Asianet Suvarna News Asianet Suvarna News

ಮಂಗಮ್ಮಾಯಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆದಿದ್ದ ಸಿದ್ದೇಶ್ವರ ಶ್ರೀಗಳು

ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಮಂಗಮ್ಮಾಯಿ ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ತಡೆದಿದ್ದರು.

ವಿಜಯಪುರದ ಮುಳವಾಡದ ಐಬಿಯಲ್ಲಿ  ಶ್ರೀಗಳ ವಾಸ್ಥವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಊರ ದೇವಿ ಜಾತ್ರೆ ಇರುತ್ತಿತ್ತು. ಪ್ರಾಣಿ ಬಲಿಯನ್ನು ಕೊಡುತ್ತಿದ್ದರು. ಈ ಸಂದರ್ಭದಲ್ಲಿ ಪೂಜ್ಯರು  ಹೀಗೆ ಪ್ರಾಣಿ ಹಿಂಸೆ ಮಾಡಬಾರದು, ಇದು ಮಹಾ ಪಾಪ ಎಂದು ಹೇಳಿದ್ದರು. ಮನುಷ್ಯರನ್ನು ಹಿಂಸೆ ಮಾಡಿದಾಗ ಹೇಗೆ ದುಃಖವಾಗುತ್ತದೆಯೋ ಹಾಗೇ ಪ್ರಾಣಿ ಹಿಂಸೆಯನ್ನು ಮಾಡುವುದು ಸರಿ ಅಲ್ಲ. ಹಿಂಸಾ ಮಾರ್ಗವನ್ನು ತ್ಯಾಗ ಮಾಡಬೇಕು ಎಂದು ಹೇಳಿದರು. ಅವರು ಹೇಳಿದ್ದನ್ನು ಕೇಳಿ ಅಲ್ಲಿನ ಜನರು ಅಹಿಂಸಾ ಮಾರ್ಗವನ್ನು ಬಿಟ್ಟರು. ಮಾತಿನಿಂದಲೂ ಕೂಡಾ ಹಿಂಸೆ ಆಗಬಾರದೆಂದು ಶ್ರೀಗಳು ಹೇಳಿದರು. ಹಾಗೆ ಕೆಟ್ಟ ದೃಷ್ಟಿಯಿಂದಲೂ ಕೂಡಾ ನೋಡಬಾರದೆಂದು ಹೇಳಿದ್ದರು.

ಮಕರ ಸಂಕ್ರಾಂತಿಯಂದು ಎಳ್ಳು ಬೆಲ್ಲದ ಪ್ರಾಮುಖ್ಯತೆ ಏನು?

Video Top Stories