ಏಷ್ಯಾನೆಟ್ ಸುವರ್ಣನ್ಯೂಸ್ ಕಚೇರಿಗೆ ಅಮೆರಿಕದ ಮ್ಯಾನೇಜ್‌ಮೆಂಟ್‌ ಸ್ಕೂಲ್‌ನ ವಿದ್ಯಾರ್ಥಿಗಳ ಭೇಟಿ

ಏಷ್ಯಾನೆಟ್ ಸುವರ್ಣನ್ಯೂಸ್ ಕಚೇರಿಗೆ ಅಮೆರಿಕಾದ  ನಾರ್ತ್‌ವೆಸ್ಟರ್ನ್ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ಭೇಟಿ ನೀಡಿದರು. 

Share this Video
  • FB
  • Linkdin
  • Whatsapp

ಏಷ್ಯಾನೆಟ್ ಸುವರ್ಣನ್ಯೂಸ್ ಕಚೇರಿಗೆ ಅಮೆರಿಕಾದ ನಾರ್ತ್‌ವೆಸ್ಟರ್ನ್ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ಭೇಟಿ ನೀಡಿದರು. ಅಸೋಸಿಯೇಟ್‌ ಡೈರೆಕ್ಟರ್‌ ಡಿನ್‌ ಪ್ರೊಫೆಸರ್ ಮೋಹನ್‌ ಬೀರ್‌ ಸಾಹಿನಿ ನೇತೃತ್ವದಲ್ಲಿ ಅಮೆರಿಕದ MBA ವಿದ್ಯಾರ್ಥಿಗಳಿಂದ 8 ದಿನ ಭಾರತ ಪ್ರವಾಸ ಹಮ್ಮಿಕೊಳ್ಳಲಾಗಿದ್ದು,ದೇಶದ ಹಲವು ಪ್ರತಿಷ್ಠಿತ ಕಂಪನಿಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಏಷ್ಯಾನೆಟ್‌ ಸುವರ್ಣನ್ಯೂಸ್‌ ಹಾಗೂ ಕನ್ನಡಪ್ರಭ ಕಚೇರಿಗೆ ಭೇಟಿ ನೀಡಿ ನ್ಯೂಸ್‌ ಚಾನೆಲ್‌ ಹಾಗೂ ದಿನಪತ್ರಿಕೆಗಳ ಕಾರ್ಯವೈಖರಿ ಕುರಿತು ಸಂವಾದ ನಡೆಸಿದರು. ಏಷ್ಯಾನೆಟ್‌ ಚೇರ್ಮನ್ ರಾಜೇಶ್‌ ಕಾಲ್ರಾ, ಬ್ಯುಸಿನೆಸ್‌ ಹೆಡ್‌ ಅಪ್ಪಚ್ಚು, ಏಷ್ಯಾನೆಟ್‌ ಸುವರ್ಣನ್ಯೂಸ್‌ ಹಾಗೂ ಕನ್ನಡಪ್ರಭ ಚೀಫ್ ಮೆಂಟರ್‌ ರವಿ ಹೆಗಡೆ, ಸುವರ್ಣನ್ಯೂಸ್‌ ಸಂಪಾದಕಾರದ ಅಜಿತ್‌ ಹನುಮಕ್ಕನವರ್‌ ಜತೆ ಸಂವಾದದಲ್ಲಿ ಭಾಗಿಯಾದರು .

Related Video