ಕಾಂತಾರ ಸಿನಿಮಾ ಹೋಲುವ ಮತ್ತೊಂದು ದೈವ ಪವಾಡ!'ಇದು ಅವನ ಮತ್ತು ನನ್ನ ಲೆಕ್ಕ'ವೆಂದು ಎಚ್ಚರಿಕೆ ಕೊಟ್ಟ ದೈವ!
ಮಂಗಳೂರು ಸ್ಮಾರ್ಟ್ಸಿಟಿ ಕಾಮಗಾರಿ ವಿರುದ್ದ ದೈವ ಮುನಿಸಿಕೊಂಡಿದ್ದು, ದೈವದ ಮಾತು ದಿಕ್ಕರಿಸಿ ಕಾಮಗಾರಿಯನ್ನು ಆರಂಭಿಸಲಾಗಿತ್ತು.
ಕಾಂತಾರ ಸಿನಿಮಾ(Kantara Movie) ಹೋಲುವ ಮತ್ತೊಂದು ದೈವ(Daiva) ಪವಾಡ ಮಂಗಳೂರಿನಲ್ಲಿ ನಡೆದಿದೆ. ಇದು ಅವನ ಮತ್ತು ನನ್ನ ಲೆಕ್ಕ'ವೆಂದು ದೈವ ಎಚ್ಚರಿಕೆಯನ್ನು ಕೊಟ್ಟಿದೆ. ಕಾಂತಾರದಲ್ಲಿ 'ಕೋರ್ಟಿಗೆ ಹೋಗ್ತಿ' ದೃಶ್ಯದ ಮಾದರಿಯಲ್ಲೇ ಗುಳಿಗ ದೈವ ಎಚ್ಚರಿಕೆ ನೀಡಿದೆ. ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ(Mangaluru Smart City work) ವಿರುದ್ದ ದೈವ ಮುನಿಸಿಕೊಂಡಿದೆ.'ಇದು ಅವನ ಮತ್ತು ನನ್ನ ಲೆಕ್ಕ, ಅವನು ಬರದಿದ್ರೆ ಲೆಕ್ಕ ನಾನು ನೋಡ್ತೀನಿ' ಅಂತ ಗುತ್ತಿಗೆದಾರನ ವಿರುದ್ದ ದೈವ ಮುನಿದಿದೆ. ಮಂಗಳೂರಿನ ಹಂಪನಕಟ್ಟೆಯ ಸ್ಮಾರ್ಟ್ ಸಿಟಿ ಮಲ್ಟಿ ಲೆವಲ್ ಪಾರ್ಕಿಂಗ್ ಕಾಮಗಾರಿ ವಿರುದ್ದ ದೈವ ಮುನಿಸನ್ನು ವ್ಯಕ್ತಪಡಿಸಿದೆ. ದೈವದ ಮಾತು ದಿಕ್ಕರಿಸಿ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಶರಾವು ಗುಳಿಗೆ ದೈವದ ಅಭಯ ಪಡೆಯದೇ ಕಾಮಗಾರಿ ಆರಂಭಿಸಿದ ಪರಿಣಾಮ ಕಾಮಗಾರಿಗೆ ವಿಘ್ನ ಉಂಟಾಗಿದೆ. ಮೂರು ವರ್ಷ ಕಳೆದರೂ 10% ಕೂಡ ಕಾಮಗಾರಿ ಪೂರ್ಣಗೊಂಡಿಲ್ಲ. ರಿಟೈನಿಂಗ್ ವಾಲ್ ಕುಸಿತ, ಮಣ್ಣು ಕುಸಿತ ಹಾಗೂ ಮಳೆ ನೀರು ತುಂಬಿಕೊಂಡು ಅವಘಡಗಳು ಸಂಭವಿಸಿವೆ. ಎರಡು ವರ್ಷಗಳ ಹಿಂದೆಯೇ ದೈವ ನುಡಿದಂತೆ ಕಾಮಗಾರಿಗೆ ತಡೆ ಬಂದಿದ್ದು, ಗಂಡಾಂತರವಿದೆ, ಹೊಣೆಗಾರರ ನೋಡಿಕೊಳ್ಳುವೆ ಎಂದು ದೈವ ಹೇಳಿತ್ತಂತೆ.
ಇದನ್ನೂ ವೀಕ್ಷಿಸಿ: ಬಿಹಾರದಲ್ಲಿ ಯಾವ ಜಾತಿಗೆ ಎಷ್ಟು ಮೀಸಲಾತಿ..? ಎಲ್ಲ ಬೇಡಿಕೆ ಈಡೇರಿಸಲು ಸಾಧ್ಯವೇ..?