BIG 3: ದುಡಿದ ಹಣ ಕೊಡದ ಸರ್ಕಾರ: ರೋಸಿ ಹೋದ ನೇಕಾರರು

ನಮ್ಮ ಸಮಸ್ಯೆ ಪರಿಹರಿಸಿ ಅಂತ ಬಿಗ್‌3ಗೆ ಪತ್ರ ಬರೆದು ಮನವಿ ಮಾಡಿದ ನೇಕಾರರು 

First Published Aug 9, 2022, 1:10 PM IST | Last Updated Aug 9, 2022, 1:10 PM IST

ಗದಗ(ಆ.09): ದೇಹವನ್ನ ದಂಡಿಸಿ ಬಟ್ಟೆಯನ್ನ ನೇಯುವ ನೇಕಾರರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಹೌದು, ಗದಗ ನಗರದ ಬೆಟಗೇರಿಯ ನರಸಾಪುರ ನೇಕಾರ ಕಾಲೋನಿಯ ಜನರು ಗದಗ ಜಿಲ್ಲೆಯಲ್ಲಿರುವ 262 ನೇಕಾರರಿಂದ ಕೆಎಫ್‌ ಮಾದರಿಯಲ್ಲಿ ಸರ್ಕಾರ ತ್ರಿಫ್ಟ್‌ ಫಂಡ್‌ ಮಿತವ್ಯಯ ನಿಧಿ ಸಂಗ್ರಹಿಸಿದೆ. ನೇಕಾರರಿಂದ ಸಂಗ್ರಹವಾದ 8 ಪರ್ಸೆಂಟ್‌ ನಿಧಿಗೆ ರಾಜ್ಯ ಸರ್ಕಾರ 4 ಪರ್ಸೆಂಟ್‌ ಹಾಗೂ ಕೇಂದ್ರ ಸರ್ಕಾರದಿಂದ ಸಂಗ್ರಹವಾದ 4 ಪರ್ಸೆಂಟ್‌ ಹಣವನ್ನ ಸೇರಿಸಲಾಗುತ್ತದೆ. 15 ವರ್ಷದ ನಂತರ ಸಂಗ್ರಹವಾದ ಹಣದ ಜೊತೆಗೆ ಸರ್ಕಾರದ ಹಣ ಸೇರಿದ ಬಡ್ಡಿ ಸಮೇತ ನೇಕಾರರಿಗೆ ತಲುಪಿಸಲಾಗುತ್ತದೆ. ಇದೀಗ ಹಣ ನೇಕಾರರ ಕೈಸೇರಬೇಕು. ಆದರೆ ದುಡಿದ ಹಣವನ್ನ ಸರ್ಕಾರ ನೀಡಿಲ್ಲ. ಹೀಗಾಗಿ ನಮ್ಮ ಸಮಸ್ಯೆಯನ್ನ ಪರಿಹರಿಸಿ ಅಂತ ಬಿಗ್‌ 3ಗೆ ಪತ್ರ ಬರೆದು ಮನವಿಯನ್ನ ಮಾಡಿದ್ದಾರೆ. 

ಬಾಲ್ಕನಿಯಿಂದ ದೂಡಿ ಕೊಲೆ: ಕರುಳಬಳ್ಳಿಯನ್ನು ಕೊಂದು ನಾಟಕವಾಡಿದ್ಳಾ ತಾಯಿ?

Video Top Stories