ಕಾಫಿನಾಡಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಂದ ಕಸದ ರಾಶಿ, ಅಧಿಕಾರಿಗಳು, ಸ್ಥಳೀಯರಿಂದ ಸ್ವಚ್ಛತಾ ಅಭಿಯಾನ
ಲಾಕ್‌ಡೌನ್ ತೆರವು ಬಳಿಕ ಕಾಫಿನಾಡು ಚಿಕ್ಕಮಗಳೂರಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಬರುವವರು ಇಲ್ಲಿನ ಸೌಂದರ್ಯವನ್ನ ಸವಿದು ಹೋದರೆ ನೋ ಪ್ರಾಬ್ಲಂ. ಆದ್ರೆ, ಹಾಗಾಗ್ತಿಲ್ಲ.
ಬೆಂಗಳೂರು (ಅ.29): ಲಾಕ್‌ಡೌನ್ ತೆರವು ಬಳಿಕ ಕಾಫಿನಾಡು ಚಿಕ್ಕಮಗಳೂರಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಬರುವವರು ಇಲ್ಲಿನ ಸೌಂದರ್ಯವನ್ನ ಸವಿದು ಹೋದರೆ ನೋ ಪ್ರಾಬ್ಲಂ. ಆದ್ರೆ, ಹಾಗಾಗ್ತಿಲ್ಲ. ಮದ್ಯ ಹಾಗೂ ನೀರಿನ ಬಾಟಲಿ, ಪ್ಲಾಸ್ಟಿಕ್‌ಗಳನ್ನು ಇಲ್ಲಿಯೇ ಹಾಕುತ್ತಿದ್ದಾರೆ. ಇದರಿಂದ ಇಲ್ಲಿನ ಸೌಂದರ್ಯವೂ ನಶಿಸುತ್ತಿದೆ.
ಪ್ರವಾಸಿಗರಿಂದ ಕಸದ ರಾಶಿಯಾಗಿದೆ ಬಲ್ಲಾಳರಾಯನ ದುರ್ಗ, ಸ್ಥಳೀಯರ ಆಕ್ರೋಶ
ಜಿಲ್ಲೆಯ ಮುಳ್ಳಯ್ಯನಗಿರಿ, ಬಾಬಾಬುಡುನ್ ಗಿರಿ, ಮಾಣಿಕ್ಯಧಾರದಲ್ಲಿ ಅಧಿಕಾರಿಗಳು ನಗರಸಭೆ ಸಿಬ್ಬಂದಿಗಳು , ಸ್ಥಳೀಯರು ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಪಾಪವನ್ನ ತೊಳೆದಿದ್ದಾರೆ. ಸಿಬ್ಬಂದಿಗಳು ಸ್ವಚ್ಚತಾ ಅಭಿಯಾನವನ್ನು ನಡೆಸಿದರು. ಹತ್ತರಿಂದ ಹದಿನೈದು ಚೀಲದಷ್ಟು ಮದ್ಯ ಹಾಗೂ ವಾಟರ್ ಬಾಟಲಿ, ಪ್ಲಾಸ್ಟಿಕ್ ಲೋಟ, ತಟ್ಟೆಯನ್ನ, ಬಟ್ಟೆಯನ್ನು ಚೀಲದಲ್ಲಿ ತುಂಬಿ ಬಿಸಾಡಿದ್ದಾರೆ. ಜಿಲ್ಲಾಡಳಿತ ಇಲ್ಲಿನ ಸೌಂದರ್ಯ ಉಳಿವಿಗಾಗಿ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ತಪ್ಪು ಮಾಡಿದವರಿಗೆ ಹೆಚ್ಚಿನ ಫೈನ ಹಾಕುವ ಯೋಚನೆಯನ್ನು ಮಾಡುತ್ತಿದೆ.