ಬಿಹಾರದಲ್ಲಿ ಯಾವ ಜಾತಿಗೆ ಎಷ್ಟು ಮೀಸಲಾತಿ..? ಎಲ್ಲ ಬೇಡಿಕೆ ಈಡೇರಿಸಲು ಸಾಧ್ಯವೇ..?

ಎಸ್‌ಸಿ-ಎಸ್‌ಟಿ ಸಮುದಾಯಗಳಿಂದಲೂ ಮೀಸಲು ಹೆಚ್ಚಳಕ್ಕೆ ಹೋರಾಟ 
ಮೀಸಲು ಪ್ರಮಾಣ ಶೇಕಡಾ.50ನನ್ನು ಮೀರಬಾರದೆಂದ ಸುಪ್ರೀಂ ಕೋರ್ಟ್ 
ಶೇ.50ರಷ್ಟು ಮೀಸಲಾತಿಯಲ್ಲೇ ಬೇಡಿಕೆ ಈಡೇರಿಸಬೇಕಾದ ಅನಿವಾರ್ಯತೆ

First Published Jun 21, 2024, 12:23 PM IST | Last Updated Jun 21, 2024, 12:24 PM IST

ಬಿಹಾರದಲ್ಲಿ(Bihar) SC, ST, ತೀರಾ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳವನ್ನು ರದ್ದು ಮಾಡಲಾಗಿದೆ. ಶೇಕಡಾ 65ರಷ್ಟು ಮೀಸಲಾತಿ(Reservation) ನೀಡುವ ಆದೇಶವನ್ನು ಪಾಟ್ನಾ ಹೈಕೋರ್ಟ್‌ ರದ್ದು(Patna High Court) ಮಾಡಿದೆ. ಬಿಹಾರದ ವಿವಿಧ ಮೀಸಲಾತಿ ತಿದ್ದುಪಡಿಗಳು ಅನೂರ್ಜಿತ, ಖಾಲಿ ಹುದ್ದೆಗಳ ಮತ್ತು ಸೇವೆಗಳ ಮೀಸಲಾತಿ (ತಿದ್ದುಪಡಿ) ಕಾಯ್ದೆ-2023, ಪ್ರವೇಶಾತಿ (ಶೈಕ್ಷಣಿಕ ಸಂಸ್ಥೆಗಳ) ಮೀಸಲಾತಿ (ತಿದ್ದುಪಡಿ)ಕಾಯ್ದೆ-2023, 14,15, 16ನೇ ವಿಧಿಯಲ್ಲಿ ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ತೀರ್ಪು ನೀಡಿದೆ. ಪಾಟ್ನಾ ಹೈಕೋರ್ಟ್ ತೀರ್ಪಿನಿಂದ ಹಲವು ರಾಜ್ಯಗಳಲ್ಲಿ ಸಂಚಲನ ಮೂಡಿದೆ. ಕರ್ನಾಟಕದಲ್ಲೂ ಮೀಸಲಾತಿ ಹೆಚ್ಚಳ ಮಾಡಬೇಕೇಂಬ ಬೇಡಿಕೆ ಹಿನ್ನೆಲೆ ಹಿಂದಿನ ಸರ್ಕಾರಗಳು ತೆಗೆದುಕೊಂಡ ನಿರ್ಣಯಗಳಿಗೂ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಮೀಸಲಾತಿ ಹೆಚ್ಚಳ ಶೇಕಡಾ 50ರ ಗಡಿ ಮೀರದಂತೆ ಎಚ್ಚರಿಕೆ ನೀಡಲಾಗಿದೆ. 

ಇದನ್ನೂ ವೀಕ್ಷಿಸಿ:  ಪ್ರಭಾವಿಗಳಿಗೂ ತಟ್ಟುತ್ತಾ ಪೊಲೀಸರ ‌ತನಿಖೆ ಬಿಸಿ..? ದರ್ಶನ್ ಜೊತೆ ಮಾತಾಡಿದ್ದು ಏನು ಮತ್ತು ಯಾಕೆ?