Asianet Suvarna News Asianet Suvarna News

ಬೆಂಗಳೂರಿನ ಫರ್ನಿಚರ್ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್: ನಿಮ್ಮ ನೆಚ್ಚಿನ ಪೀಠೋಪಕರಣಗಳ ಖರೀದಿಗೆ ಇಂದೇ ಕೊನೆ ದಿನ

ದೊಡ್ಡ ಫರ್ನಿಚರ್ ಎಕ್ಸ್ಪೋ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಮೂರು ದಿನಗಳಿಂದ ಎಕ್ಸ್ಪೋಗೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ತಮಗಿಷ್ಟವಾದ ಪೀಠೋಪಕರಣಗಳನ್ನ ಖರೀದಿ ಮಾಡ್ತಿದ್ದಾರೆ.ಇಂದು ಎಕ್ಸ್ಪೋಗೆ ಕೊನೆ ದಿನವಾಗಿದ್ದು, ಮಿಸ್ ಮಾಡದೇ ಫರ್ನಿಚರ್ ಎಕ್ಸ್ಪೋಗೆ ಭೇಟಿ ನೀಡಿ  ನಿಮಗಿಷ್ಠವಾದ ಪೀಠೋಪಕರಣಗಳನ್ನ ಖರೀದಿಸಿ.

ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದೊಂದಿಗೆ ಆಯೋಜಿಸಿರುವ ಬೆಂಗಳೂರಿನ(Bengaluru) ಅತೀ ದೊಡ್ಡ ಫರ್ನಿಚರ್ ಎಕ್ಸ್ಪೋಗೆ(Furniture Expo) ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.. ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ನಲ್ಲಿ ನಡೆಯುತ್ತಿರುವ ಫರ್ನಿಚರ್ ಎಕ್ಸ್ಪೋಗೆ ಇಂದು ಕೊನೆಯ ದಿನ. 500 ರೂಪಾಯಿಯಿಂದ ಶುರುವಾಗಿ 30 ಲಕ್ಷ ರೂಪಾಯಿವರೆಗಿನ ಫರ್ನಿಚರ್ಗಳಿದ್ದು, ಶೇ. 70 ರವರೆಗೂ ಡಿಸ್ಕೌಂಟ್  ನೀಡಲಾಗುತ್ತಿದೆ. ನಾಲ್ಕು ದಿನಗಳ ಕಾಲ ಆಯೋಜಿಸಿದ್ದ ಫರ್ನಿಚರ್ ಎಕ್ಸ್ಪೋಗೆ ನಿತ್ಯವೂ ಸಾವಿರಾರು ಮಂದಿ ವಿಸ್ಟ ಕೊಟ್ಟು ತಮ್ಮಿಷ್ಠದ ಪೀಠೋಪಕರಣ ಖರೀದಿಸುತ್ತಿದ್ದಾರೆ. ಎಕ್ಸ್ಪೋದಲ್ಲಿ ಡಯಾನಾ ಮಾರ್ಬಲ್ ಡೈನಿಂಗ್, ಬರ್ಮಾ ಟೀಕ್ ವುಡ್, ಹ್ಯಾಂಡ್ ಮೇಡ್ ಫರ್ನಿಚರ್, ಲೆದರ್ ಫರ್ನಿಚರ್ , ಮನೆ ಅಲಂಕಾರಿಕ ವಸ್ತುಗಳು ಸೇರಿದಂತೆ ವಿದೇಶಕ್ಕೆ ರಫ್ತಾಗುವ ಬ್ರಾಂಡೆಡ್ ಫರ್ನಿಚರ್ಗಳು ಕೈಗೆಟುಕುವ ಬೆಲೆಯಲ್ಲಿ  ಸಿಕ್ತಿದೆ. ವಿವಿಧ ಬ್ರಾಂಡ್ಗಳ 75 ಮಳಿಗೆಗಳಲ್ಲಿ ಬಗೆ ಬಗೆಯ ಪೀಠೋಪಕರಣ ಗ್ರಾಹಕರ ಸಳೆಯುತ್ತಿವೆ. ಬೆಂಗಳೂರು ಮಾತ್ರವಲ್ಲದೆ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಜನ ಎಕ್ಸ್ಪೋಗೆ ಭೇಟಿ ಕೊಟ್ಟು ಪೀಠೋಪಕರಣ ಖರೀದಿಸುತ್ತಿದ್ದಾರೆ.ಕ್ವಾಲಿಟಿ ಬ್ರಾಂಡೆಡ್ ಫರ್ನಿಚರ್ಗಳು ಕೈಗೆಟುಕುವ ಬೆಲೆಯಲ್ಲಿ ಸಿಕ್ತಿದ್ದು. ಬೆಂಗಳೂರಿನ ಅತಿ ದೊಡ್ಡ ಫರ್ನಿಚರ್ ಮೇಳಕ್ಕೆ ಇಂದೇ ಕೊನೆಯ ದಿನ. ಮಿಸ್ ಮಾಡದೇ ಫರ್ನಿಚರ್ ಎಕ್ಸ್ ಪೋಗೆ ಭೇಟಿ ನೀಡಿ, ನಿಮಗಿಷ್ಟವಾಗಿದ್ದನ್ನು ಖರೀದಿಸಿ.

ಇದನ್ನೂ ವೀಕ್ಷಿಸಿ:  ಕೃಷಿಯಿಂದ ವರ್ಷಕ್ಕೆ ಕೋಟಿ ಆದಾಯಗಳಿಸುತ್ತಿರುವ ಉದ್ಯಮಿ: ಕುಂದಾಪುರದ ಹೈಟೆಕ್ ರೈತನಿಗೆ ಒಲಿದು ಬಂತು ಬಿಲಿಯನೇರ್ ಪ್ರಶಸ್ತಿ

Video Top Stories