ಹಾವು ಕಚ್ಚಿದೆ ಎಂದರೂ ನಂಬದ ಶಿಕ್ಷಕಿ; 10 ವರ್ಷದ ಬಾಲಕಿ ಸಾವು
ಶಾಲೆಯಲ್ಲಿ ಹಾವು ಕಚ್ಚಿದೆ ಎಂದರೂ ನಂಬದ ಶಿಕ್ಷಕಿ; 10 ವರ್ಷದ ಬಾಲಕಿ ಸಾವು| ಉಗುರು ತಾಗಿ ಗಾಯವಾಗಿರಬೇಕು ಎಂದು ನಿರ್ಲಕ್ಷ್ಯ
ವಯನಾಡ್[ನ.22]: ಶಾಲೆ ಕೊಠಡಿಯಲ್ಲಿ ಹಾವು ಕಡಿದು ಶೆಹ್ಲಾ ಶೆರಿನ್ ಎಂಬ 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತೇರಿಯಲ್ಲಿ ನಡೆದಿದೆ.
ದುರದೃಷ್ಟಕರ ಸಂಗತಿಯೆಂದರೆ, ಹಾವು ಕಡಿದ ತಕ್ಷಣವೇ ಬಾಲಕಿ ಶಿಕ್ಷಕಿಗೆ ಮಾಹಿತಿ ನೀಡಿದ್ದಳು. ಆದರೆ, ಅದನ್ನು ಒಪ್ಪಲು ನಿರಾಕರಿಸಿದ್ದ ಶಿಕ್ಷಕಿ ಶಿಜಿಲ್, ಉಗುರು ತಾಗಿ ಗಾಯವಾಗಿರಬೇಕು ಎಂದು ನಿರ್ಲಕ್ಷ್ಯತೋರಿದ್ದಾಳೆ. ಕಾಲು ಊದಿಕೊಂಡು ನೀಲಿ ಆಗಿದ್ದರೂ ಆಸ್ಪತ್ರೆಗೆ ದಾಖಲಿಸುವ ಬದಲು ತರಗತಿಯನ್ನು ಮುಂದುವರಿಸಿದ್ದಾಳೆ. ಅಲ್ಲದೇ ಬಾಲಕಿಯನ್ನು ತರಗತಿಯ ಹೊರಗೆ 45 ನಿಮಿಷಗಳ ಕಾಯಿಸಿದ್ದಾಳೆ. ಶಾಲಾ ಸಿಬ್ಬಂದಿಯ ಬಳಿ ಬೈಕ್ ಇದ್ದರೂ ಯಾರೂ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಲಿಲ್ಲ.
ರಸ್ತೆ ಮಧ್ಯದಲ್ಲೇ ಏಕಾ ಏಕಿ ಪ್ರತ್ಯಕ್ಷವಾದ ನಾಗರ ಹುತ್ತ
ಕೊನೆಗೆ ಬಾಲಕಿಯ ತಂದೆ ಬಂದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಪರಿಸ್ಥಿತಿ ಸಂಪೂರ್ಣ ಕೈ ಮೀರಿ ಹೋಗಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇದ್ದಾಗ ಬಾಲಕಿಯನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜಿಗೆ ದಾಖಲಿಸುವ ವೇಳೆ ಬಾಲಕಿ ಶೆಹ್ಲಾ ಶೆರಿನ್ ಸಾವಿಗೀಡಾಗಿದ್ದಾಳೆ.
ಇದೇ ವೇಳೆ ಘಟನೆಗೆ ಬಾಲಕಿಯ ಸಂಬಂಧಿಗಳು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಘಟನೆ ಸಂಬಂಧ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಚಿರತೆ ಆಯ್ತು ಈಗ ಹಾವಿನ ಸರದಿ!: ಫೋಟೋದಲ್ಲಿರುವ ಹಾವು ನಿಮ್ಗೂ ಕಾಣಿಸ್ತಾ?