‘ಯಾಕ್ರೀ ಸಚಿವರ ಕಾರ್ ಒಳಗೆ ಬಿಟ್ರಿ..?’ SIಗೆ SP ಅನುಪ್ ಶೆಟ್ಟಿ ಕ್ಲಾಸ್

‘ಯಾಕ್ರೀ ಕಾರ್ ಒಳಗೆ ಬಿಟ್ರಿ..?’ ಎಸ್‌ಪಿ ಅನುಪ್‌ ಶೆಟ್ಟಿ ಎಸ್‌ಐ ಹಾಗೂ ಇತರ ಪೊಲೀಸ್‌ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. 

Share this Video
  • FB
  • Linkdin
  • Whatsapp

ತುಮಕೂರು(ಜ.02): ‘ಯಾಕ್ರೀ ಕಾರ್ ಒಳಗೆ ಬಿಟ್ರಿ..?’ ಎಸ್‌ಪಿ ಅನುಪ್‌ ಶೆಟ್ಟಿ ಎಸ್‌ಐ ಹಾಗೂ ಇತರ ಪೊಲೀಸ್‌ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಯ ಜವಾಬ್ದಾರಿಯನ್ನು ಎಸ್‌ಪಿ ಅನುಪ್‌ ಶೆಟ್ಟಿಗೆ ವಹಿಸಲಾಗಿತ್ತು. ಯಾವುದೇ ವಾಹನಕ್ಕೂ ಮಠದ ಆವರಣ ಪ್ರವೇಶಿಸಲು ಅನುಮತಿ ಇರಲಿಲ್ಲ. ಹೀಗಿದ್ದರೂ ಸಚಿವ ವಿ. ಸೋಮಣ್ಣ ಅವರಿಗೆ ಎಸ್ಐಗೆ ಎಸ್ಪಿ ಅನುಪ್ ಶೆಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ತುಮಕೂರು: ಪ್ರಧಾನಿ ಮೋದಿಗೆ ಭದ್ರತೆ, ಉಳಿದುಕೊಳ್ಳಲು ಸಕಲ ವ್ಯವಸ್ಥೆ

ಮೂರು ದಿನದಿಂದ ನಾವಿಲ್ಲಿ ಭದ್ರತೆ ಮಾಡ್ತಿದ್ದೀವಿ. ಕಾರ್ ಬಿಡಬೇಡಿ ಎಂದು 10 ಸಲ ಹೇಳಿದ್ದೀನಿ ಎಂದು ಸಚಿವ ಸೋಮಣ್ಣ ಕಾರು ಒಳ ಬಿಟ್ಟಿದ್ದಕ್ಕೆ ಎಸ್ಪಿ ಗರಂ ಆಗಿದ್ದಾರೆ. ಸಚಿವ ಸೋಮಣ್ಣ ಇದ್ದ ಕಾರು ಮಠದೊಳಗೆ ತೆರಳಿದ್ದು, ಕಾರು ಒಳಬಿಟ್ಟ ಎಸ್ಐಗೆ ಎಸ್ಪಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೋದಿ ಆಗಮನ ಹಿನ್ನೆಲೆಯಲ್ಲಿ ಮಠದ ಸುತ್ತ ಪೊಲೀಸರ ಸರ್ಪಗಾವಲಿದ್ದು, ಸಚಿವರ ಕಾರು ಒಳ ಬಿಟ್ಟಿದ್ದಕ್ಕೆ ಅನುಪ್ ಶೆಟ್ಟಿ ಗರಂ ಆಗಿದ್ದಾರೆ. ಪೋನ್ ಮಾಡಿ ಹೇಳುವ ಯೋಗ್ಯತೆ ಇಲ್ವಾ..? ಟೈಮ್ ಪಾಸ್ ಮಾಡಲು ಬರ್ತಿರಾ ಇಲ್ಲಿ. ನಮ್ಮನ್ನು ಯಾಕೆ ಕರೆಸಿದ್ರ, ನೀವೇ ಮಾಡಿಕೊಳ್ಳಿ ಬಂದೋಬಸ್ತ್. ನಾವಿಲ್ಲಿ ಕಸ ಗುಡಿಸಲು ಬಂದಿದ್ದೇವಾ..? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಆಗಮನ: ಮಠದ ಮಕ್ಕಳಿಗೆ ಬೇಗ ಊಟ

Related Video