Asianet Suvarna News Asianet Suvarna News

News Hour: ಜೈಲಿನಲ್ಲೇ ಹೈವೋಲ್ಟೇಜ್‌ ಮೀಟಿಂಗ್‌, ದರ್ಶನ್‌ ಉಳಿಸೋಕೆ ಮುಂದಾದ ಕುಟುಂಬ!

ಆರೋಪಿ ನಂ.2 ದರ್ಶನ್ ಉಳಿಸೋಕೆ ಫ್ಯಾಮಿಲಿ ಮುಂದಾಗಿದ್ಯಾ ಎನ್ನುವ ಅನುಮಾನ ಬಂದಿದೆ. ಜೈಲಿನಲ್ಲೇ ಕುಟುಂಬಸ್ಥರ ಹೈವೋಲ್ಟೇಜ್ ಮೀಟಿಂಗ್ ನಡೆದಿದೆ. ಕಾನೂನು ಹೋರಾಟಕ್ಕೆ ಮೊದಲು ದರ್ಶನ್​ಗೆ ಕಂಡೀಷನ್‌ ಕೂಡ ಇಡಲಾಗಿದೆ.

ಬೆಂಗಳೂರು (ಜು.6): ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಆರೋಪಿ ನಂ.2 ಆಗಿರುವ ದರ್ಶನ್‌ರನ್ನ ಉಳಿಸಲು ಅವರ ಕುಟುಂಬ ಶತಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಜೈಲಿನಲ್ಲಿಯೇ ಹೈವೋಲ್ಟೇಜ್‌ ಮೀಟಿಂಗ್‌ ಆಗಿದೆ ಎನ್ನಲಾಗಿದ್ದು, ಕಾನೂನು ಹೋರಾಟಕ್ಕೂ ಮುನ್ನ ದರ್ಶನ್‌ಗೆ ಪ್ರಮುಖ ಕಂಡೀಷನ್‌ ಕೂಡ ಇಡಲಾಗಿದೆ.

ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಡಿ ಗ್ಯಾಂಗ್​ಗೆ ಸಂಕಷ್ಟ ಎದುರಾಗಿದೆ. ಇಂಚಿಂಚು ಸಾಕ್ಷ್ಯವನ್ನೂ ಕಾಮಾಕ್ಷಿಪಾಳ್ಯ ಪೊಲೀಸರು ಬಿಡುತ್ತಿಲ್ಲ. ಕೊಲೆ ಕೇಸ್ ಸಾಕ್ಷ್ಯಗಳ ಸಂಖ್ಯೆ 200ರ ಗಡಿ ತಲುಪುತ್ತಿದೆ. ಇದುವರೆಗೂ 180ಕ್ಕೂ ಹೆಚ್ಚು ವಸ್ತು ಸಾಕ್ಷ್ಯವಾಗಿ ಸಂಗ್ರಹ ಮಾಡಲಾಗಿದೆ. ಆರೋಪಿಗಳು ತಪ್ಪಿಸಿಕೊಳ್ಳದಂತೆ ಪೊಲೀಸರಿಂದ ತನಿಖೆ ನಡೆದಿದೆ.

ನಮ್ಮ 'ಡಿ ಬಾಸ್' ಸೇಫ್ ಮಾಡ್ತೀವಿ ಅಂತಾ ಪೊಲೀಸರಿಗೆ ಸರೆಂಡರ್ ಆದವರೇ ಈಗ ನಟ ದರ್ಶನ್‌ಗೆ ವಿಲನ್‌ಗಳು

ಪ್ರತ್ಯಕ್ಷದರ್ಶಿ, ಪರೋಕ್ಷ ಸಾಕ್ಷಿ ಹೊರತುಪಡಿಸಿ 180 ಸಾಕ್ಷ್ಯ ಸಿಕ್ಕಿದೆ. ಆರೋಪಿಗಳಿಗೆ ಶಿಕ್ಷೆಯಾಗಲೇಬೇಕೆಂದು ಕಟ್ಟುನಿಟ್ಟಿನ ತನಿಖೆ ಮಾಡಲಾಗುತ್ತಿದೆ. ಕೊಲೆ ಕೇಸ್​ ಸಾಕ್ಷ್ಯಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಮೊಬೈಲ್​ ರಿಟ್ರೈವ್​​ಗಾಗಿ ಅಹಮದಾಬಾದ್​​ FSLಗೆ ಕಳಿಸಲಾಗಿದೆ.
 

Video Top Stories