ದಲಿತ ಹಿಂದುಳಿದ ಜನರ ಪರವಾಗಿದ್ದೇವೆ ಎನ್ನುವ ಸಿದ್ದರಾಮಯ್ಯ ಹಣ ಲೂಟಿ ಹೊಡೆದ್ರು‌ ಮಾತನಾಡ್ತಿಲ್ಲ: ಶ್ರೀರಾಮುಲು

ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಶ್ರೀರಾಮುಲು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
 

First Published Jun 2, 2024, 2:08 PM IST | Last Updated Jun 2, 2024, 2:09 PM IST

ಬಳ್ಳಾರಿ: ದಲಿತ ಹಿಂದುಳಿದ ಜನರ ಪರವಾಗಿದ್ದೇವೆ ಎನ್ನುವ ಸಿದ್ದರಾಮಯ್ಯ ಇಷ್ಟೊಂದು ಹಣ ಲೂಟಿ ಹೊಡೆದ್ರು‌ ಮಾತನಾಡ್ತಿಲ್ಲ. ಮೊದಲು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದು ಸಿಬಿಐ ತನಿಖೆ ನಡೆಸಬೇಕೆಂದು ಮಾಜಿ ಸಚಿವ  ಶ್ರೀರಾಮುಲು(Sriramulu) ಹೇಳಿದ್ದಾರೆ. ವಾಲ್ಮೀಕಿ ನಿಗಮದ(Valmiki Corporation) ಅಕ್ರಮ ಹಣ ವರ್ಗಾವಣೆ(Iillegal money transfer) ವಿಚಾರದಲ್ಲಿ ಶ್ರೀರಾಮುಲು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತ ವರ್ಗಾವಣೆಯಾಗಿರೋದು ಸಿಎಂ ಮತ್ತು ಡಿಸಿಎಂ ವಿವೇಚನೆ ಇಲ್ಲದೇ ನಡೆಯಲು ಸಾದ್ಯವಿಲ್ಲ. 100% ಸಿದ್ದರಾಮಯ್ಯ ವಿವೇಚನೆಗೆ ಇದ್ದೇ ಹಣ ವರ್ಗಾವಣೆಯಾಗಿದೆ. ಎಸ್ಐಟಿ ತನಿಖೆಯಾದ್ರೇ, ಸಚಿವರ ವಿಚಾರಣೆ ಮಾಡಲು ಸಾಧ್ಯವಿಲ್ಲ ಹೀಗಾಗಿ ಸಿಬಿಐ ವಹಿಸಲು ಆಗ್ರಹಿಸಲಾಗುತ್ತಿದೆ. ನ್ಯಾಷನಲ್ ಬ್ಯಾಂಕ್‌ನಿಂದ ಹೈದರಾಬಾದ್ ಅಕೌಂಟ್ ವರ್ಗಾವಣೆಯಾಗ್ತದೆ. ಬಡವರಿಗೆ ಸೇರಬೇಕಾದ ಹಣ ಲೂಟಿ ಮಾಡಿದ್ರೇ ಕ್ಷಮಿಸೋಕೆ ಅಗೋದಿಲ್ಲ. ಇಷ್ಟೊಂದು ದೊಡ್ಡ ಹಣ ವರ್ಗಾವಣೆಯಾಗಬೇಕಂದ್ರೇ, ಅಕೌಂಟ್ಸ್ ಡಿಪಾರ್ಟ್ಮೆಂಟ್ ಮುಖ್ಯಸ್ಥರು, ಹಣಕಾಸು ಇಲಾಖೆ ಸಿಬ್ಬಂದಿ ಗೊತ್ತಿದ್ದೇ ವರ್ಗಾವಣೆಯಾಗಬೇಕು. ಇಲ್ಲವಾದ್ರೇ ಹಣಕಾಸು ಇಲಖೆಯ ನಿರ್ಲಕ್ಷ್ಯದಿಂದಲೇ ವರ್ಗಾವಣೆಯಾಗಿರಬೇಕು ಎಂದು ಶ್ರೀರಾಮುಲು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು, ನಾನು ಹೆಚ್ಚು ಮತಗಳ ಅಂತರದಿಂದ ಗೆಲ್ತೀನಿ: ಜಗದೀಶ್ ಶೆಟ್ಟರ್