Asianet Suvarna News Asianet Suvarna News

ಮತ್ತೆ ಸದ್ದು ಮಾಡ್ತಿದೆ ಸ್ಯಾಂಡ್ ಮಾಫಿಯಾ: ನದಿ ಒಡಲನ್ನೇ ಕೊರೆಯತ್ತಿದ್ದಾರೆ ಮರಳು ಗಳ್ಳರು

ಜಯಮಂಗಲಿ ನದಿ ತುಮಕೂರು ಜಿಲ್ಲೆಯ ಎರಡು ತಾಲೂಕುಗಳ ರೈತರ ಜೀವನಾಡಿಯಾಗಿದೆ. ಸುಮಾರು 30 ವರ್ಷಗಳ ಕಾಲ ನದಿಯಲ್ಲಿ ನೀರು ಕಾಣದಾಗಿತ್ತು. ಕಳೆದ ವರ್ಷ ವ್ಯಾಪಕ ಮಳೆಯಿಂದಾಗಿ ನೆರೆ ಉಂಟಾಗಿ ಮೈದುಂಬಿ ಹರಿದಿತ್ತು. ಈ ಭಾರಿ ಮಳೆ‌ ಬಾರದ‌ ಪರಿಣಾಮ‌ ನದಿ ಒಡಲು ನೀರಿಲದೆ ಮರಳಿನಿಂದ ತುಂಬಿ ಹೋಗಿದೆ.  ಇದೀಗ ಸಮೃದ್ಧಿಯಾಗಿ ಶೇಖರಣೆಯಾಗಿರುವ ಮರಳಿನ ಮೇಲೆ ದಂಧೆಕೋರರ ಕಣ್ಣು ಬಿದಿದೆ.
 

ಇಷ್ಟು ದಿನ ಸೈಲೆಂಟ್ ಆಗಿದ್ದ ಸ್ಯಾಂಡ್ ಮಾಫಿಯಾ(Sand Mafia) ಮತ್ತೆ ಸದ್ದು ಮಾಡ್ತಿದೆ. ನದಿಯ ಒಡಲನ್ನೇ ಬಗೆದು ಹಣ ಮಾಡಲು ಹೊರಟಿದ್ದಾರೆ.. ಇಲ್ನೋಡಿ ಟ್ರ್ಯಾಕ್ಟರ್ಗಳನ್ನು ತಂದು ಮರಳನ್ನ ತುಂಬಲು ರೆಡಿಯಾಗಿದ್ದಾರೆ.. ಇದು ತುಮಕೂರಿನ(Tumakuru) ದೇವರಾಯದುರ್ಗದಲ್ಲಿ ಜನಿಸುವ ಜಯಮಂಗಲಿ ನದಿ ತೀರದಲ್ಲಿ ಕಂಡುಬರುವ ದೃಶ್ಯ. ಜಯಮಂಗಲಿ ನದಿ ಮೇಲೆ ಮರಳು ಮಾಫಿಯಾ ದಂಧೆಕೋರರ ಕಣ್ಣು ಬಿದ್ದಿದೆ. ಕೊರಟೆಗೆರೆ ಹಾಗೂ ಮಧುಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಮಧುಗಿರಿಯ ಕೊಂಡವಾಡಿ, ಅಕ್ಕಲಾಪುರ, ಕುರುಡಿ, ಕೊಡ್ಲಾಪುರ, ಪುರವರ, ಕೊಡಿಗೇನಹಳ್ಳಿ  ಹಾಗೂ‌ ಕೊರಟಗೆರೆಯ ಮೊರ್ಗಾನಹಳ್ಳಿ ಕೆಜಿ. ಬೇವಿನಹಳ್ಳಿಯಲ್ಲಿ ಮರಳುಗಾರಿಕೆ ಮಾಡಲಾಗುತ್ತಿದೆ. ರಾತ್ರಿ-ಹಗಲು ರಾಜಾರೋಷವಾಗಿ ಮರಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಅಕ್ರಮ‌ ಮರಳುಗಾರಿಕೆ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆ, ಕೊರಟಗೆರೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಅಖಾಡಕ್ಕೆ ಇಳಿದಿದ್ದಾರೆ.‌ ಮಧ್ಯರಾತ್ರಿ ಖುದ್ದು ಜಯಮಂಗಲಿ ನದಿ ಹರಿಯುವ ಗ್ರಾಮಗಳಲ್ಲಿ ರೌಂಡ್ಸ್ ಹಾಕಿ, ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ.  ತಹಶೀಲ್ದಾರ್ ದಾಳಿ ವೇಳೆ ಮರಳು ತುಂಬುತ್ತಿದ್ದ ದಂಧೆಕೋರರು ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ. 

Video Top Stories