Asianet Suvarna News Asianet Suvarna News

ಗೋಮೂತ್ರ ಸಿಂಪಡಿಸಿ ಈದ್ಗಾ ಮೈದಾನ ಶುದ್ಧೀಕರಣ

ಟಿಪ್ಪು ಜಯಂತಿ ಆಚರಣೆ ಮಾಡಿದ ಮೈದಾನ ಅಪವಿತ್ರವಾಗಿದೆಯೆಂದು ಗೋಮೂತ್ರದ ಮೂಲಕ ಮೈದಾನ ಶುದ್ಧೀಕರಣ ಮಾಡಿ ಕನಕದಾಸ ಜಯಂತಿ ಆಚರಣ ಮಾಡಿದ ಶ್ರೀರಾಮಸೇನೆ.

Idga Ground purification by sprinkling cow urine SAT
Author
First Published Nov 12, 2022, 11:45 AM IST

ಹುಬ್ಪಳ್ಪ್ಳಿ (ನ.12): ಕಳೆದ ಎರಡು ದಿನಗಳ ಹಿಂದೆ ನಗರದ ಈದ್ಗಾ ಮೈದಾನದಲ್ಲಿ ಕೆಲವು ಸಂಘಟನೆಗಳು ಟಿಪ್ಪು ಜಯಂತಿ ಆಚರಿಸಿದ್ದವು. ಇದರಿಂದ ಮೈದಾನ ಅಪವಿತ್ರವಾಗಿದೆಯೆಂದು ಶ್ರೀರಾಮ ಸೇನೆ ಕಾರ್ಯಕರ್ಯರು ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ನೇತೃತ್ವದಲ್ಲಿ ನಿನ್ನೆ ಗೋಮೂತ್ರ ಸಿಂಪಡಿಸಿ ಮೈದಾನವನ್ನು ಶುದ್ಧೀಕರಣ ಮಾಡಿದರು. ಬಳಿಕ ಮೈದಾನದಲ್ಲಿ ಪೆಂಡಾಲ್‌ ಹಾಕಿ ಕನಕದಾಸರ ದಾಸರ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಸಲ್ಲಿಸಿ ಸಿಹಿ ಹಂಚಿದರು.

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ (Pramod Muthalik)ಸ್ವತಃ ಕಾರ್ಯಕರ್ತರ ಜತೆಗೂಡಿ ಟಿಪ್ಪು (Tippu) ಜಯಂತಿ ಆಚರಣೆ ನಡೆದ ಸ್ಥಳ ಸೇರಿದಂತೆ ಮೈದಾನವನ್ನೆಲ್ಲ ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದರು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ ಮುತಾಲಿಕ್‌, ಇದು ಪವಿತ್ರ ನೆಲವಾಗಿದೆ. ಮತಾಂಧ, ಕ್ರೂರಿ, ಹಿಂದೂ (Hindu) ವಿರೋಧಿ ಜಯಂತಿ ಮಾಡಿ ಇದನ್ನು ಅಪವಿತ್ರಗೊಳಿಸಲಾಗಿದೆ. ಹಾಗಾಗಿ ಗೋಮೂತ್ರದಿಂದ ಶುದ್ಧಗೊಳಿಸಲಾಗಿದೆ. ಚೆನ್ನಮ್ಮ ಮೈದಾನವನ್ನು ಪವಿತ್ರ ಮಾಡಿ ಕನಕದಾಸ (Kanakadasa) ಜಯಂತಿ ಆಚರಿಸಲಾಗಿದೆ.  ಕನಕದಾಸರ ವಿಚಾರ ಇಂದಿಗೂ ಪ್ರಸ್ತುತವಾಗಿದೆ. ಇಂದಿನ ಸಮಾಜದಲ್ಲಿ ಆಗುತ್ತಿರುವ ಒಡಕನ್ನು, ಅಸಮಾನತೆ ದೂರ ಮಾಡುವ ನಿಟ್ಟಿನಲ್ಲಿ ಏಕತೆ ಸ್ಥಾಪಿಸಲು ಸಂತರ ಆದರ್ಶ ಪಾಲಿಸೋಣ ಎಂದರು.

ಹಿಂದೂ ಪದದ ಅರ್ಥ ಅಶ್ಲೀಲ ಎಂದ ಜಾರಕಿಹೊಳಿಗೆ, ಮುತಾಲಿಕ್ ಕ್ಲಾಸ್, ಕಾಂಗ್ರೆಸ್ ಖಂಡನೆ

ಮೇಯರ್ ಕೇಸ್‌ ದಾಖಲಿಸಬೇಕು: 
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Palike) ವಿರೋಧ ಪಕ್ಷದ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದು ಅಕ್ಷಮ್ಯ ಅಪರಾಧ. ವಿಪಕ್ಷದವರು (Opposition) ಸರ್ಕಾರದ ಜಾಗ ಬಿಟ್ಟು ಬೇರೆಡೆ ಜಯಂತಿ ಆಚರಣೆ ಮಾಡಬಹುದಿತ್ತು. ಅವರ ಮೇಲೆ ಮೇಯರ್‌ (Mayor) ಕೇಸ್‌ ಹಾಕಬೇಕು. ಇಲ್ಲದಿದ್ದರೆ ನಾವು ಪ್ರಕರಣ ದಾಖಲಿಸುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.

ಎರಡು ಗಂಟೆ ಮಾತ್ರ ಅವಕಾಶ:
ಬೆಳಗ್ಗೆ 9ರಿಂದ 11ರ ವರೆಗೆ ಈದ್ಗಾ ಮೈದಾನ (Idga Ground)ದಲ್ಲಿ ಕನಕದಾಸ ಜಯಂತಿ ಆಚರಿಸಲು ಮಹಾನಗರ ಪಾಲಿಕೆ ಅನುಮತಿ ನೀಡಿತ್ತು. ಹೀಗಾಗಿ 11 ಗಂಟೆಯಾದ ಕೂಡಲೇ ಶ್ರೀರಾಮಸೇನೆ (Shreeramasene) ಕಾರ್ಯಕರ್ತರನ್ನು ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು (Police) ಮೈದಾನದಿಂದ ಹೊರಕ್ಕೆ ಕಳುಹಿಸಿದರು. ಬಳಿಕ ಕನಕದಾಸರ ಭಾವಚಿತ್ರ ತೆಗೆಯಲು ಶ್ರೀರಾಮಸೇನೆ ಕಾರ್ಯಕರ್ತರಿಗೆ ಪೊಲೀಸರು ಸೂಚಿಸಿದರು. ಈ ವೇಳೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅಪ್ಪಣ್ಣ ದಿವಟಗಿ, ಮಂಜು ಕಾಟಕರ, ಬಸು ದುರ್ಗದ, ಪ್ರವೀಣ ಮಾಳದಕರ ಹಾಗೂ ಮತ್ತಿತರರಿದ್ದರು. ಈದ್ಗಾ ಮೈದಾನದ ಸುತ್ತಲೂ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಭದ್ರತೆ ಮಾಡಲಾಗಿತ್ತು.

ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸಂಘರ್ಷ ನಿಶ್ಚಿತ: ಪ್ರಮೋದ್‌ ಮುತಾಲಿಕ್‌

ಓಬವ್ವ ಜಯಂತಿ ಇಲ್ಲ:
ಈದ್ಗಾ ಮೈದಾನದಲ್ಲಿ ಒನಕೆ ಓಬವ್ವ ಜಯಂತಿ ಆಚರಣೆಗೆ ಅವಕಾಶ ನೀಡುವಂತೆ ನ. 8ರಂದು ಮಹಾನಗರ ಪಾಲಿಕೆಗೆ ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾದ (Republican Party) ಕಾರ್ಯಕರ್ತರು ಮನವಿ ಸಲ್ಲಿಸಿದ್ದರು. ಅದರಂತೆ ಪಾಲಿಕೆ (Palike) ಮಧ್ಯಾಹ್ನ 1ರಿಂದ 3ರ ವರೆಗೆ ಅನುಮತಿ ನೀಡಿತ್ತು. ಆದರೆ ಮುಸ್ಲಿಮರ (muslim's) ಭಾವನೆಗೆ ಧಕ್ಕೆಯಾಗುವ ಹಿನ್ನೆಲೆ ಜಯಂತಿ ಆಚರಣೆ ಮಾಡಲ್ಲ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.
 

Follow Us:
Download App:
  • android
  • ios