Asianet Suvarna News Asianet Suvarna News

ಮಣಿಪುರ ಮಾತ್ರ ಅಲ್ಲ..ಪ.ಬಂಗಾಳದಲ್ಲೂ ಪೈಶಾಚಿಕ ದೌರ್ಜನ್ಯ: ದೀದಿ ನಾಡಲ್ಲಿ ಸಾಲು ಸಾಲು ಹಿಂಸಾಚಾರ!?

ನರರಕ್ಕಸರ ಅಟ್ಟಹಾಸಕ್ಕೆ ಶಾಪ ಹಾಕಿತ್ತು ದೇಶ..!
ಮತ್ತೊಂದು ಕಡೆಯೂ ನಡೆದಿದೆ ಅಂಥದ್ದೇ ಅನಾಚಾರ!
ದೀದಿ ನಾಡಲ್ಲಿ ಮಹಿಳೆಯರ ಪಾಡು ಏನಾಗಿದೆ ಗೊತ್ತಾ..?
 

ಬರೀ ಮಣಿಪುರ ಮಾತ್ರವೇ ಅಲ್ಲ, ಪಶ್ಚಿಮ ಬಂಗಾಳದಲ್ಲೂ(West Bengal) ಕೂಡ ಮಹಿಳೆಯರ ಮೇಲೆ ಪೈಶಾಚಿಕ ದೌರ್ಜನ್ಯ ನಡೆದಿದೆ. ಆ ವಿಡಿಯೋ ಈಗ ವೈರಲ್ ಆಗಿದೆ. ರಾಜಸ್ಥಾನದಲ್ಲಿ ನಮ್ಮ ರಾಜ್ಯದ ಮಹಿಳೆಯರಿಗೆ ಮೊದಲು ರಕ್ಷಣೆ ಕೊಡೋ ಕೆಲಸವಾಗ್ಲಿ ಅಂದಿದ್ದಕ್ಕೆ, ಆ ಮಂತ್ರಿನೇ ವಜಾ ಮಾಡಿದಾರೆ. ಹೀಗೆ ದೇಶದ ಉದ್ದಗಲಕ್ಕೂ ಮಹಿಳೆಯರ ಮೇಲೆ ದೌರ್ಜನ್ಯ ನಡೀತಲೇ ಇದೆ. ಮಣಿಪುರದಲ್ಲಿ(Manipura) ನಡೆದ ದೌರ್ಜನ್ಯ ಇಡೀ ದೇಶವೇ ತಲೆತಗ್ಗಿಸೊ ಹಾಗೆ ಮಾಡಿತ್ತು. ಭಾರತದ ಮೂಲೆ ಮೂಲೆಯ ಜನರೂ ಕೂಡ, ಈ ಅನ್ಯಾಯವನ್ನ ಸಹಿಸಲಾಗದೆ ಆಕ್ರೋಶ ವ್ಯಕ್ತಪಡಿಸಿದ್ರು. ಆ ದುಷ್ಕೃತ್ಯ ಎಸಗಿದ ರಕ್ಕಸರು ಅರೆಸ್ಟ್ ಆಗಿದ್ದಾರೆ, ಅವರಿಗೆ ಶಿಕ್ಷೆಯಾಗಲಿದೆ ಅನ್ನೋ ಸುದ್ದಿ ಕೇಳಿ, ಸಂಭ್ರಮಿಸಿದ್ರು. ಅದರಲ್ಲೂ ಮಣಿಪುರದ ಮಹಿಳೆಯರಂತೂ ಆ ನರರಾಕ್ಷಸನ ಮನೆಯನ್ನೇ ಧ್ವಂಸ ಮಾಡಿ ಸಂಭ್ರಮಿಸಿದ್ರು. ಇನ್ನೂ ಕೆಲವೇ ದಿನಗಳ ಹಿಂದೆ, ಮಮತಾ ಬ್ಯಾನರ್ಜಿಯ(Mamata Banerjee) ಪಶ್ಚಿಮ ಬಂಗಾಳ ದೊಡ್ಡ ಸದ್ದು ಮಾಡಿತ್ತು. ಇಡೀ ದೇಶವೇ ಕಣ್ಣು ಬಾಯಿ ಬಿಟ್ಕೊಂಡು, ಆ ರಾಜ್ಯದ ಕಡೆ ನೋಡ್ತಿತ್ತು. ಅದರಕ್ಕೆ ಕಾರಣವಾಗಿದ್ದು, ಪಂಚಾಯತಿ ಎಲೆಕ್ಷನ್ ವೇಳೆ ನಡೆದಿದ್ದ ಘನಘೋರ ಅವಾಂತರ. ಜುಲೈ 19ರಂದು, ಪಶ್ಷಿಮ ಬಂಗಾಳದ ಮಾಲ್ಡಾ ಬಳಿಯ, ಪಕುವಾಹಾತ್ ಗ್ರಾಮದಲ್ಲಿ ನೂರಾರು ಮಂದಿ ಸೇರಿ ಮಹಿಳೆಗೆ(woman) ಥಳಿಸಿದ ವಿಡಿಯೋ ವೈರಲ್ ಆಗಿದೆ.

ಇದನ್ನೂ ವೀಕ್ಷಿಸಿ:  ಹೆಂಡತಿ ನೋಡಲು ಹೋದವನು ಸತ್ತುಹೋದ: ಗಂಡನನ್ನೇ ಕೊಂದು ಮಿಸ್ಸಿಂಗ್‌ ಕೇಸ್‌ ದಾಖಲಿಸಿದ ಪತ್ನಿ..!

Video Top Stories