Today Horoscope: ಶುಕ್ರ ಗ್ರಹ ಇಂದು ಕನ್ಯಾ ರಾಶಿಗೆ ಪ್ರವೇಶ..ನಿಮ್ಮ ರಾಶಿಗಿದೆಯೇ ಶುಭ ಫಲ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ,ಗುರುವಾರ, ಪಂಚಮಿ ತಿಥಿ, ಮೃಗಶಿರ ನಕ್ಷತ್ರ.

ಇಂದು ಶುಕ್ರ ಗ್ರಹ ಕನ್ಯಾ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಇದು ಆತನಿಗೆ ನೀಚ ಸ್ಥಾನವಾಗಿದೆ. ಹೀಗಾಗಿ ಶುಕ್ರ ಶುಭ ಫಲಗಳನ್ನು ಕಳೆಯುತ್ತಾನೆ. ಈ ದಿನ ಮಿಥುನ ರಾಶಿಯವರಿಗೆ ಸೌಖ್ಯ ಹಾಳಾಗಲಿದೆ. ಬಂಧುಗಳಲ್ಲಿ ಕಲಹ ಉಂಟಾಗಲಿದ್ದು, ಸ್ತ್ರೀ-ಪುರುಷರಲ್ಲಿ ಭಿನ್ನಾಭಿಪ್ರಾಯ ಬರಲಿದೆ. ದಾಂಪತ್ಯದಲ್ಲಿ ಅಸಮಾಧಾನ ಉಂಟಾಗಲಿದ್ದು, ಇಂದು ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ: ಹೈಕಮಾಂಡ್ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಸಿದ್ದು ಪರ ಇಬ್ಬರು ನಾಯಕರ ಬ್ಯಾಟಿಂಗ್!

Related Video