ರಾಜಕೀಯ ತಿರುವು ಪಡೆದ ವೇಣುಗೋಪಾಲ್‌ ಹತ್ಯೆ ಪ್ರಕರಣ: ಇಂದು ಸಾಂತ್ವನ ಹೇಳಲಿರುವ ಬಿಜೆಪಿ ನಿಯೋಗ

ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಇಂದು ಬಿಜೆಪಿ ನಿಯೋಗ ಭೇಟಿ ನೀಡಿ, ಸಾಂತ್ವನ ಹೇಳಲಿದೆ.

First Published Jul 11, 2023, 9:40 AM IST | Last Updated Jul 11, 2023, 9:40 AM IST

ಮೈಸೂರು: ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ (Venugopal Murder) ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಆತನ ಹತ್ಯೆ ಖಂಡಿಸಿ ಸರ್ಕಾರದ ವಿರುದ್ಧ ಸಮರಸಾರಲು ಬಿಜೆಪಿ(BJP) ಮುಂದಾಗಿದೆ. ಇಂದು ವೇಣುಗೋಪಾಲ್‌ ಮನೆಗೆ ಬಿಜೆಪಿ ನಾಯಕರು ಭೇಟಿ ಕೊಡಲಿದ್ದಾರೆ. ಅಲ್ಲದೆ ಸದನದಲ್ಲೂ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿಬೀಳಲಿದ್ದಾರೆ. ಜುಲೈ 8 ರಂದು ಹನುಮ ಜಯಂತಿ(Hanuma Jayanthi) ವೇಳೆ ಗಲಾಟೆಯಾಗುತ್ತದೆ. ಬೈಕ್‌ ನಿಲ್ಲಿಸುವ ಹಾಗೂ ಪುನೀತ್‌ ಫೋಟೋ(Punith photo) ಇಡುವ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗ್ತಿದೆ. ನಂತರ ರಾಜೀ ಪಂಚಾಯಿತಿ ಮಾಡಲು ಕರೆಸಿ, ಬಾಟಲಿಯಿಂದ ಹೊಡೆದು, ಇರಿದು ಕೊಲೆ ಮಾಡಲಾಗಿದೆ. ಇಂದು ಸಿ.ಟಿ.ರವಿ(CT Ravi) ನೇತೃತ್ವದ ಬಿಜೆಪಿ ನಿಯೋಗ ಭೇಟಿ ನೀಡಿ, ಸಾಂತ್ವನ ಹೇಳಲಿದೆ. 

ಇದನ್ನೂ ವೀಕ್ಷಿಸಿ:  ಮಧ್ಯಪ್ರದೇಶದಲ್ಲಿ ಅಮಾನವೀಯ ಘಟನೆ: ಹೊಡೆದ್ರು, ಬಡಿದ್ರು ಕೊನೆಗೆ ಕಾಲನ್ನೇ ನೆಕ್ಕಿಸಿದ ಕಿರಾತಕರು..!