ದೇವಸ್ಥಾನದ ಅಂಗಳದಲ್ಲಿ ಅಸಭ್ಯ ವಿಡಿಯೋ: ಕ್ಷಮೆ ಯಾಚಿಸಿದ ಟಿಕ್‌ಟಾಕ್‌ ಸ್ಟಾರ್ಸ್!

ದೇವಸ್ಥಾನದ ಅಂಗಳದಲ್ಲಿ ಟಿಕ್‌ಟಾಕ್ ವಿಡಿಯೋ ಮಾಡಿ ಅಸಭ್ಯ ವರ್ತನೆ ತೋರಿಸಿದ ಪ್ರಕರಣ ಭಾರೀ ಆಕ್ರೋಶಕ್ಕೀಡಾಗಿದೆ. ಸದ್ಯ ಈ ಪ್ರಕರಣದ ಬೆನ್ನಲ್ಲೇ ಇಂತಹ ವರ್ತನೆ ತೋರಿದ ಟಿಕ್‌ಟಾಕ್ ಸ್ಟಾರ್ಸ್‌ ದೇವಸ್ಥಾನಕ್ಕೆ ಆಗಮಿಸಿ ಕ್ಷಮೆ ಯಾಚಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಮಂಗಳೂರು(ಆ.28): ದೇವಸ್ಥಾನದ ಅಂಗಳದಲ್ಲಿ ಟಿಕ್‌ಟಾಕ್ ವಿಡಿಯೋ ಮಾಡಿ ಅಸಭ್ಯ ವರ್ತನೆ ತೋರಿಸಿದ ಪ್ರಕರಣ ಭಾರೀ ಆಕ್ರೋಶಕ್ಕೀಡಾಗಿದೆ. ಸದ್ಯ ಈ ಪ್ರಕರಣದ ಬೆನ್ನಲ್ಲೇ ಇಂತಹ ವರ್ತನೆ ತೋರಿದ ಟಿಕ್‌ಟಾಕ್ ಸ್ಟಾರ್ಸ್‌ ದೇವಸ್ಥಾನಕ್ಕೆ ಆಗಮಿಸಿ ಕ್ಷಮೆ ಯಾಚಿಸಿದ್ದಾರೆ. 

 ಮಂಗಳೂರು ಹೊರವಲಯದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಚಿತ್ರೀಕರಿಸಿದ ಅಸಭ್ಯ ಟಿಕ್‌ಟಾಕ್ ವಿಡಿಯೋ ಸದ್ಯ ಭಾರೀ ಟೀಕೆಗೊಳಗಾಗಿತ್ತು. ಮುಲ್ಕಿಯ ಪ್ರತೀಕ್ ಶೆಟ್ಟಿ ಎಂಬಾತ ಇಬ್ಬರು ಹುಡುಗಿಯರ ಜೊತೆ ಟಿಕ್‌ಟಾಕ್ ಮಾಡಿದ್ದು, ಅಸಭ್ಯ ರೀತಿಯಲ್ಲಿ ವೀಡಿಯೋ ಮಾಡಿರುವುದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ.

ಇಂತಹ ವರ್ತನೆ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಎಂದು ದೇವಳದ ಭಕ್ತರ ಮತ್ತು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿ ಈ ಬಗ್ಗೆ ಮುಲ್ಕಿ ಠಾಣೆಗೆ ದೂರು ನೀಡಿತ್ತು. ಇದರಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವವರು ಕ್ಷಮೆಯಾಚಿಸಲು ಆಗ್ರಹಿಸಲಾಗಿದೆ. ಕ್ಷಮೆಯಾಚಿಸದೇ ಇದ್ರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವ ಎಚ್ಚರಿಕೆಯನ್ನೂ ನೀಡಲಾಗಿತ್ತು. 

Related Video