Asianet Suvarna News Asianet Suvarna News

ಪ್ರವಾಸಿಗರಿಂದ ಕಸದ ರಾಶಿಯಾಗಿದೆ ಬಲ್ಲಾಳರಾಯನ ದುರ್ಗ, ಸ್ಥಳೀಯರ ಆಕ್ರೋಶ

- ಟ್ರಕ್ಕಿಂಗ್ ಪ್ರಿಯರಿಗೆ ಹಾಟ್ ಫೆವರೇಟ್ ಸ್ಪಾಟ್ ಬಲ್ಲಾಳರಾಯನ ದುರ್ಗ

- ಬಲ್ಲಾಳರಾಯನ ದುರ್ಗದಲ್ಲಿ ಪ್ರವಾಸಿಗರಿಂದ ಫುಲ್‌ ಮೋಜು ಮಸ್ತಿ

- ಪ್ರವಾಸಿಗರಿಂದ ಕಸದ ರಾಶಿಯಾಗಿರುವ ರಮ್ಯ ರಮಣೀಯ ಪ್ರವಾಸಿ ತಾಣ

First Published Oct 27, 2021, 5:29 PM IST | Last Updated Oct 27, 2021, 5:29 PM IST

ಚಿಕ್ಕಮಗಳೂರು (ಅ. 27):  ಕಾಫಿನಾಡಿನ ಮುಳ್ಳಯ್ಯನಗಿರಿ, ದೇವರಮನೆ ಗುಡ್ಡ, ದತ್ತಪೀಠಗಳಂತೆ  ಬಲ್ಲಾಳರಾಯನ ದುರ್ಗ ಸಹ ಪ್ರವಾಸಿಗರ ನೆಚ್ಚಿನ ಹಾಟ್ ಸ್ಪಾಟ್. ಈ ಬಲ್ಲಾಳರಾಯನ ದುರ್ಗದ ಪ್ರವಾಸಿ ತಾಣಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಇದರ ಸಮೀಪವೇ ರಾಣಿಝರಿ ಸಹ ಇದೆ. ಎತ್ತರದ ಪ್ರದೇಶದಿಂದ ಧುಮ್ಮುಕ್ಕುವ ಜಲಪಾತದ ಸೌಂದರ್ಯ ನೋಡುಗರ ಕಣ್ಣಿಗೆ ಕಟ್ಟುವಂತಿದೆ. 

ಪಾಳು ಬಿದ್ದ ಏತ ನೀರಾವರಿ ಯೋಜನೆ: ರೈತರಿಗಿಲ್ಲ ಉಪಯೋಗ

ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿ ನೀರಿನ ಬಾಟಲಿ, ಮದ್ಯದ ಬಾಟಲಿಗಳು ಹಾಗೂ ತಿಂಡಿ-ತಿನಿಸುಗಳನ್ನ ತಿಂದು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕೃತಿ ಸೌಂದರ್ಯವನ್ನ ಸವಿಯಲು ಬಂದ ಪ್ರವಾಸಿಗರು ಪ್ರವಾಸಿಗರ ವಿರುದ್ಧವೇ ಕಿಡಿ ಕಾರಿದ್ದಾರೆ. ಈ ತಾಣ ನಮ್ಮದು ನಾವು ಉಳಿಸಿ-ಬೆಳೆಸಬೇಕು ಅನ್ನೋ ಮನೋಭಾವ ಪ್ರವಾಸಿಗರಲ್ಲಿ ಬರಬೇಕು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಅಂತ ಆಗ್ರಹಿಸಿದ್ದಾರೆ.