ಡಿಕೆಶಿ ಪುತ್ರಿ ಮದುವೆ ಯಾವಾಗ, ಡೇಟ್ ಫಿಕ್ಸ್ ಆಯ್ತಾ?

ಡಿಕೆಶಿ ಮಗಳ ಮದುವೆ/ ಸದಾಶಿವನಗರದಲ್ಲಿ ಹೆಣ್ಣು ನೋಡುವ ಶಾಸ್ತ್ರ/ ಹಾರ ಬದಲಾಯಿಸಿಕೊಂಡ ಹೊಸ ಜೋಡಿ/ ಡಿಕೆಶಿ ಪುತ್ರಿಯ ಮದುವೆ ಯಾವಾಗ?

First Published Jun 15, 2020, 10:16 PM IST | Last Updated Jun 15, 2020, 10:16 PM IST

ಬೆಂಗಳೂರು(ಜೂ. 15)  ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬ ತಾಂಬೂಲ ಶಾಸ್ತ್ರ ಕಾರ್ಯಕ್ರಮ ನೆರವೇರಿಸಿತ್ತು. ಆ ಮೂಲಕ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಎಸ್‌ಎಂಕೆ ಅಳಿಯ, ದಿವಂಗತ ಉದ್ಯಮಿ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಅವರ ವಿವಾಹಕ್ಕೆ ಮುನ್ನುಡಿ ಬರೆಯಲಾಗಿತ್ತು. 

ಮದುವೆ ಮಾತುಕತೆ ಮುಗಿಸಿದ ಕುಟುಂಬ, ಚಿತ್ರಗಳು

ವಿವಾಹ ಸಂಪ್ರದಾಯದ ಮುಂದುವರೆದ ಭಾಗವಾಗಿ ಸೋಮವಾರ ಸದಾಶಿವನಗದಲ್ಲಿರುವ ಡಿಕೆಶಿ ನಿವಾಸಕ್ಕೆ ದಿವಂಗತ ಸಿದ್ಧಾರ್ಥ್ ಪತ್ನಿ, ಕೃಷ್ಣ ಪುತ್ರಿ ಮಾಳವಿಕಾ ಸೇರಿದಂತೆ ಎಸ್‌ಎಂಕೆ ಕುಟುಂಬ ತೆರಳಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದಾರೆ. ಈ ವೇಳೆ ಐಶ್ವರ್ಯ ಮತ್ತು ಅಮರ್ಥ್ಯ ಹಾರ ಬದಲಾಯಿಸಿಕೊಂಡಿದ್ದಾರೆ. 

 

 

 

Video Top Stories