ತುಮಕೂರು: ಪ್ರಧಾನಿ ಮೋದಿಗೆ ಭದ್ರತೆ, ಉಳಿದುಕೊಳ್ಳಲು ಸಕಲ ವ್ಯವಸ್ಥೆ

ಪ್ರಧಾನಿ ಮೋದಿ ಆಗಮನಕ್ಕೆ ತುಮಕೂರು ಸಜ್ಜಾಗಿದೆ. ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಡೆಯಲಿರುವ ಕೃಷಿ ಸಮ್ಮಾನ್ ಕಾರ್ಯಕ್ರಮಕ್ಕೆ ಪ್ರಧಾನಿ ಆಗಮಿಸಲಿದ್ದಾರೆ. ಸಮಾರಂಭಕ್ಕೆ ಸಿದ್ಧತೆಗಳು ನಡೆದಿದ್ದು, ಸಿಎಂ ಯಡಿಯೂರಪ್ಪ ಸೇರಿ ಬಿಜೆಪಿ ಮುಖಂಡರು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

Share this Video
  • FB
  • Linkdin
  • Whatsapp

ತುಮಕೂರು(ಜ.02): ಪ್ರಧಾನಿ ಮೋದಿ ಆಗಮನಕ್ಕೆ ತುಮಕೂರು ಸಜ್ಜಾಗಿದೆ. ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಡೆಯಲಿರುವ ಕೃಷಿ ಸಮ್ಮಾನ್ ಕಾರ್ಯಕ್ರಮಕ್ಕೆ ಪ್ರಧಾನಿ ಆಗಮಿಸಲಿದ್ದಾರೆ. ಸಮಾರಂಭಕ್ಕೆ ಸಿದ್ಧತೆಗಳು ನಡೆದಿದ್ದು, ಸಿಎಂ ಯಡಿಯೂರಪ್ಪ ಸೇರಿ ಬಿಜೆಪಿ ಮುಖಂಡರು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

Add Asianetnews Kannada as a Preferred SourcegooglePreferred

ಮೋದಿ ಆಗಮನದಿಂದ ಆರಂಭಿಸಿ ಹಿಂದಿರುಗುವ ತನಕ ಸಕಲ ಸಿದ್ಧತೆಗಳನನ್ನು ಮಾಡಲಾಗಿದೆ. ರಾಜಭವನದಲ್ಲಿ ಮೋದಿ ಹಾಗೂ ತಂಡಕ್ಕೆ ಉಳಿಯುವ ವ್ಯವಸ್ಥೆ ಮಾಡಲಾಗಿದೆ. ಗುಣಮಟ್ಟದ ಹತ್ತಿಯ ಹಾಸಿಗೆ, ಚಾದರವನ್ನೂ ಅಳವಡಿಸಲಾಗಿದೆ. ಹಾಸಿಗೆ ಸಮೀಪವೇ ಬೆಡ್‌ ಲ್ಯಾಂಪ್‌ನ್ನೂ ಅಳವಡಿಸಲಾಗಿದೆ. ಆಪ್ತ ವೈದ್ಯ ಹಾಗೂ ಕಾರ್ಯದರ್ಶಿ ರೂಂಗೆ ಕಾಲಿಂಗ್‌ ಬೆಲ್ ಸಂಪರ್ಕ ಕಲ್ಪಿಸಲಾಗಿದೆ. ಊಟದ ಟೇಬಲ್, ಟಿವಿ, ವ್ಯಾಯಾಮಕ್ಕೆ ಸೈಕಲ್ ಸೇರಿ ಎಲ್ಲ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನಿ ಆಗಮನ: ಮಠದ ಮಕ್ಕಳಿಗೆ ಬೇಗ ಊಟ

ಅಧಿಕಾರಿಗಳನ್ನು 3 ಹಂತದಲ್ಲಿ ವಿಭಾಗ ಮಾಡಿದ್ದು, ಎಲ್ಲರಿಗೂ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಭದ್ರತಾ ಸಿಬ್ಬಂದಿಗೆ ಪ್ರಧಾನಿ ಉಳಿದುಕೊಂಡ ಸ್ಥಳದ ಸಮೀಪದ ಕಟ್ಟಡದಲ್ಲಿಯೇ ಉಳಿಯುವ ವ್ಯವಸ್ಥೆ ಮಾಡಲಾಗಿದೆ.

Related Video