Asianet Suvarna News Asianet Suvarna News

ಯಾದಗಿರಿ ವೈದ್ಯರ ಯಶಸ್ವಿ ಚಿಕಿತ್ಸೆ, ಮತ್ತೊಮ್ಮೆ ಹುಟ್ಟಿಬಂದ ಕಂದಮ್ಮ ತಾಯಿ ಮಡಿಲಲ್ಲಿ ಕಿಲಕಿಲ

ಸುಮಾರು ಹತ್ತು ದಿನದ ಹಿಂದೆ ಹುಟ್ಟಿದ್ದ  ಮಗು ನೋಡೋದಕ್ಕೆ ತುಂಬಾನೇ ವಿಕಾರವಾಗಿತ್ತು.. ಹೆತ್ತವರೂ ಆ ಮಗುವನ್ನ ನೋಡಕ್ಕೆ ಭಯ ಪಡ್ತಿದ್ರು.. ಆದ್ರೀಗ ವೈದ್ಯರು ನೀಡಿರೋ ಚಿಕಿತ್ಸೆಯಿಂದ ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿದೆ. ಸದ್ಯ ಮಗು ಮತ್ತೊಮ್ಮೆ ಹುಟ್ಟಿ ಬಂದಿರೋದಕ್ಕೆ ಇಡೀ ಆಸ್ಪತ್ರೆಗೆ ಖುಷಿಯಲ್ಲಿದೆ. ಇದರ ಒಂದು ಝಲಕ್ ವಿಡಿಯೋನಲ್ಲಿ ನೋಡಿ

ಯಾದಗಿರಿ, [ಸೆ.13]: ಯಾದಗಿರಿ ತಾಲೂಕಿನ ಅಳಗೇರಾ ಗ್ರಾಮದ ರೇಣುಕಮ್ಮ ಜನ್ಮ ನೀಡಿದ ಮಗು ನೋಡೋದಕ್ಕೆ ತುಂಬಾನೇ ವಿಕಾರವಾಗಿತ್ತು.. ಹೆತ್ತವರೂ ಆ ಮಗುವನ್ನ ನೋಡಕ್ಕೆ ಭಯ ಪಡ್ತಿದ್ರು.. ಆದ್ರೀಗ ವೈದ್ಯರು ನೀಡಿರೋ ಚಿಕಿತ್ಸೆಯಿಂದ ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿದೆ. ಯಾದಗಿರಿ ಜಿಲ್ಲಾಸ್ಪತ್ರೆಯ ಮಕ್ಕಳ ವಿಶೇಷ ಚಿಕಿತ್ಸಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡೋದಕ್ಕೆ ವೈದ್ಯರ ತಂಡ ಮುಂದಾಗಿತ್ತು. ಜಿಲ್ಲಾಸ್ಪತ್ರೆಯ ಡಾ. ನಾರಾಯಣಪ್ಪ ಹಾಗೂ ಡಾ. ರಾಯಚೂರ್ಕರ್ ಮಾರ್ಗದರ್ಶನದಂತೆ ಡಾ. ಶಶಿಕಾಂತ ವಾಲಿ ಹಾಗೂ ತಂಡ ಚಿಕಿತ್ಸೆ ನೀಡೋದಕ್ಕೆ ಮುಂದಾಗಿತ್ತು. ಮೊದ್ಲಿಗೆ ಊದಿಕೊಂಡಿದ್ದ ಮಗುವಿನ ಗಂಟಲಿಗೆ ಪೈಪ್ ಅಳವಡಿಸಿ ಸರಾಗ ಉಸಿರಾಟಕ್ಕೆ ಅನುವುಮಾಡ್ಲಾಯ್ತು. ನಂತ್ರದಲ್ಲಿ ಔಷಧೋಪಚಾರ ಮಾಡಿ ಬಾವು ಇಳಿಯುವಂತೆ ಚಿಕಿತ್ಸೆ ನೀಡ್ಲಾಯ್ತು.. ಸದ್ಯ ಮಗು ಆರೋಗ್ಯವಾಗಿದ್ದು ಚಿಕಿತ್ಸೆ ನೀಡಿದ ವೈದ್ಯರಲ್ಲೂ ಖುಷಿ ತಂದಿದೆ..ವಿಡಿಯೋ ಝಲಕ್ ನೋಡಿ.

Video Top Stories