ಉಪನಗರ ರೈಲು ಯೋಜನೆಗೆ ವೃಕ್ಷಗಳ ಮಾರಣಹೋಮ: 2000ಕ್ಕೂ ಹೆಚ್ಚಿನ ಮರಗಳನ್ನ ಕತ್ತರಿಸಲು K-RIDE ಪ್ರಸ್ತಾಪ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ಹೋದ್ರು ಟ್ರಾಫಿಕ್ ಕಿರಿಕಿರಿ. ಸಂಚಾರ ದಟ್ಟಣೆ ನಿವಾರಣೆಗೆ ಹೊಸ ಯೋಜನೆ ರೂಪಿಸಲಾಗ್ತಿದೆ. ಆದರೆ ಈ ಯೋಜನೆ ಜಾರಿಗೆ ಮರಗಳ ಮಾರಣಹೋಮ ನಡೆಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.  
 

First Published Oct 24, 2023, 11:43 AM IST | Last Updated Oct 24, 2023, 11:43 AM IST

ಬೆಂಗಳೂರಿನಲ್ಲಿ ಟ್ರಾಫಿಕ್ ಕಡಿಮೆ‌ ಮಾಡುವ ನಿಟ್ಟಿನಲ್ಲಿ ಮೆಟ್ರೋಗೆ ಪೂರಕವಾಗಿ ಉಪನಗರ ರೈಲು ಯೋಜನೆ ಜಾರಿಗೊಳಿಸಲಾಗ್ತಿದೆ. 2025ರ ಅಕ್ಟೋಬರ್ ಒಳಗೆ ಕಾಮಗಾರಿ ಮುಗಿಸಲು ಆದೇಶ ನೀಡಲಾಗಿದೆ. ಈ ರೈಲು ಕಾರಿಡಾರ್ 4ರ ಕಾಮಗಾರಿ ಮಾರ್ಗದಲ್ಲಿ 2,000ಕ್ಕೂ ಹೆಚ್ಚು ಮರಗಳಿದ್ದು, ಅವುಗಳನ್ನೆಲ್ಲ ಕಡಿಯಬೇಕೆಂದು ಕೆ-ರೈಡ್ ಪ್ರಸ್ತಾಪ ಮಾಡಿದೆ. ಎರಡು ವರ್ಷಗಳ ಹಿಂದೆ ಕೆ-ರೈಡ್ ನಡೆಸಿದ ಸಮೀಕ್ಷೆಯಲ್ಲಿ 2,364 ಮರಗಳು ರೈಲು ಯೋಜನೆ ಜೋಡಣೆಗೆ ಅಡ್ಡಿಯಾಗಿರುವುದನ್ನು ಗುರುತಿಸಿತ್ತು. ಹೀಗಾಗಿ ಈಗ ಬಿಬಿಎಂಪಿ ಸಾರ್ವಜನಿಕರ ಅಭಿಪ್ರಾಯ ಕೇಳಿದೆ. ಈ ಸಬ್ ಅರ್ಬನ್ ರೈಲು  ಯೋಜನೆಗೆ ನಿಗದಿತ ಸಂಖ್ಯೆಯ ಮರಗಳನ್ನು ಕಡಿಯುವ ಪ್ರಸ್ತಾವನೆಯನ್ನು ಬಿಬಿಎಂಪಿ ಮುಂದಿಡಲಾಗಿದೆ. ರೈಲ್ ಇನ್ಫ್ರಾಸ್ಟಕ್ಚರ್ ಡೆವ್ಹಲಪ್‌ಮೆಂಟ್ ಕಂಪನಿ ಈ ಬಗ್ಗೆ ಪ್ರಸ್ತಾಪಿಸಿದೆ. ಕಾರಿಡಾರ್ - 4ರ ಉದ್ದೇಶಿತ ರೈಲು ಜೋಡಣೆಯು ಬೆಳ್ಳಂದೂರು, ಮಾರತಹಳ್ಳಿ, ಚೆನ್ನಸಂದ್ರ, ಜಕ್ಕೂರು, ಹೆಣ್ಣೂರು ಸೇರಿದಂತೆ ಮುಂತಾದ ಪ್ರಮುಖ ಪ್ರದೇಶ ಒಳಗೊಂಡಿದೆ. ನೀಲಗಿರಿ, ಮಾವು, ಹಲಸು, ಬೇವಿನ ಮರ ಸೇರಿದಂತೆ ಹಲವು ಜಾತಿಯ ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದೆ. ಇದಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದು, ಅಂದಾಜಿನ ಮೇಲೆ ಮರಗಳನ್ನ ಗುರುತಿಸಿ ನಂಬರ್ ಹಾಕೋದಲ್ಲ. ಸರಿಯಾದ ರೀತಿಯಲ್ಲಿ ಸರ್ವೇ ಮಾಡಿ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  ಉಗ್ರರ ಕ್ರೌರ್ಯ ತೆರೆದಿಟ್ಟ ಅಜಿತ್ ಹನಮಕ್ಕನವರ್: ಮಕ್ಕಳನ್ನ ಬಿಡದೇ ಕೊಚ್ಚಿ ಕೊಚ್ಚಿ ಕೊಂದರು..!