ಉಗ್ರರ ಕ್ರೌರ್ಯ ತೆರೆದಿಟ್ಟ ಅಜಿತ್ ಹನಮಕ್ಕನವರ್: ಮಕ್ಕಳನ್ನ ಬಿಡದೇ ಕೊಚ್ಚಿ ಕೊಚ್ಚಿ ಕೊಂದರು..!

ಇಂದಿಗೆ 17 ದಿನ.. ಇಸ್ರೇಲ್, ಹಮಾಸ್ ಯುದ್ಧ ಮಾತ್ರ ನಿಂತಿಲ್ಲ. ಸತತ 9 ದಿನದಿಂದ ಸುವರ್ಣ ನ್ಯೂಸ್ ಯುದ್ಧಭೂಮಿಯಿಂದ ವರದಿಯನ್ನು ನಿಮ್ಮ ಮುಂದೆ ತಂದಿಡುತ್ತಿದೆ. ಇಂದಿನ ವರದಿಯಲ್ಲಿ ಹಮಾಸ್ ಉಗ್ರರ ಕ್ರೌರ್ಯ ಬಯಲಾಗಿದೆ.
 

First Published Oct 24, 2023, 11:29 AM IST | Last Updated Oct 24, 2023, 11:29 AM IST

ಇದು ಕಿಬುತ್ಸ್ ಬಿ ಅರಿ ಎಂಬ ಗ್ರಾಮ.. ಗಾಜಾ ಗಡಿಯಿಂದ 2 ಕಿ.ಮೀಯಷ್ಟೇ ದೂರ. ಈ ಗ್ರಾಮದ ಜನಸಂಖ್ಯೆ ಒಂದು ಸಾವಿರ ಮಾತ್ರ.. 17 ದಿನದ ಹಿಂದೆ ಬೆಳ್ಳಂಬೆಳಗ್ಗೆ ಈ ಗ್ರಾಮಕ್ಕೆ ನುಗ್ಗಿದ್ದ 300 ಹಮಾಸ್(Hamas) ಉಗ್ರರು, ಇಡೀ ಊರನ್ನೇ ಸ್ಮಶಾನ ಮಾಡಿದ್ರು.. ರೈಫೆಲ್, ಬಾಂಬ್ ಅಷ್ಟೇ ಅಲ್ಲ ಮಚ್ಚು, ಕೊಡಲಿಯಿಂದಲೂ ದಾಳಿ ನಡೆಸಿ, ನೂರಕ್ಕೂ ಹೆಚ್ಚು ಜನರನ್ನು  ಕೊಂದ್ರು.. ಮಕ್ಕಳನ್ನ ಬಿಡದೇ ಒಂದೇ ಕುಟುಂಬದ ಆರು ಜನರನ್ನ ಕೊಚ್ಚಿ ಕೊಂದಿದ್ದಾರೆ ಪಾಪಿಗಳು. ಕಿಬುತ್ಸ್ ಬಿ ಅರಿ ಎಂಬ ಗ್ರಾಮದಲ್ಲಿ ಯಾರನ್ನೇ ಕೇಳಿದ್ರೂ ಹೇಳೋದು ಕಣ್ಣೀರ ಕಥೆಗಳನ್ನೇ.. ಈ ಊರಲ್ಲಿ ಪ್ರತಿ ಮನೆಯಲ್ಲೂ ಹೆಣ ಬಿದ್ದಿವೆ. ಸಿಕ್ಕಸಿಕ್ಕವರನ್ನ ಕೊಂದಿದ್ದಲ್ಲದೇ, ಮನೆಗಳನ್ನು RPG ಲ್ಯಾಂಚರ್ನಿಂದ ಧ್ವಂಸಗೊಳಿಸಿದ್ರು.. ಎನ್ಜಿಓನಲ್ಲಿ ಕೆಲಸ ಮಾಡ್ತಿದ್ದ ದಂಪತಿಯನ್ನ ಭೀಕರವಾಗಿ ಹತ್ಯೆಗೈದಿದ್ದಾರೆ. ಇಸ್ರೇಲ್ ಎಂದೂ ಈ ರೀತಿಯಾದ ದಾಳಿಯನ್ನ ನೋಡಿರಲಿಲ್ಲ. ಅಕ್ಟೋಬರ್ 7 ರಂದು ಇಸ್ರೇಲ್‌ನ(Israel) ಕಿಬುತ್ಸ್ ಬಿ(Kibbutz) ಅರಿ ಗ್ರಾಮದಲ್ಲಿ  ನೂರಾರು ಹತ್ಯೆ ನಡೆದಿದ್ದು, ಹಲವು ಜನ ನಾಪತ್ತೆಯಾಗಿದ್ದಾರೆ. ಈಗಾಗಲೇ ಈ ಗ್ರಾಮಕ್ಕೆ ರಕ್ಷಣೆಗಾಗಿ ಸೈನಿಕ ತಂಡ ಬಂದಿದ್ದು, ನೊಂದವರ ಕಣ್ಣೀರು ಒರೆಸ್ತಿದೆ. ಈ ಭಾಗದಲ್ಲಿ ಶವಗಳನ್ನ ಗುರುತಿಸಲಾಗದಷ್ಟು ಭೀಕರ ದಾಳಿ ನಡೆದಿದೆ.. ತಾಯಿ, ಮಗುವನ್ನ ಜೀವಂತವಾಗಿ ಸುಟ್ಟ ಉದಾಹರಣೆಗಳಿವೆ. ಈ ಅಮಾಯಕರ ಸಾವಿಗೆ ಉತ್ತರ ಕೊಡದೇ ಬಿಡಲ್ಲ ಅಂತಿದ್ದಾರೆ ಈ ಸೈನಿಕರು.

ಇದನ್ನೂ ವೀಕ್ಷಿಸಿ:  ಸ್ಮಶಾನವಾಗಿದೆ ಇಸ್ರೇಲಿನ ಕಿಬುತ್ಸ್ ಊರು: ಮಕ್ಕಳ ಹತ್ಯೆ ಇಸ್ರೇಲ್ ಸರ್ಕಾರವನ್ನೇ ಅಣುಕಿಸಿತ್ತಾ..?