Assembly election: ಕೋಲಾರ ಕುರುಕ್ಷೇತ್ರದಲ್ಲಿ ಟಿಕೆಟ್ ಕೋಲಾಹಲ!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿವೆ. ಅದರಲ್ಲಿಯೂ ಚಿನ್ನದ ನಾಡಿನಲ್ಲಿ ಚುನಾವಣೆಯ ಅಖಾಡ ರಂಗೇರಿದ್ದು, ಟಿಕೆಟ್ ಫೈಟ್ ಜೋರಾಗಿ ನಡೆಯುತ್ತಿದೆ.
ಕೋಲಾರ (ಡಿ.14): ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿವೆ. ಎಲ್ಲ ಜಿಲ್ಲೆಗಳಲ್ಲಿಯೂ ಮೂರೂ ಪಕ್ಷಗಳಲ್ಲಿ ಟಿಕೆಟ್ ಫೈಟ್ ಜೋರಾಗಿ ನಡೆಯುತ್ತಿದೆ. ಅದರಲ್ಲಿಯೂ ಚಿನ್ನದ ನಾಡಿನಲ್ಲಿ ಚುನಾವಣೆಯ ಅಖಾಡ ರಂಗೇರಿದೆ. ಮಾಜಿ ಮತ್ತು ಹಾಲಿ ಸಚಿವರು, ಶಾಸಕರು ಜೊತೆಗೆ ಹೊಸಬರು ಟಿಕೆಟ್‌ಗಾಗಿ ಫೈಟ್ ನಡೆಸುತ್ತಿದ್ದಾರೆ. ಕಾಂಗ್ರೆಸ್ ಭದ್ರಕೋಟೆ ಎಂದು ಹೇಳಲಾಗುವ ಕೋಲಾರದಲ್ಲಿ ಬಿಜೆಪಿ ಹಿಡಿತ ಸಾಧಿಸಲು ರಣತಂತ್ರವನ್ನು ಹೆಣೆಯುತ್ತಿದೆ. ಶ್ರೀನಿವಾಸಪುರದಲ್ಲಿ ಮಾಜಿ ಶಾಸಕ, ಹಾಲಿ ಶಾಸಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸದಸ್ಯರು, ಮಾಜಿ ಸಚಿವರು ಸೇರಿ ವಿವಿಧ ಸ್ಥಳೀಯ ನಾಯಕರ ಟಿಕೆಟ್ ಪಡೆಯುವ ಪಟ್ಟು ಜೋರಾಗಿ ನಡೆಯುತ್ತಿದೆ. ಬಂಗಾರಪೇಟೆಯಲ್ಲಿ ಹಾಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ರಾಮಚಂದ್ರಪ್ಪ ಮತ್ತು ಮಲ್ಲೇಶ್‌ಬಾಬು ಅವರ ನಡುವೆ ಮೂರು ಪಕ್ಷಗಳಿಂದ ನೇರ ಪೈಪೋಟಿ ಏರ್ಪಡುವ ಸಾಧ್ಯತೆ ಕಂಡುಬರುತ್ತಿದೆ. ಇನ್ನು ಹೊಸಬರು ಕೂಡ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.