'ಸಚಿವ ಆನಂದ ಸಿಂಗ್ ಬಳ್ಳಾರಿ ಜಿಲ್ಲೆಯಲ್ಲಿ ಇರೋದು ಬೇಕಾಗಿಲ್ಲ'

ಆನಂದ ಸಿಂಗ್ ನಮಗೆ‌ ಜಿಲ್ಲೆ ಬಿಟ್ಟುಕೊಡೋದಲ್ಲ ನಾವೇ ಅವರನ್ನು ಬಳ್ಳಾರಿಯಿಂದ ಕಳುಹಿಸಿಬಿಡುತ್ತೇವೆ| ಜಿಲ್ಲೆ ವಿಭಜನೆ ಮಾಡಿದ ಅಪಕೀರ್ತಿ ಇರುವ ವ್ಯಕ್ತಿ ನಮಗೆ ಉಸ್ತುವಾರಿಯಾಗಿ ಇರೋದು ಬೇಡ| ನಮ್ಮ ಜಿಲ್ಲೆಯಲ್ಲಿ ಅವರ ಇರೋದು ಬೇಕಾಗಿಲ್ಲ| ಆನಂದ ಸಿಂಗ್ ವಿರುದ್ಧ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ತೀವ್ರ ವಾಗ್ದಾಳಿ| 

First Published Feb 25, 2021, 12:37 PM IST | Last Updated Feb 25, 2021, 12:47 PM IST

ಬಳ್ಳಾರಿ(ಫೆ.25): ಜನಾರ್ದನ ರೆಡ್ಡಿ ಕಲಿಸಿದ ರಾಜಕೀಯ ಪಾಠವನ್ನು ಸಚಿವ ಆನಂದ ಸಿಂಗ್ ಸದ್ಭಳಕೆ  ಮಾಡಿಕೊಳ್ಳುತ್ತಿದ್ದಾರೆ. ಸದ್ಯ ರಾಜಕೀಯ ಆಟವನ್ನು ಆನಂದ ಸಿಂಗ್ ಚೆನ್ನಾಗಿ ಆಡುತ್ತಿದ್ದಾರೆ. ಇಲ್ಲೊಂದು ಮಾತು ಅಲ್ಲೊಂದು ಹೇಳುತ್ತಿದ್ದಾರೆ. ಆನಂದ ಸಿಂಗ್ ನಮಗೆ‌ ಜಿಲ್ಲೆ ಬಿಟ್ಟುಕೊಡೋದಲ್ಲ ನಾವೇ ಅವರನ್ನು ಬಳ್ಳಾರಿಯಿಂದ ಕಳುಹಿಸಿಬಿಡುತ್ತೇವೆ. ಜಿಲ್ಲೆ ವಿಭಜನೆ ಮಾಡಿದ ಅಪಕೀರ್ತಿ ಇರುವ ವ್ಯಕ್ತಿ ನಮಗೆ ಉಸ್ತುವಾರಿಯಾಗಿ ಇರೋದು ಬೇಡ. ನಮ್ಮ ಜಿಲ್ಲೆಯಲ್ಲಿ ಅವರ ಇರೋದು ಬೇಕಾಗಿಲ್ಲ ಎಂದು ಸಚಿವ ಆನಂದ ಸಿಂಗ್ ವಿರುದ್ಧ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. 

ಬಿಗ್‌ 3 ಇಂಪ್ಯಾಕ್ಟ್‌: ವಿಜಯಪುರದ ಸಿಂಥೆಟಿಕ್‌ ಟ್ರ್ಯಾಕ್‌ ಉದ್ಘಾಟನೆಗೆ ಮುಹೂರ್ತ ಫಿಕ್ಸ್‌

ಶ್ರೀರಾಮುಲು ಇದ್ರೆ ಜನಾರ್ದನ ರೆಡ್ಡಿ ಸಮಯದಲ್ಲಿ ಆದ ರೀತಿ ಬಳ್ಳಾರಿ ಅಭಿವೃದ್ಧಿ ಆಗುತ್ತದೆ. ರಾಮುಲು ನನ್ನ ತಮ್ಮ ಅವರು ಬಳ್ಳಾರಿ ಉಸ್ತುವಾರಿ ಆಗ್ತಾರೆ ಅಂದ್ರೇ ಬೇಡ ಅಂತೀನಾ?, ಅಯೋಧ್ಯೆಯಲ್ಲಿ ಶ್ರೀರಾಮ ಬಳ್ಳಾರಿಯಲ್ಲಿ ರಾಮುಲು ಉಸ್ತುವಾರಿ ಇದ್ರೇ ಚೆನ್ನಾಗಿರುತ್ತದೆ.  ಬಳ್ಳಾರಿ ಜಿಲ್ಲೆಯ ವಿಭಜನೆ ವಿರುದ್ಧ ಕೋರ್ಟ್‌ಗೆ ಹೋಗೋರಿಗೆ ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ.