ಮಲ್ಪೆ ಬಂದರಿನಲ್ಲಿ ನೋಡಲು ಭಯಾನಕವಾಗಿ ಕಾಣುವ ಅಪರೂಪದ ಮೀನು ಪತ್ತೆ

ಉಡುಪಿಯ ಮಲ್ಪೆ ಬಂದರಿನಲ್ಲಿ ನೋಡಲು ಭಯಾನಕವಾಗಿ ಕಾಣುವ ಅಪರೂಪದ ಮೀನು ಪತ್ತೆಯಾಗಿದೆ. ತನ್ನ ಗಾತ್ರ ಮಾತ್ರವಲ್ಲ ನೋಡಲು ಕೂಡ ಭಯಾನಕವಾಗಿ ತೋರುವ ಈ ಮೀನು ಬಂದರಿನಲ್ಲಿ ನೆರೆದಿದ್ದ ಮೀನುಗಾರರ ಅಚ್ಚರಿಗೆ ಕಾರಣವಾಗಿದೆ.

Share this Video
  • FB
  • Linkdin
  • Whatsapp

ಉಡುಪಿ, (ಮಾ.11): ಉಡುಪಿಯ ಮಲ್ಪೆ ಬಂದರಿನಲ್ಲಿ ನೋಡಲು ಭಯಾನಕವಾಗಿ ಕಾಣುವ ಅಪರೂಪದ ಮೀನು ಪತ್ತೆಯಾಗಿದೆ. ತನ್ನ ಗಾತ್ರ ಮಾತ್ರವಲ್ಲ ನೋಡಲು ಕೂಡ ಭಯಾನಕವಾಗಿ ತೋರುವ ಈ ಮೀನು ಬಂದರಿನಲ್ಲಿ ನೆರೆದಿದ್ದ ಮೀನುಗಾರರ ಅಚ್ಚರಿಗೆ ಕಾರಣವಾಗಿದೆ. ಮೀನು ಹಿಡಿಯಲು ತೆರಳಿದ್ದ ಸೀ ಕ್ಯಾಪ್ಟನ್ ಎಂಬ ಲೈಲ್ಯಾಂಡ್ ಬೋಟಿನವರು ಬೀಸಿದ ಬಲೆಯಲ್ಲಿ ಭಾರಿಗಾತ್ರದ ಮೀನು ಸಿಲುಕಿದೆ. 

ಗರ್ಭಾವಸ್ಥೆಯಲ್ಲಿ ಮಹಿಳೆ ಮೀನು ತಿನ್ನೋದ್ರಿಂದ ಮಗುವಿಗೆ ತೊಂದರೆ ಇದೆಯೇ?

ಮಲ್ಪೆ ಬಂದರಿಗೆ ಬಂದು ಬೋಟಿನ ಮೀನುಗಳನ್ನು ಇಳಿಸುವ ವೇಳೆ ಬಲೆಯೊಳಗೆ ಬೃಹತ್ ಗಾತ್ರದ ಮೀನು ಪತ್ತೆಯಾಗಿದೆ. ಸ್ಥಳೀಯ ಭಾಷೆಯಲ್ಲಿ ಗರಗಸ ಮೀನು ಎಂದು ಕರೆಯಲಾಗುವ ಈ ಮೀನಿಗೆ ಗರಗಸ ಶಾರ್ಕ್ ಎಂದೂ ಹೇಳುತ್ತಾರೆ. ಹತ್ತು ಅಡಿಗೂ ಅಧಿಕ ಉದ್ದದ ಮೀನಿನ, ಬಾಯಿಂದ ಗರಗಸ ಮಾದರಿಯ, ಮೊನಚಾದ ಹಲ್ಲುಗಳು ಹೊರ ಬಂದಿವೆ. ಕ್ರೈನ್ ಮೂಲಕ ಎತ್ತಿ, ಸದ್ಯ ಈ ಮೀನಿನ ವಿಲೇವಾರಿ ಮಾಡಲಾಗಿದೆ. ಅಪಾಯದ ಅಂಚಿನಲ್ಲಿರುವ ಈ ಮೀನನ್ನು, ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳ ಅನುಸಾರ ಅನುಬಂಧ ೧ ರಲ್ಲಿ ಗುರುತಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

Related Video