Asianet Suvarna News Asianet Suvarna News

ಬಿಗ್‌ 3 ಇಂಪ್ಯಾಕ್ಟ್‌: ವಿಜಯಪುರದ ಸಿಂಥೆಟಿಕ್‌ ಟ್ರ್ಯಾಕ್‌ ಉದ್ಘಾಟನೆಗೆ ಮುಹೂರ್ತ ಫಿಕ್ಸ್‌

ಬಿಗ್‌ 3 ವರದಿ ಬಳಿಕ ಎಚ್ಚೆತ್ತ ಕ್ರೀಡಾ ಇಲಾಖೆ| ನಿರ್ಮಾಣವಾಗಿ 6 ತಿಂಗಳು ಕಳೆದರೂ ಉದ್ಘಾಟನೆಯಾಗಿರದ ಸಿಂಥೆಟಿಕ್‌ ಟ್ರ್ಯಾಕ್‌| ಮಾ. 1 ರಂದು ಸಿಂಥೆಟಿಕ್‌ ಟ್ರ್ಯಾಕ್‌ ಲೋಕಾರ್ಪಣೆ| 

Feb 25, 2021, 11:44 AM IST

ವಿಜಯಪುರ(ಫೆ.25): ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿ 6 ತಿಂಗಳು ಕಳೆದರೂ ಕೂಡ ಸಿಂಥೆಟಿಕ್‌ ಟ್ರ್ಯಾಕ್‌ ಉದ್ಘಾಟನೆಯಾಗಿರಲಿಲ್ಲ. ಇದರಿಂದ ಅನೇಕ ಕ್ರೀಡಾಪಟುಗಳಿಗೆ ಸಮಸ್ಯೆಯಾಗಿತ್ತು. ಇದರ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ಕಾರ್ಯಕ್ರಮದಲ್ಲಿ ವರದಿ ಪ್ರಸಾರವಾಗಿತ್ತು. 

ಪಡಿತರ ವಿತರಣೆಯಲ್ಲಿ ಭಾರೀ ಅಕ್ರಮ : ಮಂಕುಬೂದಿ ಎರಚಿ ವಂಚನೆ

ವರದಿ ಪ್ರಸಾರದ ಬಳಿಕ ಎಚ್ಚೆತ್ತ ಅಧಿಕಾರಿಗಳು ಸಿಂಥೆಟಿಕ್‌ ಟ್ರ್ಯಾಕ್‌ ಉದ್ಘಾಟನೆಗೆ ಮೂಹೂರ್ತ ನಿಗಧಿಪಡಿಸಿದ್ದಾರೆ. ಹೌದು, ಮಾ. 1 ರಂದು ಸಿಂಥೆಟಿಕ್‌ ಟ್ರ್ಯಾಕ್‌ ಲೋಕಾರ್ಪಣೆಯಾಗಲಿದೆ. ಬಿಗ್‌ 3 ವರದಿ ಬಳಿಕ ಸಿಂಥೆಟಿಕ್‌ ಟ್ರ್ಯಾಕ್‌ ಉದ್ಘಾಟನೆಯನ್ನ ಮಾಡಲು ಕ್ರೀಡಾ ಇಲಾಖೆ ಮುಂದಾಗಿದೆ.