Asianet Suvarna News Asianet Suvarna News

Siddaramaiah: ಅಸಮಾನತೆ ವಿರುದ್ಧ ಹೋರಾಡುವುದನ್ನೇ ಬದುಕಾಗಿಸಿಕೊಂಡಿದ್ದ ಶ್ರೀನಿವಾಸ್ ಪ್ರಸಾದ್‌: ಸಿಎಂ

ಸಂಸದ ಶ್ರೀನಿವಾಸ ಪ್ರಸಾದ್ ದಲಿತ ದಮನಿತರ ಪರವಾದ ದಿಟ್ಟ ದನಿ
ಸಾಮಾಜಿಕ ನ್ಯಾಯದ ಪರ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆ
ನಾವು ಬೇರೆ ಪಕ್ಷದಲ್ಲಿದ್ದರೂ ಪರಸ್ಪರ ಗೌರವಪೂರ್ಣ ಸಂಬಂಧವಿತ್ತು
ಟ್ವೀಟ್ ಮೂಲಕ ಶ್ರೀನಿವಾಸ ಪ್ರಸಾದ್‌ ಕುಟುಂಬಕ್ಕೆ ಸಿಎಂ ಸಂತಾಪ

ಶ್ರೀನಿವಾಸ ಪ್ರಸಾದ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ(Condolences) ಸೂಚಿಸಿದ್ದಾರೆ. ಶ್ರೀನಿವಾಸ ಪ್ರಸಾದ್(Srinivasa Prasad) ಸಾವು ಆಘಾತಕ್ಕೀಡು ಮಾಡಿದೆ. ದಲಿತ ದಮನಿತರ ಪರವಾಗಿ ಅವರು ಇದ್ದರು. ಅಸಮಾನತೆ ವಿರುದ್ಧ ಹೋರಾಟ ಮಾಡಿದ್ರು. ಅಸಮಾನತೆ ವಿರುದ್ಧ ಹೋರಾಡುವುದನ್ನೇ ಬದುಕಾಗಿಸಿಕೊಂಡಿದ್ರು. ಕಾಂಗ್ರೆಸ್(Congress) ನೇತಾರರಾಗಿ ಕೆಲಸ ಮಾಡಿದ್ರು. ಪ್ರಗತಿಪರ ಚಿಂತನೆಯ ರಾಜಕೀಯ ನಾಯಕರಾಗಿದ್ರು ಎಂದು ಹೇಳುವ ಮೂಲಕ ಶ್ರೀನಿವಾಸ ಪ್ರಸಾದ್ ನಿಧನಕ್ಕೆ ಸಿಎಂ(Siddaramaiah) ಕಂಬನಿ ಮಿಡಿದಿದ್ದಾರೆ. ಇತ್ತೀಚೆಗೆ ಭೇಟಿಯಾಗಿ ಹಳೆಯ ನೆನಪು ಮೆಲುಕು ಹಾಕಿದ್ದೆವು. ಶ್ರೀನಿವಾದ್‌ ಪ್ರಸಾದ್ ಅವರ ಸಾವು ನನ್ನನ್ನು ಆಘಾತಕ್ಕೀಡು ಮಾಡಿದೆ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಸಾಯುವ ಮುನ್ನ ಕೊನೆಯದಾಗಿ ಪೇಪರ್‌ನಲ್ಲಿ ಬರೆದು ಕುಟುಂಬಸ್ಥರ ಬಳಿ ಶ್ರೀನಿವಾಸ್‌ ಪ್ರಸಾದ್‌ ಕೇಳಿದ್ದೇನು ?

Video Top Stories