Asianet Suvarna News Asianet Suvarna News

ಮಾದಪ್ಪನ ಭಕ್ತರಿಗೆ ಬೆಳ್ಳಿ ರಥ ಎಳೆಯುವ ಸೌಭಾಗ್ಯ: 20 ಲಕ್ಷ ರೂ. ವೆಚ್ಚದಲ್ಲಿ ರಥ ನಿರ್ಮಾಣ

ಪವಾಡ ಪುರುಷ ಮಲೆ ಮಾದಪ್ಪನ ಭಕ್ತರಿಗೆ ಶೀಘ್ರದಲ್ಲೇ ಬೆಳ್ಳಿರಥ ಸೇವೆಗೆ ಲಭ್ಯವಾಗಲಿದೆ. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ರಥ ನಿರ್ಮಾಣವಾಗಿದೆ.
 

ಇತಿಹಾಸ ಪ್ರಸಿದ್ದ ಪವಾಡಪುರುಷ ಮಲೆ ಮಾದಪ್ಪನ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಯಿಂದಲೂ ಭಕ್ತರ ದಂಡೇ ಹರಿದು ಬರುತ್ತೆ. ಬಂದಂತಹ ಭಕ್ತರು ದೇವರಲ್ಲಿ ನಾನಾ ಹರಕೆ ಹೊತ್ತು ಬರ್ತಾರೆ. ಈಗಾಗ್ಲೇ ಮಹದೇಶ್ವರ ಬೆಟ್ಟದಲ್ಲಿ ಮುಡಿ ಸೇವೆ, ಬಸವ ವಾಹನ, ಹುಲಿ ವಾಹನ, ಚಿನ್ನದ ರಥ ಸೇರಿದಂತೆ ಅನೇಕ ಸೇವೆಗಳಿವೆ. ಭಕ್ತರು ಕೂಡ ಕೂಡ‌ ಹರಕೆ ಹೊತ್ತು ತಮಗಿಷ್ಟವಾದ ಸೇವೆಗಳನ್ನು ನೇರವೆರಿಸಿಕೊಳ್ಳುತ್ತಾ ಹೋಗ್ತಿದ್ದಾರೆ. ಈ ನಡುವೆ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಭಕ್ತರು ಕೊಟ್ಟಂತಹ ಬೆಳ್ಳಿಯನ್ನು ಕರಗಿಸಿ ಬೆಳ್ಳಿ ರಥ ನಿರ್ಮಿಸಿದೆ. ಇದೀಗ ಮಾದಪ್ಪನ ಭಕ್ತರಿಗೆ ಬೆಳ್ಳಿ ರಥ ಎಳೆಯುವ ಸೌಭಾಗ್ಯವೂ ಕೂಡ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ. ಕಳೆದ ಎರಡು ವರ್ಷಗಳಿಂದಲೂ ಬೆಳ್ಳಿ ರಥ ನಿರ್ಮಾಣ ಕಾರ್ಯ ನಡೆದಿತ್ತು. ಸುಮಾರು 20 ಲಕ್ಷ ರೂ ವೆಚ್ಚದಲ್ಲಿ 533 ಕೆ.ಜಿ. ಬೆಳ್ಳಿ ಬಳಸಿ ರಥ ನಿರ್ಮಿಸಲಾಗ್ತಿದೆ. ಭಕ್ತರು ಹುಂಡಿಗೆ ಹಾಕುವ ಬೆಳ್ಳಿ ಹಾಗೂ ದಾನಿಗಳಿಂದಲೂ ಕೂಡ ಪಡೆದು ರಥ ನಿರ್ಮಿಸಲಾಗಿದೆ. ರಥಕ್ಕೆ ತಗುಲಿರುವ ಖರ್ಚು ವೆಚ್ಚವನ್ನು ದಾನಿಗಳೇ ನೀಡಿದ್ದಾರೆ. ಈ ಹಿನ್ನೆಲೆ ಪ್ರಾಧಿಕಾರ ಸಿಎಂ ಗಮನಕ್ಕೆ ತಂದು ಸೇವೆಗೆ ದರ ನಿಗದಿಪಡಿಸಲು ಚಿಂತನೆ ನಡೆಸಿದೆ. ನಿತ್ಯವೂ ಬೆಳ್ಳಿ ರಥದ ಸೇವೆ ಬೆಳಗ್ಗೆ 9 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ. ಇನ್ನುಳಿದಂತೆ ರಾತ್ರಿ ವೇಳೆ ಚಿನ್ನದ ರಥ ಸೇವೆ ನಡೆಯಲಿದೆ.