ಮೈಸೂರಿನಲ್ಲಿ ಮತ್ತೆ ಹೊತ್ತಿಕೊಳ್ತಾ ಟಿಪ್ಪು ವಿವಾದದ ಕಿಡಿ..

ರಾಜ್ಯದಲ್ಲಿ ಮತ್ತೆ ಟಿಪ್ಪು ವಿವಾದ ಜೋರಾಗಿದ್ದು, ಪಠ್ಯ ಹಾಗೂ ಜಯಂತಿ ಬಳಿಕ ಟಿಪ್ಪು ನಾಟಕ ಸರದಿ ಶುರುವಾಗುತ್ತಿದೆ.

Share this Video
  • FB
  • Linkdin
  • Whatsapp

ಟಿಪ್ಪು ಸುಲ್ತಾನ್ ನಿಜ ಇತಿಹಾಸ ತಿಳಿಯಲು 'ಟಿಪ್ಪು ನಿಜ ಕನಸುಗಳು' ನಾಟಕ ಪ್ರದರ್ಶನಕ್ಕೆ ತಯಾರಿ ನಡೆದಿದೆ. ನಾಟಕದಲ್ಲಿ ಟಿಪ್ಪು ಬಗೆಗಿನ ಸತ್ಯಗಳ ಅನಾವರಣಕ್ಕೆ ಪ್ಲಾನ್‌ ಮಾಡಲಾಗಿದ್ದು, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ನಾಟಕ ರಚಿಸಿದ್ದಾರೆ. ಟಿಪ್ಪು ಹಿಂದೂಗಳ ಮೇಲೆ ನಡೆಸಿರುವ ಕ್ರೌರ್ಯಗಳ ಅನಾವರಣ ಮಾಡಲಾಗುತ್ತಿದ್ದು, ಟಿಪ್ಪು ಬಗೆಗಿನ ಸತ್ಯ ತಿಳಿಸಲು ಅಡ್ಡಂಡ ಕಾರ್ಯಪ್ಪ ತಂಡ ಮುಂದಾಗಿದೆ. ನವೆಂಬರ್‌ 20ರಿಂದ ರಾಜ್ಯಾದ್ಯಂತ ನಾಟಕ ಪ್ರದರ್ಶನಕ್ಕೆ ತಯಾರಿ ನಡೆದಿದ್ದು, ರಂಗಾಯಣದ ಭೂಮಿ ಗೀತಾ ಅಂಗಳದಲ್ಲಿ ರಿಹರ್ಸಲ್‌ ಮಾಡಲಾಗುತ್ತಿದೆ. 3 ಗಂಟೆ 10 ನಿಮಿಷದಲ್ಲಿ ಟಿಪ್ಪುವಿನ ಮತ್ತೊಂದು ಮುಖ ಅನಾವರಣ ನಡೆಯಲಿದ್ದು, ನಾಟಕಕ್ಕೂ ಮುಂಚೆ ಎಸ್‌.ಎಲ್‌ ಬೈರಪ್ಪರಿಂದ ಪುಸ್ತಕ ಬಿಡುಗಡೆಯಾಗಲಿದೆ.

ಗೋಮೂತ್ರ ಸಿಂಪಡಿಸಿ ಈದ್ಗಾ ಮೈದಾನ ಶುದ್ಧೀಕರಣ

Related Video