ತುಂಗೆ ದೇವಸ್ಥಾನದ ತುದಿಗೆ: ಶೃಂಗೇರಿ ಶಾರದಾಂಬೆಗೆ ತಟ್ಟಿದ ಜಲಕಂಟಕ..!
ಚಿಕ್ಕಮಗಳೂರಿನ ಮಳೆಯ ಅಬ್ಬರ ಮುಂದುವರೆದಿದ್ದು, ಸತತ ಮೂರನೇ ದಿನವೂ ತುಂಗಾ ನದಿ ಪ್ರವಾಹ ವಿಕೋಪಕ್ಕೆ ಹೋಗಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನು ಶೃಂಗೇರಿ ಶಾರದಾಂಬೆ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಚಿಕ್ಕಮಗಳೂರು, [ಆ.09]: ಚಿಕ್ಕಮಗಳೂರಿನ ಮಳೆಯ ಅಬ್ಬರ ಮುಂದುವರೆದಿದ್ದು, ಸತತ ಮೂರನೇ ದಿನವೂ ತುಂಗಾ ನದಿ ಪ್ರವಾಹ ವಿಕೋಪಕ್ಕೆ ಹೋಗಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನು ಶೃಂಗೇರಿ ಶಾರದಾಂಬೆ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ದೇವಸ್ಥಾನದ ಆವರಣ, ತೋಟ, ಪಾರ್ಕ್ನೊಳಗೆ ನೀರು ನುಗ್ಗಿದೆ. ತೂಗುಸೇತುವೆಯ ಮೇಲೆ ಯಾರಿಗೂ ಹೋಗಲು ಅವಕಾಶ ನೀಡುತ್ತಿಲ್ಲ.