ಗುಡ್ ಮಾರ್ನಿಂಗ್ ಕಿಡ್ಸ್ ಎಂದ ಹಾವು; ಶಿಕ್ಷಕರ ಜಾಣ್ಮೆಯಿಂದ ಮಕ್ಕಳೆಲ್ಲಾ ಬಚಾವು!

ಸರ್ಕಾರಿ ಶಾಲೆಗೆ ಬಂದ ಹಾವು; ಬೆಚ್ಚಿ ಬಿದ್ದ ಮಕ್ಕಳು; ತಕ್ಷಣ ಕಾರ್ಯಪ್ರವೃತ್ತರಾದ ಶಾಲಾ ಶಿಕ್ಷಕರು; ಉರಗ ಪ್ರೇಮಿಗೆ ಬುಲಾವ್; ಹಾವು ಸೆರೆ, ಕಾಡಿನಲ್ಲಿ ಬಿಡುಗಡೆ

First Published Jan 21, 2020, 6:43 PM IST | Last Updated Jan 21, 2020, 6:43 PM IST

ಗದಗ (ಜ.21): ಕಳೆದೆರಡು ತಿಂಗಳ ಹಿಂದೆ ಕೇರಳದ ಶಾಲಾ ಕೊಠಡಿಯಲ್ಲಿ ಹಾವು ಕಡಿದು  10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದ ಘಟನೆ ನಿಮಗೆ ನೆನಪಿರಬಹುದು. ಈಗ ಸರಕಾರಿ ಶಾಲೆಯೊಂದಕ್ಕೆ ಹಾವು ಎಂಟ್ರಿ ಕೊಟ್ಟ ಘಟನೆ ಗದಗ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ನಡೆದಿದೆ. 

ಶಾಲೆ ಪ್ರಾರಂಭವಾಗುವ ಸಮಯಕ್ಕೆ  ಐದು ಅಡಿ ಉದ್ದದ ಹಾವು ಎಂಟ್ರಿ ಕೊಟ್ಟಿದ್ದನ್ನ ಕಂಡ ವಿದ್ಯಾರ್ಥಿಗಳು ಕೆಲಕಾಲ ಭಯಭೀತರಾಗಿದ್ರು. 

ಇದನ್ನೂ ನೋಡಿ | ಈ ಮಹಿಳೆಯ ಧೈರ್ಯವನ್ನು ಮೆಚ್ಚಲೇಬೇಕು! ಕೊರಳಲ್ಲಿರುವುದು ಹಾರವಲ್ಲ, ಹಾವು!

ಇದನ್ನು ಕಂಡ ತಕ್ಷಣ ಎಚ್ಚೆತ್ತುಕೊಂಡ ಶಿಕ್ಷಕರು ತಕ್ಷಣ ಉರಗ ಪ್ರೇಮಿ ಸ್ನೇಕ್ ಕ್ಯಾಚರ್ ವಿನಯ್ ಪೂಜಾರಿಗೆ ಕರೆ ಮಾಡಿ ಹಾವನ್ನ ಹಿಡಿಸಿದರು, ನಂತರ ಸ್ನೇಕ್ ವಿನಯ್ ಹಾವನ್ನ ಕಾಡಿಗೆ ಬಿಡಲಾಯಿತು.