ಪ್ರಧಾನಿ ಆಗಮನ: ಮಠದ ಮಕ್ಕಳಿಗೆ ಬೇಗ ಊಟ
ಊಟದ ಸಮಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಬೇಗನೆ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಮಠದ ಮಕ್ಕಳು ನಿಗದಿತ ಸಮಯಕ್ಕಿಂತ ಬೇಗನೇ ಊಟ ಮಾಡಿದ್ದಾರೆ.
ತುಮಕೂರು(ಜ.02): ಊಟದ ಸಮಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಬೇಗನೆ ಊಟದ ವ್ಯವಸ್ಥೆ ಮಾಡಲಾಗಿದೆ.
ಮೋದಿ ಆಗಮನದ ಹಿನ್ನೆಲೆಯಲ್ಲಿ ಮಠದ ಮಕ್ಕಳು ಸಮವಸ್ತ್ರ ಧರಿಸಿ, ತಟ್ಟೆ ಕೈಯಲ್ಲಿ ತಟ್ಟೆ ಹಿಡಿದು ಬೇಗನೇ ಊಟಕ್ಕೆ ಹೊರಟ ದೃಶ್ಯ ಮಠದಲ್ಲಿ ಕಂಡು ಬಂತು. ಕೆಂಪು ವಸ್ತ್ರ ಧರಿಸಿ ಸಾಲಾಗಿ ಹೊರಟ ಮಕ್ಕಳು., ತಮ್ಮ ತಮ್ಮ ಕೊಠಡಿಯಿಂದ ದಾಸೋಹ ಕಟ್ಟಡಕ್ಕೆ ಹೊರಟಿದ್ದಾರೆ.
ಮಂಡ್ಯ: ಡಿಸೆಂಬರ್ ಅಂತ್ಯಕ್ಕೆ ಗರಿಷ್ಠ ನೀರು ಸಂಗ್ರಹ, KRS ದಾಖಲೆ
ಊಟದ ಬಳಿಕ ಮಕ್ಕಳು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಸಿವಿನಲ್ಲಿಯೇ ಭಾಷಣ ಕೇಳುವಂತಾಗದಿರಲು ಮಕ್ಕಳಿಗೆ ಬೇಗ ಊಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ಊಟ ಸಮಯಕ್ಕೆ ಮೋದಿ ಕಾರ್ಯಕ್ರಮ ನಿಗದಿಯಾಗಿದೆ.
ತೆಂಗಿನ ತೋಟದಲ್ಲಿ ಕುಳಿತ ಪೋಷಕರು:
ಮಕ್ಕಳನ್ನು ನೋಡಲು ಮಠಕ್ಕೆ ಬಂದ ಪೋಷಕರ ಪರದಾಡುವಂತಾಗಿದೆ. ಮಠದಲ್ಲಿ ಓದುತ್ತಿರುವ ತಮ್ಮ ಮಕ್ಕಳನ್ನು ನೋಡಲು ಉತ್ತರ ಕರ್ನಾಟಕ ಭಾಗದಿಂದ ಬಂದಿರುವ ಪೋಷಕರು ಮಠದ ಒಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಮಠದ ಒಳಗೆ ಬಿಡದ ಹಿನ್ನೆಲೆಯಲ್ಲಿ ಪೋಷಕರು ಮಠದ ಪಕ್ಕದ ತೆಂಗಿನ ತೋಟದಲ್ಲಿ ಕುಳಿತಿದ್ದಾರೆ. ಪೋಷಕರು ಮೋದಿ ಕಾರ್ಯಕ್ರಮ ಮುಗಿದ ಬಳಿಕ ಮಕ್ಕಳನ್ನು ಭೇಟಿಯಾಗಲಿದ್ದಾರೆ.
ನೀರಿಲ್ಲದ ಬರದ ನಾಡಲ್ಲಿ ಮದ್ಯದ ಹೊಳೆ..!