದೆ.

ಇದನ್ನೂ ವೀಕ್ಷಿಸಿ:  ಮತ್ತೆ ಸದ್ದು ಮಾಡ್ತಿದೆ ಸ್ಯಾಂಡ್ ಮಾಫಿಯಾ: ನದಿ ಒಡಲನ್ನೇ ಕೊರೆಯತ್ತಿದ್ದಾರೆ ಮರಳು ಗಳ್ಳರು